ಪವಾಡ ಬಯಲು ಮಾಡಿದ ಹುಲಿಕಲ್ ನಟರಾಜ್
ಚಿಕ್ಕಬಳ್ಳಾಪುರ: ಪವಾಡಗಳ ಹೆಸರಿನಲ್ಲಿ, ಮೌಢ್ಯತೆಗಳಿಂದ ಜನರನ್ನು ಭಯ ಬೀಳಿಸುವವರೇ ಸಮಾಜದಲ್ಲಿ ನಿಜವಾದ ಭಯೋತ್ಪಾದಕರು ಎಂದು ಪವಾಡ ಬಯಲು ಮಾಡುವಲ್ಲಿ ಖ್ಯಾತಿ ಪಡೆದಿರುವ ಹುಲಿಕಲ್ ನಟರಾಜ್ ಟೀಕಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಮಾನವ ಹಕ್ಕುಗಳ ಜಾಗೃತಿ ಸಮಿತಿ ಜಿಲ್ಲಾ ಮತ್ತು ತಾಲೂಕು ಘಟಕ ಆಯೋಜಿಸಿದ್ದ ಕಾನೂನು ಅರಿವು, ಧರ್ಮ ಮತ್ತು ವೈಚಾರಿಕತೆ ವಿಚಾರಣ ಸಂಕಿರಣದಲ್ಲಿ ಪವಾಡಗಳ ಮೂಲಕ ಜನರನ್ನು ವಂಚಿಸುವ ತಂತ್ರಗಾರಿಕೆ ಬಯಲು ಮಾಡಿದರು.
ಮಾಟ, ಮಂತ್ರ, ವಾಮಾಚಾರ, ಭಾನಾಮತಿ ಸೇರಿದಂತೆ ವಂಚನೆಯ ಪವಾಡಗಳ ಮೂಲಕ ಜನರನ್ನು ನಿರಂತರವಾಗಿ ಶೋಷಣೆ ಮಾಡಲಾಗುತ್ತಿದೆ. ಧರ್ಮದ ಹೆಸರಿನಲ್ಲಿ ವಂಚನೆ ಮಾಡುತ್ತಿರುವಂತಹುದೂ ಜಾಸ್ತಿ ನಡೆಯುತ್ತಿದೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕೆಂದರು. ಮೌಢ್ಯತೆ, ಪವಾಡಗಳ ಬಗ್ಗೆ ಧ್ವನಿ ಎತ್ತಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ನರೇಂದ್ರರ ಕೊಲೆಯಾಗಿತ್ತು. ಇದೀಗ ನನ್ನನ್ನು ಕೊಲೆ ಮಾಡುವ ಬಗ್ಗೆ ಬೆದರಿಕೆ ಬರುತ್ತಿವೆ. ಭಾನಾಮತಿಯ ಮೂಲಕ ಕೈ ಕಾಲು ಬಿದ್ದು ಹೋಗುವಂತೆ ಮಾಡುತ್ತೇನೆ ಎಂದು ಮಹಿಳೆಯೊಬ್ಬರು ಸವಾಲು ಹಾಕಿದ್ದು ನನ್ನನ್ನು ಕೊಲ್ಲಲು ಅನೇಕರು ಕಾಯುತ್ತಿದ್ದಾರೆ. ಆದರೆ, ನಾನು ಪವಾಡಗಳನ್ನು ಬಯಲಿಗೆಳೆದು ಜನರಲ್ಲಿ ಜಾಗೃತಿ ಮೂಡಿಸುವುದನ್ನು ಬಿಡುವುದಿಲ್ಲ ಎಂದು ತಿಳಿಸಿದರು. ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಸಮೇತನಹಳ್ಳಿ ಲಕ್ಷ್ಮಣಸಿಂಗ್, ಅಪರ ಪ್ರಧಾನ ಸಿವಿಲ್‌ನ್ಯಾಯಾಧೀಶೆ ಅನಿತಾ ಕುಮಾರಿ ಮಾನವ ಹಕ್ಕುಗಳ ಬಗ್ಗೆ ತಿಳಿಸಿದರು.
ಪ್ರಧಾನ ಸಿವಿಲ್‌ನ್ಯಾಯಾಧೀಶೆ ನಳಿನಾ, ವಕೀಲರ ಸಂಘದ ಅಧ್ಯಕ್ಷ ಕೆ.ಎಚ್. ತಮ್ಮೇಗೌಡ, ಪ್ರೊ. ಕೋಡಿರಂಗಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಸುರೇಖಾ, ಮಾನವ ಹಕ್ಕುಗಳ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಖಜಾಂಚಿ ಎನ್. ಚಂದ್ರಶೇಖರ್, ರಾಮಪ್ಪ, ಗಂಗಾಧರ್, ಹೊಸಕೋಟೆ ಶ್ರೀನಿವಾಸ್, ಮೂರ್ತಿ, ಶೋಭಾ ರಾಣಿ ಇದ್ದರು.
ಗಮನ ಸೆಳೆದ ಪ್ರದರ್ಶನ: ತಲೆಯ ಮೇಲೆ ಕರ್ಪೂರ ಹಚ್ಚುವುದು. ಕೈಯಲ್ಲಿ ಕರವಸ್ತ್ರ ಮಾಯ ಮಾಡುವುದು. ನೀರಿನಲ್ಲಿ ನಿಂಬೆಹಣ್ಣನ್ನು ಕಾಣದಂತೆ ಮಾಡುವುದು. ಖಾಲಿ ಡಬ್ಬದಲ್ಲಿ ಜನಪ್ರತಿನಿಧಿಗಳಿಗೆ ಹೂಗಳನ್ನು ನೀಡುವುದು. ತೆಂಗಿನ ಕಾಯಲ್ಲಿ ಬೆಂಕಿ ತರಿಸುವುದು ಸೇರಿದಂತೆ ಪವಾಡ ಪುರುಷರೆಂದು ಬಿಂಬಿಸಿಕೊಂಡು ಅನೇಕರು ಜನರಿಗೆ ಮಾಡುವ ವಂಚನೆಯನ್ನು ಹುಲಿಕಲ್ ನಟರಾಜ್ ತೋರಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

