ಕೋಲಾರ

ಬಾಳೆ ಕಂದು ಕೇಳುವವರಿಲ್ಲದೆ ಕಳೆಗುಂದಿದ ವ್ಯಾಪಾರ...

Published On :

ಗೌರಿಬಿದನೂರು: ಪ್ರತಿ ವರ್ಷದಂತೆ ಈ ಬಾರಿಯೂ ಬಾಳೆಕಂದು, ಮಾವಿನ ಎಲೆ ವ್ಯಾಪಾರಿಗಳು ಗ್ರಾಮೀಣ ಪ್ರದೇಶದ ರೈತಾಪಿ ವರ್ಗದಿಂದ ಬಾಳೆ ದಿಂಡು, ಮಾವಿನ ಎಲೆಗಳನ್ನು ಕಡಿಮೆ ದರಕ್ಕೆ ತಂದು ಪಟ್ಟಣ ನಗರ ಪ್ರದೇಶದಲ್ಲಿ ಮಾರಾಟ ಮಾಡಿ ಲಾಭ ಗಳಿಸುವುದು ವಾಡಿಕೆ. ಈ ಬಾರಿ ವ್ಯಾಪಾರಸ್ಥರು ತಂದ ಬಾಳೆಕಂದು, ಮಾವಿನ ಎಲೆ ವ್ಯಾಪಾರ ಕುಂದಿದ್ದು ತಂದ ಮಾಲಿನಲ್ಲಿ ಅರ್ಧ ಭಾಗದಷ್ಟೂ ಮಾರಾಟವಾಗಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ರೈತರು ಖುಷ್ಕಿ ಭೂಮಿಗಳಲ್ಲಿ ಬೇಸಾಯದ ಬೆಳೆಕೊಯ್ಲಿನಲ್ಲಿ ಮುಳುಗಿದ್ದು ಹಬ್ಬಕ್ಕೆ ಹೆಚ್ಚು ಆದ್ಯತೆ ನೀಡಿಲ್ಲ. ಪಟ್ಟಣ-ನಗರ ಪ್ರದೇಶದ ಜನರು ಮಾತ್ರ ಈ ಹಬ್ಬದ ವಸ್ತುಗಳಿಗೆ ಗ್ರಾಹಕರಾಗಿದ್ದು ಈ ಸಾಲಿನಲ್ಲಿ ಅನೇಕ ಕಾರಣಗಳಿಂದ ಅವರು ಸಹಾ ಕೊಳ್ಳಲು ಬರಲಿಲ್ಲ.  ಕಳೆದ ವರ್ಷ 2 ಜತೆ ಬಾಳೆಕಂದು, ಮಾವಿನ ಎಲೆ 40 ರು.ಗಳಿಂದ 60 ರು. ಗಳವರೆಗೆ ಮಾರಾಟವಾಗಿತ್ತು. ಆದರೆ ಈ ಬಾರಿ 20 ರು. ಗಳಿಗೆ ಮಾರಾಟವಾಗುತ್ತಿದ್ದರೂ ಕೇಳುವವರೇ ಇಲ್ಲ.
ಈ ಸಾಲಿನ ದೀಪಾವಳಿ ಹಬ್ಬ ಕಳೆಕುಂದಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದ್ದರೂ, ದೀಪಾವಳಿ ಎಂದಾಕ್ಷಣ ಮಕ್ಕಳಿಗೆ ಖುಷಿ ನೀಡುವುದು ಪಟಾಕಿಗಳ ಅಬ್ಬರ. ಪೋಷಕರನ್ನು ಪೀಡಿಸಿ ಪಟಾಕಿಗಳನ್ನು ಸುಡುವುದರೆಂದರೆ ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ. ಈ ಬಾರಿ ಅನೇಕ ಸಂಘಸಂಸ್ಥೆಗಳು, ಮಾಲಿನ್ಯ ನಿಯಂತ್ರಣ ಮಂಡಳಿ, ಶಬ್ದ ವಾಯು ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ ಪರಿಣಾಮ ಹಾಗೂ ಪಟಾಕಿ ಬೆಲೆಯೂ ಸಹ ಕಳೆದ ಸಾಲಿಗಿಂತ ದುಪ್ಪಟ್ಟು ಬೆಲೆಯಾಗಿರುವುದರಿಂದ ಪಟಾಕಿಗಳ ವ್ಯಾಪಾರವೂ ಕಡಿಮೆ ಯಾಗಿದೆ ಎಂದು ಪಟಾಕಿ ವ್ಯಾಪಾರಿಗಳು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪಟಾಕಿಗಳ ಅಬ್ಬರಕ್ಕೆ ತಮ್ಮ ಕಣ್ಣುಗಳನ್ನು ಕಳದುಕೊಂಡ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆ ಯಾಗಿರುವುದು ಸಂತಸದ ವಿಷಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.