ವೈಎನ್ಕೆ ನ್ಯಾರೋಗೇಜ್ ರೇಲು ಪ್ರಸಂಗ
ಶಿಡ್ಲಘಟ್ಟ: ಕನ್ನಡ ಪ್ರಭ ಸಂಪಾದಕರಾಗಿದ್ದ ವೈಎನ್ಕೆ, ಪತ್ರಿಕೆಯ ವರದಿಗಾರನ ಸಂದರ್ಶನಕ್ಕೆ ಹೋಗಿದ್ದಾಗ ಶಿಡ್ಲಘಟದವನೆಂದು ತಿಳಿದು ತಮ್ಮ ನ್ಯಾರೋ ಗೇಜ್ ರೇಲು ಪ್ರಯಾಣದ ಅನುಭವ ತಿಳಿಸಿದ್ದು ಹೀಗೆ, ಖ್ಯಾತ ರಂಗ ಕಲಾವಿದ ಬಿ.ವಿ. ಕಾರಂತರಿಗೆ ಹೆಣ್ಣು ನೋಡಲು ಬೆಂಗಳೂರಿನಿಂದ 9ಗಂಟೆಗೆ ಹೊರಟ ರೈಲು ಶಿಡ್ಲಘಟ್ಟ ರೈಲು ನಿಲ್ದಾಣವನ್ನು ಮಧ್ಯಾಹ್ನ 3 ಗಂಟೆಗೆ ತಲುಪಿದ ಪ್ರಸಂಗವನ್ನು ನೆನಪಿಸಿದರು.
ಪ್ರತಿ ರೈಲು ನಿಲ್ದಾಣದಲ್ಲೂ ಗಂಟೆಗಟ್ಟಲೆ ನಿಲ್ಲುತ್ತಿದ್ದ ರೇಲಿನಲ್ಲಿ ಮಾಡುತ್ತಿದ್ದ ಕಾಡು ಹರಟೆಯಿಂದಾಗಿ ತಾವು ಹೋಗಬೇಕಾಗಿದ್ದ ಕಾರ್ಯವನ್ನೇ ಮರೆತು ಬಿಟ್ಟಿದ್ದಾಗಿ ತಿಳಿಸಿದ ವೈಎನ್ಕೆ ರೈಲಿನ ಕೊನೆ ಬೋಗಿಯಲ್ಲಿ ಕುಳಿತಿದ್ದ ಕಾರಣ ಉಗಿ ಬಂಡಿಯ ಕಲ್ಲಿದಲ್ಲಿನ ದೂಳು ಮತ್ತು ಹೊಗೆಯಿಂದಾಗಿ ಹೆಣ್ಣು ನೋಡಲು ಹೊರಟ್ಟಿದ್ದ ಬಿ.ವಿ. ಕಾರಂತರ ಬಿಳಿ ಜುಬ್ಬ ಮತ್ತು ಪೈಜಾಮ ಕಪ್ಪು ಬಣ್ಣಕ್ಕೆ ಬದಲಾಗಿತ್ತು, ಬೇರೆ ಬಟ್ಟೆ ತಂದಿಲ್ಲದ ಕಾರಣ ಜುಬ್ಬವನ್ನು ಕೆಡವಿದಾಗ ಮತ್ತಷ್ಟು ಕಲೆಗಳು ಹೆಚ್ಚಾಗಿ ತೊಟ್ಟಿದ ಬಿಳಿ ಬಣ್ಣದ ಉಡುಪು ಕಪ್ಪು ಕಲೆಗಳಿಂದ ತುಂಬಿ ಹೋಯಿತು. ಉಟ್ಟ ಬಟ್ಟೆಗಳಲ್ಲೇ ಪ್ರೇಮಾ ಕಾರಂತರ ವಧು ಪರೀಕ್ಷೆ ನಡೆಸಿ ವದುವಿನ ಅಬಿಪ್ರಾಯ ಕೇಳಲಾಗಿ ಎಲ್ಲ ಪರವಾಗಿಲ್ಲ ಕೊಳಕು ಬಟ್ಟೆಯ ಈ ವರ ಸ್ವಚ್ಛವಾದ ಉಡುಪನ್ನು ದರಿಸಿದ್ದರೆ ಚೆನ್ನಾಗಿತ್ತು ಎಂದು ತಿಳಿಸಿದಾಗ ರೈಲಿನ ಪ್ರಯಾಣದಿಂದಾದ ಯಡವಟ್ಟನ್ನು ತಿಳಿಸಿ ಪ್ರಸಂಗವನ್ನು ಹಾಸ್ಯಮಯವಾಗಿಸಿ ಬಿ.ವಿ. ಕಾರಂತರನ್ನು ಗೃಹಸ್ಥರನ್ನಾಗಿ ಮಾಡಿದ ಕೀರ್ತಿ ವೈಎನ್ಕೆ ಅವರಿಗೆ ಸಲ್ಲುತ್ತದೆ.
ಟಿ.ಪಿ. ಕೈಲಾಸಂ ಹಾಸ್ಯ ಪ್ರಸಂಗ: ಕನ್ನಡದ ಖ್ಯಾತ ಹಾಸ್ಯ ಲೇಖಕ ದಿವಂಗತ ಟಿ.ಪಿ. ಕೈಲಾಸಂ ತಮ್ಮ ಜೀವನ ಚರಿತ್ರೆಯಲ್ಲಿ ಬರೆದ ನ್ಯಾರೂ ಗೇಜ್ ರೇಲಿನ ಹಾಸ್ಯ ಪ್ರಸಂಗದಲ್ಲಿ ತಾವು ರೇಲಿನಲ್ಲಿ ಟಿಕೆಟ್ ಪಡೆದು ಪ್ರಯಾಣಿಸಿ ಇಳಿಯಬೇಕಾದ ರೈಲು ನಿಲ್ದಾಣದಲ್ಲಿ ಟಿಕೆಟ್ ಪರಿಶೀಲಿಸಿದ ಅಧಿಕಾರಿ ನಿಮಗೆ ಹೆಚ್ಚಿನ ವಯಸ್ಸಾಗಿದರೊ ಅರ್ಧ ಟಿಕೆಟ್ ಪಡೆದಿದ್ದೀರಿ ದಂಡ ತೆರಬೇಕೆಂದು ಸೂಚಿಸಿದಾಗ ಟಿ.ಪಿ. ಕೈಲಾಸಂರವರು ನೀಡಿದ ಉತ್ತರದಿಂದ ರೇಲ್ವೆ ಅದಿಕಾರಿ ದಂಗಾಗಿ ಹೋದರು. ಸ್ವಾಮಿ ನಾನು ಈ ರೇಲಿನಲ್ಲಿ ಪ್ರಯಾಣ ಆರಂಭಿಸಿದಾಗ ಚಿಕ್ಕವನಾಗಿದ್ದೆ, ಈ ರೇಲು ಇಲ್ಲಿಗೆ ತಲುಪುವ ವೇಳೆಗೆ ನಾನು ದೊಡ್ಡವನಾಗಿದ್ದೆ, ತಪ್ಪು ನನ್ನದೊ ಅಥವಾ ತಡವಾಗಿ ಬಂದ ನಿಮ್ಮ ರೇಲಿನದ್ದೋ ಎಂದು ಪ್ರಶ್ನಿಸಿದ್ದರು.
ರೂಪಸಿ ರಮೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

