ಕೋಲಾರ

ಡಾ.ಕಯ್ಯಾರ ಸಾಹಿತ್ಯದ ಅದಮ್ಯ ಚೇತನ

Published On :

ಕನ್ನಡಪ್ರಭ ವಾರ್ತೆ, ಕೋಲಾರ, ನ.4
ಸಾಹಿತಿ ಡಾ. ಕಯ್ಯಾರ ಕಿಞಣ್ಣ ರೈ ಪ್ರಚಾರಕ್ಕೆ ಆಸೆ ಪಡದೆ ಕನ್ನಡ ಸೇವೆ ಸಲ್ಲಿಸುತ್ತಿರುವ ಅದಮ್ಯ ಚೇತನ ಹಾಗೂ ಸಂಯಮದ ರುದ್ರ ಸ್ವರೂಪಿ ಎಂದು ಕೆಜಿಎಫ್ ಜೈನ್ ಕಾಲೇಜಿನ ಕನ್ನಡ ಉಪನ್ಯಾಸಕ ಶ್ರೀನಿವಾಸ್ ಪ್ರಸಾದ್ ಬಣ್ಣಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಕನ್ನಡ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಾಹಿತಿ ಡಾ. ಕಯ್ಯಾರ ಕಿಞಣ್ಣ ರೈ ಬದುಕು-ಬರಹ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.
ಕಯ್ಯಾರ ಕಿಞಣ್ಣ ರೈ ಅವರು ಕೇವಲ ಕಾಸರಗೂಡು ಹೋರಾಟ ಮತ್ತು ಮಕ್ಕಳ ಸಾಹಿತ್ಯ ರಚನೆಗೆ ಸೀಮಿತರಾದ ಸಾಹಿತಿ ಅಲ್ಲ. ಕನ್ನಡ ನಾಡನ್ನು ಕಟ್ಟುವ ವಿಚಾರದಲ್ಲಿ ಇತರರಿಗೆ ಮಾದರಿ ಆಗಿದ್ದಾರೆ. ರೈ ಎಂದರೆ ಸೈ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ ಎಂದು ತಿಳಿಸಿದರು.
ರೈ ಅವರು ಮನಸ್ಸು ಮಾಡಿದ್ದರೆ ನೂರಾರು ಸಾಹಿತ್ಯ ಕೃತಿಗಳನ್ನು ಪ್ರಕಟಿಸಬಹುದಾಗಿತ್ತು. ಆದರೆ, ಅವರ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮನಸ್ಸುಗಳು ವಿರಳವಾಗಿದ್ದರಿಂದ ಇತರರಂತೆ ಪ್ರಚಾರಕ್ಕೆ ಬರಲಿಲ್ಲವೆಂದು ಅಭಿಪ್ರಾಯಪಟ್ಟರು.
ರೈ ಅವರು ಬರೆದಿರುವ ಕೃತಿಗಳ ಸಂಖ್ಯೆಯನ್ನು ಆಧರಿಸಿ ವಿಮರ್ಶೆ ಮಾಡುವುದು ಸರಿಯಲ್ಲ, ಕಾಸರಗೂಡು ಹೋರಾಟದಲ್ಲಿ ಸಕ್ರಿಯವಾಗಿ ಅವರು ಭಾಗವಹಿಸದಿದ್ದಲ್ಲಿ ಗಡಿ ಪ್ರದೇಶದಲ್ಲಿ ಕನ್ನಡ ಜಾಗೃತಿ ಮೂಡುತ್ತಿರಲಿಲ್ಲವೆಂದು ತಿಳಿಸಿದರು.
ಕಯ್ಯಾರ ಕಿಇಣ್ಣ ರೈ ಅವರಿಗೆ ನಾಡಿನ ಜನತೆ ಇನ್ನಷ್ಟು ಶಕ್ತಿ ನೀಡಬೇಕಾಗಿತ್ತು, ಅವರನ್ನು ಕೇವಲ ಕಾಸರಗೂಡು ಹೋರಾಟಕ್ಕೆ ಮತ್ತು ಮಕ್ಕಳ ಸಾಹಿತ್ಯಕ್ಕೆ ಸಿಮೀತಗೊಳಿಸುವುದು ಸರಿಯಲ್ಲ, ಸರ್ಕಾರ ರೈ ಅವರ ಬದುಕು ಮತ್ತು ಬರಹವನ್ನು ಸಮಗ್ರವಾಗಿ ಅದ್ಯಯನ ಮಾಡಿ ಪಠ್ಯದಲ್ಲಿ ಸೇರಿಸುವುದು ಅಗತ್ಯ. ಇದರಿಂದ ಯುವ ಪೀಳಿಗೆಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.ರೈ ಅವರು ಕೇವಲ ವೈಯಕ್ತಿಕವಾದ ಪ್ರತಿಭೆ ಮಾತ್ರವಲ್ಲ, ಸಮಗ್ರ ಪ್ರತಿಭೆ. ಸಾಧನೆಯ ಹಿಂದೆ ವೇದನೆ ಇತ್ತಾದ್ದರಿಂದ ಉತ್ತಮ ಕೆಲಸ ಮಾಡಿದ್ದಾರೆ, ಸರ್ದಾರ್ ವಲ್ಲಬಾಯಿ ಪಟೇಲರ ರೀತಿಯಲ್ಲಿ ವ್ಯಕ್ತಿತ್ವ ರೂಪಿಸಿಕೊಂಡಿರುವ ರೈ ಅವರು ಪ್ರಾಥಃಸ್ಮರಣಿಯರ ಸಾಲಿಗೆ ಸೇರುತ್ತಾರೆಂದರು.
ರೈ ಅವರು ಕೇವಲ ಗಡಿ ಭಾಗಕ್ಕೆ ಸೇರಿದ ವ್ಯಕ್ತಿಯಲ್ಲ, ಸರಸ್ವತಿಯ ಸ್ವತ್ತು. ನಾಡಿನ ಜನತೆ ಇವರ ಆದರ್ಶ, ಮಾರ್ಗದರ್ಶನಲ್ಲಿ ಕನ್ನಡ ನೆಲ,ಜಲ ಹಾಗೂ ಸಾಹಿತ್ಯವನ್ನು ಬಲಿಷ್ಠಗೊಳಿಸುವ ಮೂಲಕ ಕನ್ನಡಕ್ಕೆ ಇನ್ನಷ್ಟು ಶಕ್ತಿ ತುಂಬಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಗೃಹ ರಕ್ಷಕ ದಳದ ಮಾಜಿ ಕಮಾಂಡೆಂಟ್, ತಾಲೂಕು ಕಸಾಪ ಮಾಜಿ ಅಧ್ಯಕ್ಷರೂ ಆದ ಬಿ.ಸುರೇಶ್, ಗಡಿ ಪ್ರದೇಶದಲ್ಲಿ ಕನ್ನಡ ಕಾರ್ಯಕ್ರಮಗಳು ಹೆಚ್ಚಾಗಿ ಮತ್ತು ಅರ್ಥಪೂರ್ಣವಾಗಿ ಆಚರಣೆಯಾಗಬೇಕು. ನಾಡಿನ ಸಾಹಿತಿಗಳನ್ನು ಪರಿಚಯಿಸುವ ಮೂಲಕ ಯುವ ಪೀಳಿಗೆಯಲ್ಲಿ ಕನ್ನಡದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವಂತೆ ಸಲಹೆ ನೀಡಿದರು.
ಕನ್ನಡ ಪರ ಸಂಘಟನೆಗಳು ಕನ್ನಡದ ಕಾರ್ಯಕ್ರಮಗಳನ್ನು ಸಾಂಕೇತಿಕವಾಗಿ ಹಮ್ಮಿಕೊಳ್ಳುವುದಕ್ಕಿಂತ ಗಡಿ ಭಾಗದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಶ್ರಮಿಸುವಂತೆ ತಿಳಿಸಿದರು.
ಹೆಚ್.ಆರ್. ಹರೀಶ್ ಡಾ. ಕಯ್ಯಾರ ಕಿಇಣ್ಣ ರೈ ಕುರಿತು ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಜೆ.ಜಿ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮಾಲೂರು ಅಶ್ವತ್ಥರೆಡ್ಡಿ ಪ್ರ್ರಾಸ್ತಾವಿಕವಾಗಿ ಮಾತನಾಡಿದರು.ಚಿನ್ಮಯ ವಿದ್ಯಾಲಯದ ಸಂಗೀತ ಶಿಕ್ಷಕಿ ಭಾವನಿ ಮತ್ತು ವೃಂದದಿಂದ ಗಾಯನ ಏರ್ಪಡಿಸಲಾಗಿತ್ತು. ರತ್ನಪ್ಪ ಸ್ವಾಗತಿಸಿ, ವಿನಯ್ ನಿರೂಪಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.