ಕೋಲಾರ

ಕಾರ್ತಿಕ ವಿಶೇಷ ಪೂಜೆ

Published On :

ಮುಳಬಾಗಲು: ಪಟ್ಟಣದ ಪುರಾಣ ಪ್ರಸಿದ್ಧ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಾವಿರಾರು ಭಕ್ತರು ದೇವರ ಮುಂದೆ ದೀಪ ಹಚ್ಚಿ ಭಕ್ತಿ ಪ್ರದರ್ಶಿಸಿದರು. ಪಟ್ಟಣದ ಶಿವಕೇಶವನಗರದ ಉದ್ಭವ ಶಿವಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.  ತಾಲೂಕಿನ ಪ್ರಸಿದ್ಧ ಶೈವ ಕ್ಷೇತ್ರಗಳಾದ ಆವಣೆ, ವಿರೂಪಾಕ್ಷಿ,ಗುಡಿಪಲ್ಲಿ, ಕುರುಡುಮಲೆ,ಮೂಡಿಯನೂರು ಗ್ರಾಮಗಳಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು.

ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿ ಶ್ರೀನಿವಾಸ್
ಕೋಲಾರ: ವಿದ್ಯುತ್ ಗುತ್ತಿಗೆದಾರರ ಜಿಲ್ಲಾ ಸಂಘದ ಅಧ್ಯಕ್ಷರಾಗಿ ವಿನಾಯಕ ಎಲೆಕ್ಟ್ರಿಕಲ್ಸ್ ಶ್ರೀನಿವಾಸ್ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಲೀಂ ಅಹ್ಮದ್, ಕಾರ್ಯದರ್ಶಿಯಾಗಿ ರಾಮಕೃಷ್ಣಪ್ಪ, ಜಂಟಿ ಕಾರ್ಯದರ್ಶಿಯಾಗಿ ಸಿ. ಶಂಕರರೆಡ್ಡಿ, ಖಜಾಂಚಿಯಾಗಿ ಜಿ.ಎಂ. ಕೃಷ್ಣಪ್ಪ, ಕಾರ್ಯಕಾರಿ ಸದಸ್ಯರಾಗಿ ವಿಶ್ವನಾಥರೆಡ್ಡಿ, ಕೆ. ರೆಡ್ಡಪ್ಪ, ಡಿ.ಎಲ್. ರಮೇಶ್‌ಬಾಬು, ಕೃಷ್ಣಪ್ಪ, ಆರ್.ಎಸ್. ಬಾಬು, ಮುರೇಶ್, ವಿ. ಪಾಂಡುರಂಗಯ್ಯ, ವಿ.ನಾಗರಾಜ, ಅಕ್ಬರ್‌ಪಾಷ, ರಾಣೋಜಿರಾವ್, ಸಾಚಿತ್‌ಖಾನ್, ಎಂ.ಸಿ. ಪ್ರಸನ್ನ, ಆಂಜನಪ್ಪ, ಮಹ್ಮದ್ ಶಫೀವುಲ್ಲ, ಸುಬ್ರಮಣಿ, ವೆಂಕಟೇಶ್ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.