ನಿರ್ಲಕ್ಷ್ಯ ಅಧಿಕಾರಿಗಳಿಗೆ ತರಾಟೆ
ಮಾಲೂರು: ತಮ್ಮ ಆದೇಶಕ್ಕೆ ಮರ್ಯಾದೆ ನೀಡದ ಪಂಚಾಯ್ತಿ ಅಧಿಕಾರಿಗಳನ್ನು ತಹಸೀಲ್ದಾರ್ ಡಾ. ಸುಧಾ ಅವರು ತರಾಟೆಗೆ ತೆಗೆದುಕೊಂಡ ಘಟನೆ ತಾಲೂಕಿನ ಲಕ್ಕೂರು ಗ್ರಾಮದಲ್ಲಿ ನಡೆದಿದೆ.
ಲಕ್ಕೂರು ಗ್ರಾಮದ ಶನಿಮಹಾತ್ಮ ಕಾಲೋನಿಯ ನಿವಾಸಿಗಳು ಆಗಸ್ಟ್ ತಿಂಗಳಲ್ಲಿ ತಹಸೀಲ್ದಾರ್ ಡಾ. ಸುಧಾ ಅವರಿಗೆ ಮನವಿ ಸಲ್ಲಿಸಿ ರಸ್ತೆ ಒತ್ತುವರಿಯಿಂದ ಅವ್ಯವಸ್ಥೆ ಆಗಿದ್ದು, ಸ್ಥಳ ಪರಿಶೀಲನೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಗ್ರಾಮಸ್ಥರ ಮನವಿಗೆ ಸ್ವಂದಿಸಿದ್ದ ತಹಸೀಲ್ದಾರ್ ಅವರು ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ತಿಳಿಸಿದ್ದರು. ಆದರೆ ಅವರ ಆದೇಶಕ್ಕೆ 3 ತಿಂಗಳಾದರೂ ಸ್ವಂದಿಸದ ಹಿನ್ನೆಲೆಯಲ್ಲಿ ಗ್ರಾಮದ ನಾಡ ಕಚೇರಿಗೆ ಭೇಟಿ ನೀಡಿದ್ದ ತಹಸೀಲ್ಜಾರ್ ಅವರಿಗೆ ಗ್ರಾಮಸ್ಥರು ಹಿಂದೆ ನೀಡಿದ್ದ ಮನವಿ ಬಗ್ಗೆ ನನೆಪಿಸಿದಾಗ ಅಧಿಕಾರಿಗಳ ನರವಿನಿಂದ ಸ್ಥಳ ಪರಿಶೀಲನೆ ನಡೆಸಿದರಲ್ಲದೇ ಹಿಂದೆ ಆದೇಶ ನೀಡಿದ್ದರೂ ಕಿಮ್ಮತ್ತು ನೀಡಿದಿದ್ದ ನಾಡಕಚೇರಿಯ ಕಂದಾಯ ಅಧಿಕಾರಿ ಶಂಕರನಾರಾಯಣ ಶೆಟ್ಟಿ ಹಾಗೂ ಕಾರ್ಯದರ್ಶಿ ಅಮರ್ ಶಂಕರ್ರನ್ನು ತರಾಟೆಗೆ ತೆಗೆದುಕೊಂಡ ತಹಸೀಲ್ದಾರ್ ಕೊಡಲೇ ರಸ್ತೆಯ ಸರ್ವೆ ನಡೆಸಬೇಕು ಹಾಗೂ ಒತ್ತುವರಿಯನ್ನು ಪೊಲೀಸರ ಸಹಕಾರ ಪಡೆದು ತೆರವುಗೊಳಿಸಬೇಕು ಎಂದು ಆದೇಶಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

