ನಮೋ ರ್ಯಾಲಿ ಕೂಪನ್ ವಿತರಣೆಗೆ ಚಾಲನೆ
ಚಿಂತಾಮಣಿ: ನರೇಂದ್ರಮೋದಿ ಬೆಂಗಳೂರಿಗೆ ಆಗಮಿಸುತ್ತಿರುವ ಸಭೆಗೆ 10 ಪ್ರವೇಶ ಶುಲ್ಕ ಕೂಪನ್ ವಿತರಣೆಗೆ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಂಗಳವಾರ ಪಟ್ಟಣದಲ್ಲಿ ಚಾಲನೆ ನೀಡಿದರು. ನ.17 ರಂದು ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶಕ್ಕೆ ಪ್ರವೇಶ ಶುಲ್ಕ 10ರ ಮುಖಬೆಲೆಯ ಕೂಪನ್ಗಳನ್ನು ಕಾರ್ಯಕರ್ತರಿಗೆ ನೀಡುವ ಮೂಲಕ ಚಾಲನೆ ನೀಡಿದರು. ತಾಲೂಕು ಬಿಜೆಪಿ ಅಧ್ಯಕ್ಷ ಮಂಜುನಾಥ್, ನಗರಸಭಾ ಸದಸ್ಟೆ
ಸುಜಾತಮ್ಮಶಿವಣ್ಣ, ಮುಖಂಡರಾದ ಮಾಡಿಕೆರೆ ಅರುಣ್, ಕುರುಟಹಳ್ಳಿ ಮಂಜುನಾಥ್, ಮಹೇಶ್, ಪ್ರದೀಪ್, ಶಂಕರ್ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದೀಪಾವಳಿ ಪ್ರಯುಕ್ತ ಸೀರೆ ವಿತರಣೆ
ಮಾಲೂರು: ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿರುವ ಗುಡಿಸಲುಗಳಲ್ಲಿ ವಾಸಿಸುವರಿಗೆ ಸಮ ಪಾಲು-ಸಮ ಬಾಳು ಸಿಕ್ಕಿದಾಗ ಮಾತ್ರ ದೇಶ ಅಭಿವೃದ್ಧಿಯಾಗಿದೆ ಎಂದು ಪರಿಗಣಿಸಲು ಸಾಧ್ಯ ಎಂದು ದಲಿತ ಮಾನವ ಭೂ ಹಕ್ಕುಗಳ ಹೋರಾಟ ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ಎ.ಕೆ. ವೆಂಕಟೇಶ್ ಹೇಳಿದರು. ಅವರು ತಾಲೂಕಿನ ಚಿಕ್ಕತಿರುಪತಿ ಗ್ರಾಮದ ಸರ್ಜಾಪುರ ರಸ್ತೆಯ ಸಮೀಪದಲ್ಲಿ ಗುಡಿಸಲಲ್ಲಿ ವಾಸಿಸುತ್ತಿರುವ ಬಡಮಹಿಳೆಯರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಸೀರೆಗಳನ್ನು ವಿತರಿಸಿ ಮಾತನಾಡುತ್ತ ಚಿನ್ನದ ಬೆಲೆಯಿರುವ ಚಿಕ್ಕತಿರುಪತಿ ಭಾಗದಲ್ಲಿ ಜಮೀನು ಉಳ್ಳವರು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಕೂಲಿ ಮಾಡುತ್ತಇರುವ ಇಲ್ಲಿನ ಗುಡಿಸಲು ನಿವಾಸಿಗಳು ಕಳೆದ 20 ವರ್ಷಗಳಿಂದ ಗುಡಿಸಲಿನಲ್ಲೇ ವಾಸವಾಗಿ,ಕೊಲಿ ಮಾಡಿ ಕಷ್ಟದಿಂದ ಜೀವನ ಸಾಗುತ್ತಿದ್ದಾರೆ. ಇಂತಹವರನ್ನು ಗುರ್ತಿಸಿ ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ದಲಿತ ಮಾನವ ಭೂ ಹಕ್ಕುಗಳ ಸಮಿತಿ ಮಾಡುತ್ತಿದೆ ಎಂದರು.ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಶಂಕರನಾರಾಯಣಗೌಡ, ವಕೀಲ ರಮೇಶ್, ಮುಖಂಡರಾದ ಸಿದ್ದಾರೆಡ್ಡಿ, ಗುರುಮೂರ್ತಿ ರೆಡ್ಡಿ,ರಾಮ್ ಪ್ರಸಾದ್, ಟಿ.ಕೆ. ಅಶ್ವಥ್ನಾರಾಯಣ್ ಗೌಡ, ಕೃಷ್ಣಮೂರ್ತಿ, ಟಿ.ವಿ. ಮುರಳಿ, ರಾಜು, ರಘು, ಸಂತೋಷ್, ಶ್ರೀನಿವಾಸ್, ಶಂಕರ್, ಜಯಮ್ಮ ಇದ್ದರು.
ಜೀತ ಪುನರ್ವಸತಿ ಸಭೆ
ಗುಡಿಬಂಡೆ: ತಾಲೂಕಿನಲ್ಲಿ ಅಧಿಕಾರಿಗಳಿಂದ ಗುರ್ತಿಸಲ್ಪಟ್ಟು ಬಿಡುಗಡೆಗೊಂಡಿರುವ ಜೀತದಾಳುಗಳಿಗೆ ಪುನರ್ವಸತಿ ಹಾಗೂ ಮೂಲ ಸೌಕರ್ಯ ಒದಗಿಸುವ ಬಗ್ಗೆ 7.ರಂದು ಸಭೆ ಏರ್ಪಡಿಸಲಾಗಿದೆ. ಪಟ್ಟಣದ ತಾಪಂ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ಸಭೆ ನಡೆಯಲಿದ್ದು, ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸೂಕ್ತ ಮಾಹಿತಿಯೊಂದಿಗೆ ಖುದ್ದಾಗಿ ಹಾಜರಾಗಬೇಕು ಎಂದು ತಹಸೀಲ್ದಾರ್ ಶೈಲಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

