ಕೋಲಾರ

ಇನ್ಸ್ಪೆಕ್ಟರ್, ಪೇದೆ ಅಮಾನತು

Published On :

ಕೋಲಾರ: ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಜಿಲ್ಲಾ ಅಪರಾಧ ನಿಗ್ರಹ ದಳದ ಪೊಲೀಸ್ ಇನ್ಸ್ ಪೆಕ್ಟರ್ ನಾರಾಯಣಸ್ವಾಮಿ ಮತ್ತು ಮುಖ್ಯಪೇದೆ ಸಿ.ಜಿ. ನಾರಾಯಣಸ್ವಾಮಿ ಎಂಬವರನ್ನು ಅಮಾನತು ಪಡಿಸಲಾಗಿದೆ. ಈ ಇಬ್ಬರ ವಿರುದ್ಧ ರಕ್ತ ಚಂದನ ಸಾಗಾಣೆ ಪ್ರಕರಣದಲ್ಲಿ ಬಂಧಿತನಾಗಿದ್ದ ರಿಯಾಜ್ಪಾಷ ನೀಡಿದ್ದ ದೂರಿನ ಮೇರೆಗೆ ಹಿಂದಿನ ಕೋಲಾರ ಡಿವೈಎಸ್ಪಿ ಶ್ರೀಹರಿ ಬರಗೂರು ತನಿಖೆ ಮಾಡಿ ನೀಡಿದ್ದ ವರದಿಯಲ್ಲಿ ಡಿಸಿಐಬಿಯ ಇನ್ಸ್ ಪೆಕ್ಟರ್ ನಾರಾಯಣಸ್ವಾಮಿ ಹಾಗೂ ಮುಖ್ಯಪೇದೆ ಸಿ.ಜಿ. ನಾರಾಯಣಸ್ವಾಮಿ ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದಿದ್ದ ಹಿನ್ನಲೆಯಲ್ಲಿ ಕೇಂದ್ರ ವಲಯದ ಐಜಿಪಿ ಅಮರ ಕುಮಾರ್ ಪಾಂಡೆ ಅವರು ಇನ್ಸ್ ಪೆಕ್ಟರ್ ಅವರನ್ನು ಅಮಾನತುಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಮುಖ್ಯಪೇದೆಯನ್ನು ಅಮಾನತುಪಡಿಸುವ ಅಧಿಕಾರ ಜಿಲ್ಲಾ ಎಸ್ಪಿ ಡಾ. ರಾಮ ನಿವಾಸ್ ಸಪಟ್ ಅವರಿಗೆ ನೀಡಲಾಗಿತ್ತು. ಐಜಿಪಿಯ ಸೂಚನೆ ಮೇರೆಗೆ ಮುಖ್ಯಪೇದೆಯನ್ನು ಅಮಾನತುಪಡಿಸಿ ಇಲಾಖೆಯ ವಿಚಾರಣೆ ಮುಗಿಯುವವರೆಗೆ ಕೇಂದ್ರ ಸ್ಥಾನ ತೊರೆಯದಂತೆ ಸೂಚಿಸಲಾಗಿದೆ.
ಯಾಜ್ಞವಲ್ಕ್ಯ ಮಹರ್ಷಿ ಜಯಂತಿ
ಕೋಲಾರ: ಜಿಲ್ಲಾ ಯಾಜ್ಞವಲ್ಕ್ಯ ಸೇವಾ ಟ್ರಸ್ಟ್ವತಿಯಿಂದ ನ.10ರಂದು ನಗರದ ಪಿ.ಸಿ.ಬಡಾವಣೆಯ ಗಾಯತ್ರಿ ಪ್ರಾರ್ಥನಾ ಮಂದಿರದಲ್ಲಿ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಹರ್ಷಿಗಳ ಜಯಂತ್ಯೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 5.30ಕ್ಕೆ ಸುಪ್ರಭಾತ ಸೇವೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಕಾಣ್ವ ಪೀಠಾಧಿಪತಿಗಳಾದ 1008 ವಿದ್ಯಾಭಾಸ್ಕರ ತೀರ್ಥರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬ್ರಾಹ್ಮಣ ಸಂಘದ ಅಧ್ಯಕ್ಷ ಟಿ.ಜಿ.ರಾಮಪ್ಪ ಪಾಲ್ಗೊಳ್ಳುವರು. 11.30ಕ್ಕೆ ಟ್ರಸ್ಟ್ನ ಉದ್ಘಾಟನೆ ನೆರವೇರಲಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.