ಕೋಲಾರ

ದ್ವೇಷ: ವ್ಯಕ್ತಿ ಕೊಲೆ ಯತ್ನ

Published On :

ಕೆಜಿಎಫ್: ಹಳೇ ದ್ವೇಷದ ಹಿನ್ನೆಲೆಯಲ್ಲಿ ಸಾರ್ವಜನಿಕರ ಎದುರೇ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಕೊಲೆ ಮಾಡಲು ವಿಫಲ ಯತ್ನ ನಡೆಸಿರುವ ಘಟನೆ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಾಂಪಿಯನ್‌ರೀಫ್ ವ್ಯಾಪ್ತಿಯ ಇ.ಟಿ. ಬ್ಲಾಕ್ ನಿವಾಸಿ ಭರತ್ ಎಂಬುವರು ನಗರದ ಸಲ್ಡಾನ ವೃತ್ತದ ಬಳಿ ಬರುತ್ತಿದ್ದಾಗ ಪ್ರಕಾಶ್ ಎಂಬುವರು ತಡೆದು ನಾನು ಪ್ರೀತಿಸಿದ ಯುವತಿಯನ್ನು ನೀನು ಮದುವೆಯಾಗಿದ್ದೀಯ ಎಂದು ಹೇಳಿದಾದ ಭರತ್ ಈ ವಿಚಾರವನ್ನು ಇನ್ನು ಮುಂದೆ ಮಾತನಾಡಿದರೆ ನೆಟ್ಟಿಗಿರಲ್ಲ ಎಂದಾಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಭರತ್ ಒಂದು ಏಟು ಹೊಡೆದಿದ್ದಾರೆ.
ಕುಪಿತಗೊಂಡು ಪ್ರಕಾಶ್ ಸ್ಥಳದಿಂದ ಹೊರಟುಹೋಗಿದ್ದು ಸಂಜೆ 5 ಗಂಟೆಯ ಸಮಯದಲ್ಲಿ ತನ್ನ ಸಹಚರರಾದ ಪ್ರಭು ಮತ್ತು ಇನ್ನಿತರರನ್ನು ಕರೆತಂದು ಭರತ್‌ನನ್ನು ಕೊಲೆ ಮಾಡುವ ಉದ್ದೇಶದಿಂದ ಅಟ್ಟಿಸಿಕೊಂಡು ಬಂದಾಗ ಭರತ್ ಅವರಿಂದ ತಪ್ಪಿಸಿಕೊಂಡು ಇರುದಿಯಪುರಂ ಬಡಾವಣೆಯೊಳಗೆ ಬಂದಾಗ ಪ್ರಕಾಶ್ ಹಾಗೂ ಇತರರು ಒಂದು ಹರಿತವಾದ ರಾಡ್‌ನಿಂದ ಹೊಟ್ಟೆಗೆ ತಿವಿದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಮುಂದಾದಾಗ ಬಡಾವಣೆಯ ನಿವಾಸಿಗಳು ಜೋರಾಗಿ ಕಿರುಚಿಕೊಂಡಾಗ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಭರತ್‌ನನ್ನು ಸ್ಥಳಿಯ ನಿವಾಸಿಗಳು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದು ಭರತ್ ಬದುಕುಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ರಾಬರ್ಟ್‌ಸನ್ ಪೇಟೆ ಠಾಣಾ ಪೊಲೀಸರು ಪ್ರಕಾಶ್, ಪ್ರಭು ಹಾಗೂ ಇತರರ ವಿರುದ್ಧ ಕೊಲೆ ಪ್ರಯತ್ನ ದೂರು ದಾಖಲಿಸಿಕೊಂಡು ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.