ಜೀವ ರಕ್ಷಕ ಔಷಧಿಗಳ ಪೂರೈಕೆಗೆ ಆಗ್ರಹ
ಕೋಲಾರ: ಕೇಂದ್ರ ಸರ್ಕಾರ ಜೀವ ರಕ್ಷಕ ಔಷಧಿಗಳನ್ನು ಕಡಿಮೆ ದರದಲ್ಲಿ ಒದಗಿಸಬೇಕೆಂದು ಹೊರಡಿಸಿರುವ ಆದೇಶ ಅನುಷ್ಠಾನಗೊಳ್ಳದ ಕಾರಣ ಸಾರ್ವಜನಿಕರು ಔಷಧಿಗಳಿಗಾಗಿ ಪರಿತಪಿಸುವಂತಾಗಿದೆ ಎಂದು ಬಿಜೆಪಿ ಮುಖಂಡ ಪಿ.ಎಸ್. ಸತ್ಯನಾರಾಯಣರಾವ್ ದೂರಿದ್ದಾರೆ.
ಈ ಸಂಬಂದ ಹೇಳಿಕೆ ನೀಡಿರುವ ಅವರು, ಕೇಂದ್ರ ಸರ್ಕಾರ ರಾಷ್ಟ್ರದಲ್ಲಿ ಔಷಧಿಗಳನ್ನು ತಯಾರಿಸುವ ಕಂಪನಿಗಳ ಮತ್ತು ಬಂಡವಾಳ ಶಾಹಿ ಔಷಧಿ ಮಾರಾಟ ಮಳಿಗೆಗಳ ಮಧ್ಯದಲ್ಲಿ ಇಕ್ಕಟ್ಟಿಗೆ ಸಿಕ್ಕಿರುವುದರಿಂದ ರೋಗಿಗಳು ಸುಮಾರು ಎರಡು ತಿಂಗಳಿಂದ ಔಷಧಿ ಅಂಗಡಿಗಳಿಗೆ ಪರದಾಡುವಂತಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವು ನೇಷನ್ ಎಸೆನ್ಷಿಯಲ್ ಲಿಸ್ಟ್ ಆಫ್ ಮೆಡಿಸಿನ್ (ಎನ್.ಇ.ಎಲ್.ಎಂ) ಕಾಯ್ದೆ ಅಡಿಯಲ್ಲಿ ಹೃದಯ ರೋಗ, ಮಧುಮೇಹ, ಕ್ಯಾನ್ಸರ್, ಜೀವ ನಿರೋಧಕ ಔಷಧಿ ಮೊದಲಾದ ಸುಮಾರು 635 ಔಷಧಿಗಳು ಈ ಕಾಯ್ದೆಯಡಿಯಲ್ಲಿ ಜೀವ ರಕ್ಷಕ ಔಷಧಿಗಳು ಎಂದು ಪರಿಗಣಿಸಿ ಕಡಿಮೆ ದರದಲ್ಲಿ ಕಂಪನಿಗಳು ಒದಗಿಸಬೇಕೆಂದು ಕೇಂದ್ರ ಸರ್ಕಾರದಿಂದ ಆದೇಶವಾಗಿದ್ದರೂ ಆದೇಶ ಅನುಷ್ಠಾನಕ್ಕೆ ಬಂದಿಲ್ಲವೆಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಆದೇಶ ಅನುಷ್ಠಾನವಾಗದೇ ರೋಗಿಗಳು ಔಷಧಿಗಳಿಗೆ ಪರದಾಡುವಂತೆ ಮಾಡಿದೆ. ಕಂಪನಿಗಳಿಗೆ ಈ ಔಷಧಿಗಳ ಮೇಲೆ ನಿರ್ಧಿಷ್ಟ ಲಾಭಾಂಶವಿಲ್ಲವೆಂದು ತಯಾರು ಮಾಡುವುದೇ ಔಷಧಿ ಉತ್ಪಾದನೆಯನ್ನು ಕಡಿಮೆ ಮಾಡಿದ್ದು, ಇದಕ್ಕೆ ಬಂಡವಾಳ ಶಾಹಿ ಔಷಧಿ ಮಾರಾಟ ಮಳಿಗೆಗಳು ಕುಮ್ಮಕ್ಕು ನೀಡುತ್ತಿವೆ ಎಂದು ಅಭಿಪ್ರಾಯಿಸಿದ್ದಾರೆ.
ಈ ಕಾಯ್ದೆಯಲ್ಲಿ ಬರುವ ಜೀವರಕ್ಷಕ ಔಷಧಿಗಳನ್ನು ಖರೀದಿಸಿ ಮೆಡಿಕಲ್ ಶಾಪ್ಗೆ ಒದಗಿಸದೇ, ಔಷಧಿ ತಯಾರಿಸುವ ಕಂಪನಿಗಳು ಮತ್ತು ಬಂಡವಾಳ ಶಾಹಿ ಔಷಧಿ ಮಳಿಗೆಗಳು ಅವರವರ ಸ್ವಾರ್ಥಕ್ಕೆ ಕಾನೂನು ಉಲ್ಲಂಘನೆ ಮಾಡುತ್ತಿದೆ.
ಕೇಂದ್ರ ಸರ್ಕಾರ ತಕ್ಷಣ ಕಂಪನಿ ಮಾಲೀಕರು ಮತ್ತು ಬಂಡವಾಳ ಶಾಹಿ ಔಷಧಿ ಮಳಿಗೆಗಳ ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು ಕರೆದು ಸರಿಪಡಿಸಿ ಕನಿಷ್ಠ ಕೇಂದ್ರ ಸರ್ಕಾರ ರೋಗಿಗಳಾಗದರೂ ಕಡಿಮೆ ದರದಲ್ಲಿ ಔಷಧಿಗಳು ದೊರಕಲು ಸಂಪೂರ್ಣವಾಗಿ ಕಾಯ್ದೆ ಅನುಷ್ಠಾನವಾಗಲು ಕ್ರಮ ತೆಗೆದುಕೊಳ್ಳಬೇಕೆಂದು ಪಿ.ಎಸ್. ಸತ್ಯನಾರಾಯಣರಾವ್ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

