ಕೋಲಾರ

ನರ್ಮ್; ಸಮರ್ಪಕ ಜಾರಿಯಾಗಲಿ

Published On :

ಕ.ಪ್ರ.ವಾರ್ತೆ   ಕೋಲಾರ   ನ.5
ಕೇಂದ್ರ ಸರ್ಕಾರದ ಜವಹರಲಾಲ್ ನೆಹರು ನಗರ ರಸ್ತೆ ಸಾರಿಗೆ ಯೋಜನೆಯಡಿ ಕೋಲಾರ ನಗರಕ್ಕೆ 35 ಹಾಗೂ ಕೆ.ಜಿ.ಎಫ್ ನಗರ ಪ್ರದೇಶದ ವ್ಯಾಪ್ತಿಗೆ 15 ಬಸ್ ಸೇರಿ ಒಟ್ಟು 50 ಬಸ್ಸುಗಳು ಮಂಜೂರಾಗಿದ್ದು ಸಾರ್ವಜನಿಕರ ಅನುಕೂಲಕ್ಕಾಗಿ ಸೂಕ್ತವಾದ ಸಮಗ್ರ ಯೋಜನೆ ಅನುಷ್ಠಾನಕ್ಕೆ ಎಲ್ಲರ ಸಹಕಾರ ಬೇಕೆಂದು ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಗರ ಸಾರಿಗೆ ಅನುಷ್ಠಾನ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ನಗರ ಪ್ರದೇಶಗಳಲ್ಲಿ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನೀಡಿರುವ ಬಸ್ಸುಗಳನ್ನು ಜನತೆ ಸದುಪಯೋಗ ಪಡಿಸಿಕೊಂಡು ತಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಾಗಬೇಕೆಂದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೋಲಾರ ಜಿಲ್ಲಾ ವಿಭಾಗಾಧಿಕಾರಿ ಬಿ.ಎಸ್. ಲಿಂಗರಾಜು ಮಾತನಾಡಿ ಮೊದಲನೇ ಮಾರ್ಗ ಬಸ್ ನಿಲ್ದಾಣದಿಂದ ಮೆಕ್ಕೆ ವೃತ್ತ, ಅರಹಳ್ಳಿ, ಪವರ್ ಗ್ರಿಡ್, ಮೂರಾಂಡಹಳ್ಳಿ, ಕೋಡಿಕಣ್ಣೂರು ಮೂಲಕ ಬಸ್ ನಿಲ್ದಾಣಕ್ಕೆ ಬರುತ್ತದೆ.
ಎರಡನೇ ಮಾರ್ಗ ಬಸ್ ನಿಲ್ದಾಣದಿಂದ ಕೀಲುಕೋಟೆ, ಷಾಹೀನ್ಷಾ ನಗರ, ಎಪಿಎಂಸಿ ಯಾರ್ಡ್, ಕೋಲಾರ ವಾಹನ ನಿಲ್ದಾಣ. ಮೂರನೇ ಮಾರ್ಗ ಬಸ್ನಿಲ್ದಾಣ, ಕ್ಲಾಕ್ಟ್ವರ್, ಟೇಕಲ್ ರಸ್ತೆ, ಮಿನಿ ಹೊಟೇಲ್, ಗೋಕುಲ್ ಕಾಲೇಜ್,  ಪವನ್ಕಾಲೇಜ್, ಎಪಿಎಂಸಿ ಯಾರ್ಡ್. ನಾಲ್ಕನೇ ಮಾರ್ಗ ಬಸ್ನಿಲ್ದಾಣ, ಅಮ್ಮವಾರಪೇಟೆ, ಮೆಕ್ಕೆ ವೃತ್ತ, ಕಾಮಧೇನಹಳ್ಳಿಗೆ ತಲುಪಲಿದೆ ಎಂದು ವಿವರಿಸಿದರು.
ಐದನೇ ಮಾರ್ಗ ಬಸ್ನಿಲ್ದಾಣ, ಅಮ್ಮವಾರಪೇಟೆ, ಮೆಕ್ಕೆ ವೃತ್ತ, ಟಮಕ ಇಂಡಸ್ಟ್ರಿಯಲ್ ಏರಿಯಾ, ಹೊನ್ನೇನಹಳ್ಳಿ. ಆರನೇ ಮಾರ್ಗ ಬಸ್ನಿಲ್ದಾಣ, ಜಯನಗರ, ಟೇಕಲ್ ಕ್ರಾಸ್, ಬೆಗ್ಲಹೊಸಹಳ್ಳಿ. ಏಳನೇ ಮಾರ್ಗ ಬಸ್ನಿಲ್ದಾಣ, ಜಯನಗರ, ಎಪಿಎಂಸಿ ಯಾರ್ಡ್, ಪೂಜಾ ಕಲ್ಯಾಣ ಮಂಟಪ. ಎಂಟನೇ ಮಾರ್ಗ ಬಸ್ನಿಲ್ದಾಣ, ಡೂಂ ಲೈಟ್ ಸರ್ಕಲ್, ಮೆಕ್ಕೆ ವೃತ್ತ, ಕೋರ್ಟ್ ವೃತ್ತ, ಜಿಲ್ಲಾಧಿಕಾರಿಗಳ ಕಚೇರಿ, ಟಮಕ, ಮೆಡಿಕಲ್ ಕಾಲೇಜ್, ವಡಗೂರು. ಒಂಬತ್ತನೇ ಮಾರ್ಗ ಬಸ್ ನಿಲ್ದಾಣ, ಮೆಕ್ಕೆ ವೃತ್ತ, ಟೋಲ್ಗೇಟ್, ರಹಮತ್ನಗರ, ಸಂಗೊಂಡಹಳ್ಳಿ.   ಈ ಮೇಲ್ಕಂಡ ಮಾರ್ಗಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಸ್ಸ್ಟಾಪ್ಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಮಾತನಾಡಿ ಸಾರಿಗೆ ಇಲಾಖೆಯವರು ಬಸ್ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸರಿಯಾದ ನಾಮಫಲಕಗಳನ್ನು ಹಾಕುವುದಿಲ್ಲ, ವೇಳಾ ಪಟ್ಟಿಯನ್ನು ಪ್ರಕಟಿಸುತ್ತಿಲ್ಲವೆಂದು ಆಕ್ಷೇಪಿಸಿದರಲ್ಲದೆ, ಸಾರ್ವಜನಿಕರಿಗೆ ಮೆಚ್ಚುಗೆಯಾಗುವಂತೆ ಪ್ರಾರಂಭದಲ್ಲಿ ಬಸ್ ಸಂಚಾರ ಆರಂಭಿಸಿ ನಂತರ ಸಂಸ್ಥೆಗೆ ನಷ್ಟ ಉಂಟಾಗುತ್ತಿದೆ ಎಂದು  ಬಸ್ಗಳನ್ನು ಸ್ತಬ್ಧಗೊಳಿಸುತ್ತಿದ್ದಾರೆಂದು ದೂರಿದರು. ನಗರದ ಕೆಲವೊಂದು ಸ್ಥಳಗಳಿಗೆ ವಿಶೇಷವಾಗಿ ಶಾಲಾ ಕಾಲೇಜು ಹಾಗೂ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ, ಚೊಕ್ಕಹಳ್ಳಿಗೆ ಬಸ್ಗಳನ್ನು ಹಾಕಬೇಕೆಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಿ.ಕೆ. ರವಿ ಸಾರ್ವಜನಿಕರ ಅಭಿಪ್ರಾಯದ ನಂತರ ಮಾತನಾಡಿ ನಗರದ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರ ಸಾರಿಗೆಯ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪತ್ರಕರ್ತ ಕೆ. ನರಸಿಂಹಮೂರ್ತಿ, ಸಿ.ಜೆ. ಮುರಳಿ ಮಾತನಾಡಿ, ಬಸ್ನಿಲ್ದಾಣದಿಂದ ಒಂದು ಮಾರ್ಗ ಕ್ರೀಡಾಂಗಣ, ಕೀಲುಕೋಟೆ ಹಾಗೂ ಅಂತರಗಂಗೆವರೆಗೂ ಬಸ್ಸುಗಳ ಏರ್ಪಾಟು ಮಾಡಬೇಕೆಂದರು. ಸಭೆಯಲ್ಲಿ ದಲಿತ ಮುಖಂಡರಾದ ಮುನಿರಾಜು, ವಿಜಯಕುಮಾರ್, ಕೃಷ್ಣಪ್ಪ ಹಲವಾರು ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಸಂಚಾರ ನಿಯಂತ್ರಣ ವ್ಯವಸ್ಥಾಪಕರಾದ ಹೆಚ್. ಚಂದ್ರಶೇಖರ್, ರಸ್ತೆ ಸಾರಿಗೆ ಇಲಾಖೆ ಅಧಿಕಾರಿಗಳಾದ ಅಂತೋನಿ ಜಾರ್ಜ್, ಆರ್. ಪ್ರಸಾದ್, ನಿಲ್ದಾಣ ಅಧಿಕಾರಿ ಕೆ.ವಿ. ಶಿವಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.