ಯುವ ಕಾಂಗ್ರೆಸ್ ಸದಸ್ಯತ್ವ ನವೀಕರಣ
ಚಿಕ್ಕಬಳ್ಳಾಪುರ: ಯುವ ಭಾರತೀಯ ಕಾಂಗ್ರೆಸ್ ರಾಜ್ಯ ಘಟಕದ ವತಿಯಿಂದ ಪಕ್ಷದ ಸದಸ್ಯತ್ವದ ನವೀಕರಣ ಮತ್ತು ತಿದ್ದುಪಡಿ ಅಭಿಯಾನ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.
ಮುಂಬರುವ ಚುನಾವಣೆ ದೃಷ್ಟಿಯಲ್ಲಿ ಮತದಾರರ ಪಟ್ಟಿಯಲ್ಲಿನ ಲೋಪ ದೋಷಗಳನ್ನು ಸರಿಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಆಸಕ್ತರು ತಮ್ಮ ಸದಸ್ಯತ್ವ ಸರಿಯಾಗಿದೆಯೇ ಅಥವಾ ತಿದ್ದುಪಡಿ ಮಾಡಬೇಕೆ ಎಂಬುದನ್ನು ವೆಬ್ ವಿಳಾಸ ಢಿಢಿಢಿ.್ಝಣ್ಛ.್ಝಟಿಣ್ಞಛ್ಠಟಿಛಡಿಛ್ಞಛ ರಲ್ಲಿ ನೋಡಬಹುದು ಅಥವಾ ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ. ಇದರ ಜತೆಗೆ ಲೋಕಸಭಾ ರಿರ್ಟನಿಂಗ್ ಆಫೀಸರ್ (ಎಲ್.ಆರ್.ಓ) ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ದಿನ ಉಳಿಯುವ ಸಂದರ್ಭದಲ್ಲಿ ತಮ್ಮ ತಮ್ಮ ಸದಸ್ಯತ್ವದ ಬಗ್ಗೆ ಪರಿಶೀಲಿಸಿಕೊಳ್ಳಬಹುದು. ಒಂದು ವೇಳೆ ಅದರಲ್ಲಿ ತಪ್ಪು ಮಾಹಿತಿ, ಇಲ್ಲವೇ ಬೂತ್ ಸರಿಯಿಲ್ಲದ್ದು ಅಥವಾ ವಿಧಾನ ಸಭಾಕ್ಷೇತ್ರದ ಲೋಪ ದೋಷಗಳು ಹಾಗೂ ಸದಸ್ಯತ್ವದ ಅರ್ಜಿಗಳಲ್ಲಿ ತುಂಬಬೇಕಾದವುಗಳನ್ನು ಬಿಟ್ಟಿದ್ದಲ್ಲಿ ಅವರಿಗೆ ಮನವರಿಕೆ ಮಾಡಿ ತಮ್ಮ ತಮ್ಮ ಸದಸ್ಯತ್ವದ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ ಎಂದು ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

