ಉದ್ಘಾಟನೆ ದಿನವೇ ಪ್ರತಿಭಟನೆ
ಶಿಡ್ಲಘಟ್ಟ: ಉದ್ಘಾಟನಾ ದಿನದಂದೇ ರೈಲ್ವೆ ಹಳಿಗಳ ಮುಂದೆ ಧರಣಿ ಕುಳಿತು ಕೆಲ ನಿಮಿಷಗಳ ಕಾಲ ರೈಲನ್ನು ತಡೆದ ಘಟನೆ ನಡೆಯಿತು.
3 ನೇ ಕಾರ್ಮಿಕ ನಗರಕ್ಕೆ ಪ್ರತ್ಯೇಕ ಕೆಳ ಸೇತುವೆ ನಿರ್ಮಾಣ ಮಾಡಬೇಕೆಂದು ಒತ್ತಾಯ ಪಡಿಸಿ ಗಾಂಧಿನಗರಕ್ಕೆ ಹೋಗುವ ಸೇತುವೆ ಮುಂದಿರುವ ಹಳಿಗಳ ಮೇಲೆ ಧರಣಿ ಕುಳಿತು ರೈಲನ್ನು ತಡೆದರು. ಕೊಡಲೆ ಸ್ಥಳಕ್ಕೆ ಆಗಮಿಸಿದ ರೈಲ್ವೆ ಸುರಕ್ಷತಾ ಸಿಬ್ಬಂದಿ ದರಣಿ ನಿರತರನ್ನು ತೆರವುಗೊಳಿಸಿದ ನಂತರ ವಿಶೇಷ ಅತಿಥಿಗಳು ಪ್ರಯಾಣಿಸುತ್ತಿದ್ದ ರೈಲು ಮುಂದೆ ಚಲಿಸಿತು. ಇದಕ್ಕೂ ಮುನ್ನ ರೈಲು ಆಗಮಿಸಿದಾಗ ರೈಲ್ವೆ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಜನ ಘೋಷಣೆಗಳನ್ನು ಕೂಗುತ್ತಾ ಪಟಾಕಿಗಳನ್ನು ಸಿಡಿಸಿ ಸಂಬ್ರಮಿಸಿದರು.
ಚಿಕ್ಕಬಳ್ಳಾಪುರ-ಕೋಲಾರದ ನಡುವಿನ ಬ್ರಾಡ್ ಗೇಜ್ ರೈಲು ಮಾರ್ಗದ ಉದ್ಘಾಟನಾ ಸಮಾರಂಬಕ್ಕೆ ಆಗಮಿಸಿದ್ದ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೈಗಾರಿಕಾ ಸಚಿವ ಕೆ.ಎಚ್. ಮುನಿಯಪ್ಪ ಆಗಮಿಸಿದರಾದರೂ ಜನರ ನೂಕು ನುಗ್ಗಲಿನಲ್ಲಿ ಒಳಪ್ರವೇಶಿಸಲು ಆಗದೆ ರೈಲಿನಿಂದ ಇಳಿದು ಕೆಲವೇ ನಿಮಿಷಗಳಲ್ಲಿ ಅದೇ ರೈಲಿನಲ್ಲಿ ಕೋಲಾರಕ್ಕೆ ಹೊರಟರು.
ರೈಲ್ವೆ ನಿಲ್ದಾಣದಲ್ಲಿ ಮಾಜಿ ಶಾಸಕ ವಿ. ಮುನಿಯಪ್ಪರವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಘೋಷಣೆಗಳನ್ನು ಕೋಗುತ್ತಿದ್ದರು. ರೈಲ್ವೆ ನಿಲ್ದಾಣದ ಕಚೇರಿಯಲ್ಲಿ ಸಂಚಾರಕ್ಕೆ ಚಾಲನೆ ನೀಡುವ ಗುಂಡಿಯನ್ನು ಒತ್ತುವ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತಾದರೂ ನೂಕು ನುಗ್ಗಲು ಹೆಚ್ಚಾದ ಕಾರಣ ಉದ್ಘಾಟನೆಯನ್ನು ನೆರವೇರಿಸದೆ ಬಂದ ರೈಲಿನಲ್ಲೇ ಕೋಲಾರಕ್ಕೆ ಪ್ರಯಾಣ ಬೆಳೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

