ಮತ್ತೆ ಡೆಂಘೀ: ವ್ಯಕ್ತಿ ಬಲಿ, ಜನರಲ್ಲಿ ಆತಂಕ
ಬಂಗಾರಪೇಟೆ: ಕೆಲ ತಿಂಗಳಿಂದ ಕ್ಷೇತ್ರದಿಂದ ದೂರವಾಗಿದ್ದ ಡೆಂಘಿ ಮತ್ತೆ ಕಾಣಿಸಿಕೊಂಡು ವ್ಯಕ್ತಿಯೊಬ್ಬರನ್ನು ಬಲಿ ತೆಗೆದುಕೊಂಡಿರುವುದು ಜನರನ್ನು ಮತ್ತೆ ಭೀತಿಯಲ್ಲಿಡುವಂತೆ ಮಾಡಿದೆ.
ತಾಲೂಕಿನ ತಿಮ್ಮಾಪುರದ ಚಂದ್ರಪ್ಪ (35) ಎಂಬಾತನೆ ಡೆಂಘಿಗೆ ಬಲಿಯಾಗಿದ್ದು, ದೀಪಾವಳಿ ಹಬ್ಬದಂದು ಕಾಣಿಸಿಕೊಂಡ ಜ್ವರಕ್ಕೆ ಮೊದಲು ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಅಲ್ಲಿ ಜ್ವರ ವಾಸಿಯಾಗದೆ ಜಾಸ್ತಿಯಾದ ಹಿನ್ನೆಲೆಯಲ್ಲಿ ಜಾಲಪ್ಪ ಆಸ್ಪತ್ರೆಗೆ ಸೋಮವಾರ ದಾಖಲಿಸಿದ್ದರು. ಇಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಚಂದ್ರಪ್ಪ ಮೃತಪಟ್ಟಿದ್ದಾನೆ. ಮೃತ ಚಂದ್ರಪ್ಪ ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಗಾರ್ಡ್ ಕೆಲಸ ಮಾಡುತ್ತಿದ್ದು ಇಬ್ಬರು ಮಕ್ಕಳಿದ್ದಾರೆ. ಮನೆ ಯಜಮಾನನನ್ನು ಕಳೆದುಕೊಂಡು ಪತ್ನಿ ಮತ್ತು ಮಕ್ಕಳು ಮುಂದಿನ ಸಂಸಾರ ಸಾಗಿಸಲು ದಾರಿ ಕಾಣದೆ ರೋದಿಸುತ್ತಿದ್ದರು. ಈ ಮಹಾಮಾರಿ ಡೆಂಘಿ ಜ್ವರ ಕಳೆದ ಐದಾರು ತಿಂಗಳಲ್ಲಿ ನಾಲ್ವರನ್ನು ಬಲಿ ತೆಗೆದುಕೊಂಡಿದೆ.ಸೂಲಿಕುಂಟೆ ಪಂಚಾಯ್ತಿ ಅಧ್ಯಕ್ಷರಾಗಿದ್ದ ನಾರಾಯಣಸ್ವಾಮಿ, ಎಸ್ಬಿಎಂ ಬ್ಯಾಂಕ್ ಉದ್ಯೋಗಿ ಪಾಪಣ್ಣ ಸೇರಿದಂತೆ ನಾಲ್ವರು ಬಲಿಯಾಗಿದ್ದಾರೆ.
ಗ್ರಾಮಾಂತರ ಭಾಗದಲ್ಲಿ ಜಾಸ್ತಿ: ಪಟ್ಟಣ ಪ್ರದೇಶಗಳಿಗಿಂತಲೂ ಗ್ರಾಮಾಂತರ ಭಾಗದಲ್ಲಿ ಡೆಂಘಿ ಜ್ವರ ಹೆಚ್ಚಾಗಿ ಕಾಣಿಸಿಕೊಂಡಿದ್ದು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸುವಂತಾಗಿದೆ. ಇದಲ್ಲದೆ ಗ್ರಾಮೀಣ ಜನರನ್ನು ಇತ್ತೀಚೆಗೆ ಚಿಕೂನ್‌ಗುನ್ಯ ಸಹ ಅಧಿಕವಾಗಿ ಭಾದಿಸುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ನೂಕುನುಗ್ಗಲಿನಲ್ಲಿ ಚಿಕಿತ್ಸೆಗಾಗಿ ಮುಗಿಬೀಳುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಆರೋಗ್ಯ ಇಲಾಖೆ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲಿ.ಡೆಂಘಿ ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ ವೈದ್ಯರು ಮಾತ್ರ ಇದು ಡೆಂಘಿ ಅಲ್ಲ ಎಂದು ಜಾರಿಕೆ ಉತ್ತರ ನೀಡುತ್ತಿದ್ದಾರೆ. ತಾಲೂಕು ವೈದ್ಯಾಧಿಕಾರಿಯಾಗಿ ಅಧಿಕಾರವಹಿಸಿಕೊಂಡಿರುವ ಡಾ. ಕಮಲಾಕರ್ ತಿಮ್ಮಾಪುರದಲ್ಲಿ ಡೆಂಘಿಯಿಂದ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ತಕ್ಷಣ ಗ್ರಾಮಕ್ಕೆ ತಮ್ಮ ಸಹಪಾಠಿಗಳೊಂದಿಗೆ ಧಾವಿಸಿ ಪರಿಶೀಲಿಸಿದರು. ಆದರೆ ಚಂದ್ರಪ್ಪ ಅಂತ್ಯ ಸಂಸ್ಕಾರವನ್ನು ಅವರ ಸ್ವಗ್ರಾಮವಾದ ಮುಳಬಾಗಿಲು ತಾಲೂಕಿನ ಗುಜ್ಜನಹಳ್ಳಿಯಲ್ಲಿ ನಡೆದರಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲವಾದರೂ ಗ್ರಾಮದಲ್ಲಿ ಇನ್ನೂ ಅನೇಕ ಮಂದಿ ಜ್ವರದಿಂದ ಬಳಲುತ್ತಿದ್ದಾರೆಂದು ಗ್ರಾಮಸ್ಥರು ವೈದ್ಯರಿಗೆ ತಿಳಿಸಿದರು. ನಂತರ ಡಾ. ಕಮಲಾಕರ್ ಈ ಮಾರಕ ಜ್ವರವನ್ನು ತಡೆಗಟ್ಟಲು ಗ್ರಾಮಸ್ಥರು ಯಾವ ಕ್ರಮವನ್ನು ಅನುಸರಿಸಬೇಕು ಎಂಬುದರ ಬಗ್ಗೆ ತಿಳಿವಳಿಕೆ ಮೂಡಿಸಿ, ಆರೋಗ್ಯ ನಿರೀಕ್ಷಕರನ್ನು ನಿಯೋಜಿಸಿ ತಿಳಿವಳಿಕೆ ಮೂಡಿಸುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

