ಫುಟ್ಪಾತ್ ಮೇಲೆ ರೈಲ್ವೆ ಟಿಕೆಟ್ ಕೌಂಟರ್: ಕಿರಿಕಿರಿ
ಬಂಗಾರಪೇಟೆ: ಜನದಟ್ಟಣೆ ಹೆಚ್ಚಾಗಿರುವ ರಸ್ತೆಯ ಪಕ್ಕದಲ್ಲಿರುವ ಪುಟ್ಪಾತ್ ಮೇಲೆ ರೈಲ್ವೆ ಟಿಕೆಟ್ ವಿತರಿಸುವ ಕೌಂಟರ್ ಅಳವಡಿಸಿರುವುದರಿಂದ ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ತೊಂದರೆಯಾಗಿದ್ದು ಕೂಡಲೆ ಇಲಾಖೆ ಈ ಬಗ್ಗೆ ಕ್ರಮವಹಿಸಿ ಕೌಂಟರ್ಅನ್ನು ಬೇರೆಡೆ ಸ್ಥಳಾಂತರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪಟ್ಟಣ ರೈಲ್ವೆ ನಿಲ್ದಾಣದಲ್ಲಿರುವ ಟಿಕೆಟ್ ವಿತರಿಸುವ ಕೌಂಟರ್ ಕೇವಲ ಎರಡು ಮಾತ್ರ ಇದ್ದು ಬೆಳಗ್ಗೆ ಮತ್ತು ಸಂಜೆ ವೇಳೆ ಪ್ರಯಾಣಿಕರು ಅಧಿಕವಾಗಿ ಬಂದು ಸಾಲಾಗಿ ನಿಂತರೂ ಸಮಯಕ್ಕೆ ಟಿಕೆಟ್ ದೊರೆಯದೆ ಪ್ರಯಾಣಿಕರು ರೈಲನ್ನು ತಪ್ಪಿಸಿಕೊಳ್ಳುವಂತಾಗಿದೆ ಬೆಳಗ್ಗೆ ಮತ್ತು ಸಂಜೆ ವೇಳೆ ಮತ್ತೆರಡು ಹೆಚ್ಚುವರಿ ಕೌಂಟರ್ಗಳನ್ನು ತೆರೆಯುವಂತೆ ಪ್ರಯಾಣಿಕರು ಕೋರಿದ್ದರೂ ಇಲಾಖೆ ಮೇಲಾಧಿಕಾರಿಗಳು ಗಮನಹರಿಸದೆ ನಿರ್ಲಕ್ಷ್ಯವಹಿಸಿದ್ದರು.ನಂತರ ಬಸ್ನಿಲ್ದಾಣದ ಬಳಿ ಖಾಸಗಿಯವರಿಗೆ ಟಿಕೆಟ್ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ ಇಲ್ಲಿ ಟಿಕೆಟ್ ಮೇಲೆ 1ರು. ಹೆಚ್ಚುವರಿಯಾಗಿ ನೀಡಬೇಕಾಗಿರುವುದರಿಂದ ಹೆಚ್ಚಾಗಿ ಪ್ರಯಾಣಿಕರು ಈ ಕೌಂಟರ್ನಲ್ಲಿ ಟಿಕೆಟ್ಗಳನ್ನು ಖರೀದಿ ಮಾಡುತ್ತಿಲ್ಲ. ಪರಿಸ್ಥಿತಿ ಈಗಿರುವಾಗ ಪಟ್ಟಣದ ಬಜಾರ್ ರಸ್ತೆಯಿಂದ ರೈಲ್ವೆ ನಿಲ್ದಾಣಕ್ಕೆ ಬರುವ ಬಳಿಯಿರುವ ಅಂಬೇಡ್ಕರ್ ಪ್ರತಿಮೆ ಪಕ್ಕದಲ್ಲಿ ರಾತ್ರೋರಾತ್ರಿ ಮತ್ತೊಂದು ಟಿಕೆಟ್ ಕೊಡುವ ಕೌಂಟರ್ ಡಬ್ಬವನ್ನು ಇಡಲಾಗಿದೆ.ಈ ರಸ್ತೆ ಕೋಲಾರ ಮತ್ತು ಕೆಜಿಎಫ್ ಪ್ರಮುಖ ರಸ್ತೆಯಾಗಿದ್ದು ವಾಹನಗಳು ಮತ್ತು ಜನರ ಓಡಾಟ ಹೆಚ್ಚಾಗಿದೆ ಅಲ್ಲದೆ ಪಾದಚಾರಿಗಳು ಸಂಚಾರಕ್ಕೂ ಅವಕಾಶವಿಲ್ಲದಂತಾಗಿದೆ ಈಗಿರುವಾಗ ಇಲ್ಲಿ ರೈಲ್ವೆ ಟಿಕೆಟ್ ಕೊಂಟರ್ ಸ್ಥಾಪಿಸಿದರೆ ಜನರು ಹೇಗೆ ತಾನೆ ಜನದಟ್ಟಣೆಯಲ್ಲಿ ಬಂದು ಟಿಕೆಟೇ ಪಡೆಯುವರುಆತುರವಾಗಿ ಬರುವ ಪ್ರಯಾಣಿಕರು ವಾಹನಗಳ ದಟ್ಟಣೆಯಿಂದ ಅಫಘಾತವಾಗುವ ಅವಕಾಶವನ್ನು ತಲ್ಲಿಹಾಕುವಂತಿಲ್ಲ.ಕೇಂದ್ರ ಸಚಿವರ ಆಪ್ತರೊಬ್ಬರ ಪ್ರಭಾವಕ್ಕೆ ಮಣಿದು ಅಧಿಕಾರಿಗಳು ಇಲ್ಲಿ ಟಿಕೆಟ್ ಕೌಂಟರ್ ವಿತರಣೆಗೆ ಅವಕಾಶ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ನಾಗರಿಕರು ಪ್ರಶ್ನಿಸುವಂತಾಗಿದೆ. ಆದ್ದರಿಂದ ಇಲ್ಲಿಂದ ಬೇರೆಡೆ ಸ್ಥಳಾಂತರಿಸಲಿ ಎಂದು ಈ ಪ್ರದೇಶದ ವ್ಯಾಪಾರಸ್ತರು,ಸಾರ್ವಜನಿಕರು ರೈಲ್ವೆ ಇಲಾಖೆ ಅದಿಕಾರಿಗಳನ್ನು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

