ರಸ್ತೆಗಳ ದುರಸ್ತಿ ಕಾಮಗಾರಿಗೆ ಶಾಸಕ ಸುಧಾಕರ್ ಚಾಲನೆ
ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ಹಾಳಾದ ರಸ್ತೆಗಳ ದುರಸ್ತಿಗಾಗಿ ಸುಮಾರು 29.50 ಲಕ್ಷ ರು. ವೆಚ್ಚದ ಕಾಮಗಾರಿಗೆ ಶಾಸಕ ಡಾ. ಕೆ.ಸುಧಾಕರ್ ಶುಕ್ರವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಪ್ರತಿಯೊಬ್ಬರು ಸಹಕಾರ ನೀಡಿದರೆ ಜಿಲ್ಲಾ ಕೇಂದ್ರವನ್ನು ತ್ವರಿತವಾಗಿ ಅಭಿವಣದ್ದಿ ಕಾರ್ಯ ಕೈಗೊಂಡು ಮಾದರಿ ನಗರವನ್ನಾಗಿಸಲು ಸುಲಭವಾಗುತ್ತದೆ. ಇದಕ್ಕೆ ನಗರಸಭಾ ಸದಸ್ಯರು ಸೇರಿದಂತೆ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈಗಾಗಲೇ ಚಿಕ್ಕಬಳ್ಳಾಪುರ ನಗರವನ್ನು ನೋಯಿಡಾ ರೀತಿಯಲ್ಲಿ ಮಾದರಿ ನಗರವನ್ನಾಗಿಸಲು ಪ್ರಾಮಾಣಿಕವಾಗಿ ಮುಂದಾಗುವುದಾಗಿ ತಿಳಿಸಿರುವುದಲ್ಲದೇ ತಾಲೂಕಿನ ಅಭಿವೃದ್ಧಿಗೆ 25 ಕೋಟಿ ರು. ವಿಶೇಷ ಪ್ಯಾಕೇಜ್ ನೀಡುವುದಾಗಿ ಘೋಷಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಅನುದಾನವನ್ನು ಸದುಪಯೋಗಪಡಿಸಿಕೊಂಡು ಚಿಕ್ಕಬಳ್ಳಾಪುರವನ್ನು ಅಭಿವೃದ್ಧಿಪಡಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು.
ಪ್ರಸ್ತುತ ನಗರದ ಅನೇಕ ಕಡೆ ಹದಗೆಟ್ಟ ರಸ್ತೆಗಳು, ಅಸಮರ್ಪಕ ಚರಂಡಿ ವ್ಯವಸ್ಥೆ ಸೇರಿದಂತೆ ನಾನಾ ಸಮಸ್ಯೆಗಳು ಕಣ್ಣಿಗೆ ಕಾಣುವುದಲ್ಲದೇ ನಗರದ ಜನರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ.ಅಲ್ಲದೇ ಕಳಪೆ ಕಾಮಗಾರಿಗಳು ಸಹ ಹೆಚ್ಚಾಗಿ ನಡೆದಿದ್ದು ಜನರ ಸಮಸ್ಯೆಗಳನ್ನು ಸಮರ್ಪಕವಾಗಿ ನಿವಾರಿಸಿ ಗುಣಮಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದೆ ಎಂದರು.
ಕಳೆದ ವರ್ಷ 18 ಕೋಟಿ ರು. ವೆಚ್ಚದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ನಡೆದಿದ್ದರೂ ಕಾಮಗಾರಿ ಕಳಪೆ ಗುಣಮಟ್ಟದಲ್ಲಿದೆ ಎಂದು ಆರೋಪಿಸಿದ ಅವರು, ಇದೀಗ ನಗರೋತ್ಥಾನ ಎರಡನೇ ಹಂತದಲ್ಲಿ ಕ್ಷೇತ್ರಕ್ಕೆ ಅದರಲ್ಲೂ ಜಿಲ್ಲಾ ಕೇಂದ್ರಕ್ಕೆ 42 ಕೋಟಿ ರು. ದೊರೆಯಲಿದೆ. ಅದನ್ನು ಎಲ್ಲಾ ವಾರ್ಡ್ಗಳಿಗೂ ಸಮಾನವಾಗಿ ಹಂಚಿಕೊಂಡು ಅಭಿವೃದ್ಧಿ ಸಾಧಿಸ ಬೇಕಾಗಿದೆ ಎಂದರು.
ನಗರದ ಗರ್ಲ್ಸ್ ಶಾಲೆಯಿಂದ ಕೆನಡಿ ಮನೆ, ನಗರ್ತರಪೇಟೆ ಭುವನೇಶ್ವರಿ ವೃತ್ತದಿಂದ ಸಿಸಿ ವೃತ್ತವರೆಗೆ,ಸಿಸಿ ವೃತ್ತದಿಂದ ಕಂದವಾರ ಬಾಗಿಲುವರೆಗೆ ಹಾಗೂ ಟಿಜಿ ಟ್ಯಾಂಕ್ ರಸ್ತೆಯ ದುರಸ್ತಿ ಹಾಗೂ ನಿರ್ವಹಣೆ ಮೊದಲ ಪ್ಯಾಕೇಜಿನಲ್ಲಿ ಬಂದರೆ, ಎರಡನೇ ಪ್ಯಾಕೇಜಿನಲ್ಲಿ ಸುಬ್ಬರಾಯನಪೇಟೆ ಮುಖ್ಯರಸ್ತೆ, ಕಂದವಾರ ಕೋದಂಡಸ್ವಾಮಿ ದೇವಸ್ಥಾನದಿಂದ ಸುಬ್ರಹ್ಮಣ್ಯಸ್ವಾಮಿ ದೇವಾಲಯದವರೆಗೆ, ಸರ್.ಎಂ.ವಿ ಸ್ಟೇಡಿಯಂವರೆಗೆ, ಭುವನೇಶ್ವರಿ ವೃತ್ತದಿಂದ ಮಸೀದಿ ಮುಂಭಾಗದವರೆಗಿನ ರಸ್ತೆ, ಪ್ಯಾಕೇಜ್ 3 ರಲ್ಲಿ ವಲಸಣ್ಣ ಬೀದಿಯಿಂದ ಮಹೇಶ್ವರಿ ರಸ್ತೆವರೆಗೆ, ಸಿಎಸ್ಐ ರಸ್ತೆ ಮತ್ತು ಎಂ.ಜಿ.ರಸ್ತೆಯಿಂದ ಪ್ರಶಾಂತಿ ಬಾಲಮಂದಿರದವರೆಗೆ ಮತ್ತು ಮಹಾಕಾಳಿ ರಸ್ತೆಯಲ್ಲಿ ರಸ್ತೆ ದುರಸ್ತಿ ಸೇರಿದಂತೆ 29.50 ಲಕ್ಷ ರು. ಮೊತ್ತದ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಪೌರಾಯುಕ್ತ ರುದ್ರಮುನಿ, ನಗರಸಭಾ ಸದಸ್ಯರಾದ ಗಜೇಂದ್ರ, ಜಿ.ಎನ್. ನಾರಾಯಣಸ್ವಾಮಿ, ಮುನಿಕೃಷ್ಣ, ಮಂಜುನಾಥ್, ವಿ. ಸುಬ್ರಹ್ಮಣ್ಯ ಆಚಾರಿ, ಪದ್ಮಮ್ಮ, ಭಾರತೀದೇವಿ, ದೇವರಾಜ್, ಯೋಗೇಶ್, ನಿರ್ಮಲಾ ಪ್ರಭು, ರಮೇಶ್ ಬಾಬು, ಜಯಮ್ಮ, ಸುರೇಶ್, ಶೋಭಾ ಮಂಜುನಾಥ್, ಭಾರತೀದೇವಿ, ಕಿಸಾನ್ ಕೃಷ್ಣಪ್ಪ, ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

