ಕೋಲಾರ

ಬ್ಯಾಂಕ್ ಶಾಖೆ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

Published On :

ಕ.ಪ್ರ.ವಾರ್ತೆ   ಟೇಕಲ್   ನ. 26
ಮಾಸ್ತಿ ಹೋಬಳಿಯ ದಿನ್ನಹಳ್ಳಿ ಗ್ರಾಮದ ಬ್ಯಾಂಕ್ ಆಪ್ ಇಂಡಿಯಾ ಶಾಖೆಯನ್ನು ದಿನ್ನಹಳ್ಳಿ ಗ್ರಾಮದಿಂದ ಮಾಸ್ತಿ ಗ್ರಾಮಕ್ಕೆ ವರ್ಗಾಯಿಸುತ್ತಿರುವುದನ್ನು ವಿರೋಧಿಸಿ ಗ್ರಾಮಸ್ಥರು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು.
ದಿನ್ನಹಳ್ಳಿ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಬ್ಯಾಂಕ್ ಆಪ್ ಇಂಡಿಯಾ ಶಾಖೆ ಕೆಲಸ ನಿರ್ವಹಿಸುತ್ತಿದ್ದು, ಸುತ್ತಮುತ್ತಲಿನ 44 ಗ್ರಾಮದ ರೈತರು ಇಲ್ಲಿ ವ್ಯವಹಾರ ನಡೆಸುತ್ತಿದ್ದರು. ಆದರೆ ಬ್ಯಾಂಕಿನ ಉನ್ನತ ಅಧಿಕಾರಿಗಳು ಶಾಖೆಯನ್ನು ಮಾಸ್ತಿಗೆ ವರ್ಗಾಯಿಸಬೇಕೆಂದು ತಿಳಿಸಿರುವುದನ್ನು ವಿರೋಧಿಸಿ ಗ್ರಾಹಕರು ಮಂಗಳವಾರ ಬ್ಯಾಂಕಿನ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಶಾಖಾ ವ್ಯವಸ್ಥಾಪಕರು ಗ್ರಾಹಕರ ಬಳಿ ಸ್ಪಂದಿಸುತ್ತಿಲ್ಲವೆಂದು ರೈತರಿಗೆ ಬರುವ ಯಾವುದೇ ಸಾಲ ಯೋಜನೆಗಳನ್ನು ಸರಿಯಾಗಿ ನೀಡುತ್ತಿಲ್ಲವೆಂದು ಆರೋಪಿಸಲಾಯಿತು. ಉನ್ನತಾಧಿಕಾರಿಗಳ ಜೊತೆ ಫೋನಿನ ಮೂಲಕ ಚರ್ಚಿಸಿ ಪ್ರತಿಭಟನೆಕಾರರ ಬಳಿ ಮಾತನಾಡಿದ ತರುವಾಯ ಪ್ರತಿಭಟನೆ ಕೈಬಿಡಲಾಯಿತು. ಮನವಿ ಪತ್ರವನ್ನು ಶಾಖಾ ವ್ಯವಸ್ಥಾಪಕರಿಗೆ ನೀಡಲಾಯಿತು.
ಜಿಪಂ ಸದಸ್ಯೆ ಯಶೋಧ ಕೃಷ್ಣಮೂರ್ತಿ, ತಾಪಂ ಸದಸ್ಯ ಮುನಿಕೃಷ್ಣಪ್ಪ, ಟಿ.ವಿ.ಬಸವರಾಜ್, ನಾಗರಾಜ್, ಸಂಪಂಗಿ, ರಾಮಯ್ಯ, ರುದ್ರಪ್ಪ, ದೇವರಾಜ್, ಪಿಳ್ಳೇಗೌಡ, ಬಿಸೇಗೌಡ, ವೆಂಕಟೇಶ್, ನಾರಾಯಣಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.