ಕೋಲಾರ

ವಿದ್ಯುತ್ ಸ್ಪರ್ಶ; ವ್ಯಕ್ತಿ ಸಾವು

Published On :

ಶಿಡ್ಲಘಟ್ಟ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಷಿಸಿದ ಪರಿಣಾಮ, ವ್ಯಕ್ತಿಯೊಬ್ಬ ಸೇರಿ 2 ಕುರಿಗಳು ಮೃತಪಟ್ಟಿರುವ ಘಟನೆ ಸಂಭವಿಸಿದೆ. ತಾಲೂಕಿನ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯ ಕುದುಪಕುಂಟೆ ಗ್ರಾಮದ ವೆಂಕಟಸ್ವಾಮಿ(45) ಮೃತ ದುರ್ದೈವಿ.  ದಿಬ್ಬೂರಹಳ್ಳಿ ಚಿಂತಾಮಣಿಯ ರಸ್ತೆಯಲ್ಲಿರುವ ದೊಡ್ಡಮೋರಿ ಬಳಿಯಲ್ಲಿ ವೆಂಕಟಸ್ವಾಮಿ ಕುರಿ ಮೇಯಿಸುತ್ತಿದ್ದ ವೇಳೆಯಲ್ಲಿ  ಅಲ್ಲೇ ಹಾದುಹೋಗಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಈ ನಡುವೆ ಆಕಸ್ಮಿಕವಾಗಿ ಸ್ಪರ್ಷಿಸಿದ ವ್ಯಕ್ತಿ ಹಾಗೂ ಎರಡು ಕುರಿಗಳು ಸಾವನ್ನಪ್ಪಿವೆ. ಈ ಸಂಬಂಧ ದಿಬ್ಬೂರಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವ್ಯಕ್ತಿ ಶವ ಪತ್ತೆ
ಕೋಲಾರ: ನಗರದ ಟೇಕಲ್ ರಸ್ತೆಯ ನಂದಿನಿ ಬಾರ್ ಸಮೀಪ ಕಠಾರಿಪಾಳ್ಯ ನಿವಾಸಿ ಧರಣಿ(40)ಎಂಬುವವರ ಶವ ಪತ್ತೆಯಾಗಿದ್ದು ನಗರ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ನಗರಸಭೆ ನಿವೃತ್ತ ನೌಕರ ಉಮ್ಮತಪ್ಪ ಎಂಬುವವರ ಪುತ್ರ ಧರಣಿ ಸಾವನ್ನಪ್ಪಿರುವ ವ್ಯಕ್ತಿಯಾಗಿದ್ದು ಪೊಲಿಯೋ ರೋಗದಿಂದ ಅಂಗವಿಕಲನಾಗಿದ್ದನೆಂದು ಮೃತನ ಕಡೆಯವರು ತಿಳಿಸಿದ್ದಾರೆ. ಶವದ ಮೂಗು ಮತ್ತು ಕಿವಿಯಲ್ಲಿ ರಕ್ತ ಸೋರಿದ್ದು ಸಾವಿಗೆ ಕಾರಣ ತಿಳಿದು ಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಗರಸಭಾ ಸದಸ್ಯ ಮುರಳೀಗೌಡ, ಮಾಜಿ ಅಧ್ಯಕ್ಷ ಮಧುಸೂದನ್ ಮತ್ತಿತರರು ಭೇಟಿ ನೀಡಿ ಶವವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲು ಸಹಾಯ ಮಾಡಿದರು.

ನಿಧಿಗಾಗಿ ದೇವಾಲಯ ಕೆಡವಿದ ದುಷ್ಕರ್ಮಿಗಳು
ಮುಳಬಾಗಲು: ತಾಲೂಕಿನ ಜಿ.ಮಾರಾಂಡಹಳ್ಳಿ ಗ್ರಾಮದಲ್ಲಿ ನಿಧಿಗಾಗಿ ಅಮಾವಸ್ಯೆ ಶನಿವಾರ ಮಧ್ಯರಾತ್ರಿ ಪುರಾತನ ವೇಣುಗೋಪಾಲ ಸ್ವಾಮಿ ದೇವಾಲಯವನ್ನು ಜೆಸಿಬಿ ಮೂಲಕ ಹಾಳುಗೆಡವಿ ಕೆಡವಲಾಗಿದೆ. ದೇವಾಲಯ ಕೆಡುವುದನ್ನು ಕಂಡ ಅದೇ ಗ್ರಾಮದ ಜಮೀನಿನ ಯಜಮಾನ ವಿ.ಶಂಕರರೆಡ್ಡಿಯವರಿಗೆ ತಿಳಿಸಿದ್ದಾನೆ. ಚೊಕ್ಕಪಲ್ಲಿ ಗ್ರಾಮದ ಸರ್ವೆ 30ರಲ್ಲಿ ದೇವಾಲಯವಿದೆ. ಶಂಕರರೆಡ್ಡಿ ತಮ್ಮ ಗ್ರಾಮದ ಕೆಲವರನ್ನು ಕರೆದುಕೊಂಡು ಬಂದ ವೇಳೆಯಲ್ಲಿ ಅವರು ಪ್ರತಿಘಟಿಸಿ ಕಲ್ಲು ತೂರಾಟ ನಡೆಸಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯ ಜನವಿದ್ದನ್ನು ಕಂಡ ನಿಧಿಗಳ್ಳರು ಅಲ್ಲಿಂದ ಕಾಲು ಕಿತ್ತಿದ್ದಾರೆ. ಆದರೆ ಜಿಸಿಬಿ ವಾಹನ ನಡೆಸುತ್ತಿದ್ದ ತಾಲ್ಲೂಕಿನ ಕೂತಾಂಡಹಳ್ಳಿ ಗ್ರಾಮದ ವಿಜಯಕುಮಾರ್ ಎಂಬಾತನ್ನು ಗ್ರಾಮಸ್ಥರು ಪೊಲೀಸರು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


ಬೈಕ್ ಡಿಕ್ಕಿ: ವ್ಯಕ್ತಿಗೆ ಗಾಯ

ಶಿಡ್ಲಘಟ್ಟ: ಚಿಂತಾಮಣಿ ರಸ್ತೆಯ ಆಂಜನೇಯಸ್ವಾಮಿ ದೇವಸ್ಥಾನದ ಎದುರು ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ದ್ವಿಚಕ್ರ ವಾಹನ ಸವಾರನ ಅಜಾಗರೂಕತೆಯಿಂದ ವಾಹನ ಗುದ್ದಿದ ಪರಿಣಾಮ ಗಾಯಗೊಂಡ ಘಟನೆ ನಡೆದಿದೆ. ರಾಮಚಂದ್ರಪ್ಪ(70) ಗಾಂಧಿನಗರ ನಿವಾಸಿಯಾಗಿದ್ದು,  ಗಾಯಗೊಂಡ ವ್ಯಕ್ತಿ. ನಿನ್ನೆ ಸಂಜೆ ಚಿಂತಾಮಣಿ ರಸ್ತೆಯಲ್ಲಿರುವ ವೀರಾಂಜನೇಯ ಸ್ವಾಮಿ ದೇವಾಲಯ ಎದುರು ರಸ್ತೆ ದಾಟುತ್ತಿದ್ದ ರಾಮಚಂದ್ರಪ್ಪನನ್ನು ದ್ವಿಚಕ್ರ ವಾಹನ ಸವಾರ ಕೆ.ಎಲ್.ವಿಜಯಕುಮಾರ್ ಅಜಾಗರೊಕತೆಯಿಂದ ಓಡಿಸಿದ ಪರಿಣಾಮ ದ್ವಿ ಚಕ್ರವಾಹನ ತಗುಲಿ ರಾಮಚಂದ್ರಪ್ಪನಿಗೆ ತಲೆಯ ಎಡಭಾಗ, ಮೊಣಕಾಲು, ಎಡ ಕೈಬೆರಳುಗಳಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್‌ಗೆ ಸೇರಿಸಲಾಗಿದೆ. ಈ ಸಂಬಂಧ ಪುರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.