ಕೋಲಾರ

ರಾಮೇಗೌಡ ಬಿಜೆಪಿ ಸೇರ್ಪಡೆ

Published On :

ಮಾಲೂರು: ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ಪಕ್ಷದ ಸಿದ್ಧಾಂತ ಒಪ್ಪಿ ಬಿಜೆಪಿ ಸೇರಿರುವುದಾಗಿ ಜಿಪಂ ಮಾಜಿ ಸದಸ್ಯ ಜಿ.ಇ. ರಾಮೇಗೌಡ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಬಿಜೆಪಿ ಶುಕ್ರವಾರ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಸೊ. ವೆಂಕಟೇಶ್ ಅವರಿಂದ ಪಕ್ಷದ ಧ್ವಜ ಸ್ವೀಕರಿಸಿ ಮಾತನಾಡಿ, ದೇಶದಲ್ಲಿ ಕಾಡುತ್ತಿರುವ ನಿರೋದ್ಯೋಗ ಸಮಸ್ಯೆ, ಬಡತನ ಹೋಗಲಾಡಿಸುವಿಕೆ ಬಗ್ಗೆ ನರೇಂದ್ರ ಮೋದಿ ಹೊಂದಿರುವ ವಿಷನ್ ಯುವಕರನ್ನು ಪಕ್ಷದಡೆಗೆ ಸೆಳೆಯುತ್ತಿದೆ.
  ದೇಶ ಮೊದಲು ಎನ್ನುವ ಬಿಜೆಪಿ ಪಕ್ಷವೂಂದೇ ದೇಶದ ಭವಿಷ್ಯವಾಗಿರುವುದರಿಂದ ಪಕ್ಷಕ್ಕೆ ಬಂದಿದ್ದು, ತಾಲೂಕಿನ ಪ್ರತಿ ಗ್ರಾಮದಲ್ಲೂ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷವನ್ನು ಸಂಘಟಿಸುವುದಾಗಿ ತಿಳಿಸಿದರು.  ಬಿಜೆಪಿ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ ಮಾತನಾಡಿ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಪ್ರಧಾನಿ ಮಾಡುವ ಕಡೆ ಪಕ್ಷ ಸಂಘಟಿತವಾಗುತ್ತಿದ್ದು, ಮತದಾರರ ಒಲವು ಸಹಕಾರಿಯಾಗುತ್ತಿದೆ ಎಂದರು.
ರಾಮೇಗೌಡರ ಜತೆಯಲ್ಲಿ ಪುರಸಭೆ ಪಕ್ಷೇತರ ಸದಸ್ಯೆ ಸೂಲೋಚನಾ, ಗ್ರಾಪಂ ಸದಸ್ಯ ಜ್ಯೋನ್ನಪ್ಪ, ಭುವನಹಳ್ಳಿ ಚಿನ್ನಪ್ಪ, ದಿನೇಶ್‌ಗೌಡ, ಟೇಕಲ್ ಶ್ರೀರಾಮುಲು, ರಘು, ಮಾಸ್ತಿ ರಾಮಮೂರ್ತಿ, ಭೈರ್ನಹಳ್ಳಿ ರವೀಂದ್ರ, ಡಿ.ಕೆ. ಶಂಕರ್, ಕರವೇ ಅಧ್ಯಕ್ಷ ರಾಮಕೃಷ್ಣಪ್ಪ, ಬಾಲೂ, ಮಲ್ಲೇಶ್, ಕಲ್ಕರೆ ನಂದನಗೌಡ, ಚಲಪತಿ, ಸಂದೀಪ್, ಜಗದೇನಹಳ್ಳಿ ವೆಂಕಟೇಶ್, ಶಾಂತಮ್ಮ, ಶಾರದಮ್ಮ, ನಾಗರಾಜ್ ಸೇರಿದಂತೆ ನೂರಾರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.