ಮಾಸ್ತಿ ವಸತಿ ಶಾಲೆ'ಗೆ ಬೇಕಿದೆ ಮೂಲ ಸೌಲತ್ತು
ಟೇಕಲ್ ಲಕ್ಷ್ಮೀಶ್
ಟೇಕಲ್: 'ಕನ್ನಡದ ಆಸ್ತಿ ಮಾಸ್ತಿ' ಡಾ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಹೆಸರಿನಲ್ಲಿ ನಡೆಯುತ್ತಿರುವ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ 'ಮಾಸ್ತಿ ವಸತಿ ಶಾಲೆ' ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆಗಳ ಆಸ್ತಿಯಾಗಿ ಪರಿಣಮಿಸಿದೆ. ಈ ಸಂಬಂಧ ನವೆಂಬರ್ನಲ್ಲಿ ನೂತನವಾಗಿ ಕಟ್ಟಡಕ್ಕೆ ಗುದ್ದಲಿಪೂಜೆ ಮಾಡುವುದಾಗಿ ತಿಳಿಸಿದ್ದ ಜಿಲ್ಲಾಡಳಿತ ಸಂಪೂರ್ಣವಾಗಿ ಮರೆತಂತಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಹುಟ್ಟೂರಿನಲ್ಲಿ ಮಾಸ್ತಿಯವರ ಹೆಸರನ್ನು ನೆನಪಿಸುವ ಉದ್ದೇಶದಿಂದ ಮಾಸ್ತಿ ವಸತಿ ಶಾಲೆಯನ್ನು 2007-08ರಲ್ಲಿ ಆರಂಭಿಸಲಾಯಿತು. ಆದರೆ ಅಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದು, ವಸತಿ ಶಾಲೆಗೆ ಸ್ವಂತ ಕಟ್ಟಡವಿಲ್ಲದೆ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4 ಕೊಠಡಿಗಳಲ್ಲೇ ಶಾಲೆ ನಡೆಯುತ್ತಿದೆ. ವಸತಿ ಶಾಲೆ ಪ್ರಾರಂಭವಾದಾಗ ರಾಜ್ಯದ ಬೆಂಗಳೂರು, ತುಮಕೂರು, ಕೋಲಾರ, ಇನ್ನೂ ಇತರೆ ಜಿಲ್ಲೆಗಳು ಸೇರಿದಂತೆ ಅನೇಕ ಮಂದಿ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಸೇರಿದ್ದರು. ಆದರೆ ಇಲ್ಲಿನ ಸಮಸ್ಯೆಯಿಂದ ಅಲ್ಲಿನ ಮಕ್ಕಳು ವರ್ಗಾವಣೆಗೊಂಡರು ಬರಬರುತ್ತಾ ಪ್ರತಿ ವರ್ಷ ಮಕ್ಕಳ ಸಂಖ್ಯೆ ಕಡಿಮೆಯಾಯಿತು ಇದೀಗ 2012-13ನೇ ಸಾಲಿನಲ್ಲಿ ಸುಮಾರು ಅಂದಾಜಿನ ಪ್ರಕಾರ 20 ವಿದ್ಯಾರ್ಥಿಗಳು ಮಾತ್ರ ಸೇರ್ಪಡೆಯಾಗಿದ್ದಾರೆ.
ಮೂಲ ಸೌಕರ್ಯ ಕೊರತೆ: ಮಾಸ್ತಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4 ಕೊಠಡಿಗಳನ್ನು ವಸತಿ ಶಾಲೆ ಮಕ್ಕಳಿಗೆ ನೀಡಲಾಗಿದ್ದು, ಅದರಲ್ಲಿಯೇ ವಿದ್ಯಾರ್ಥಿಗಳ ಪಾಠ ಪ್ರವಚನ, ಊಟ, ನಿದ್ದೆ ನಡೆಯುತ್ತಿದೆ.
ವಸತಿ ಶಾಲೆಗೆ ಸ್ವಂತ ಕಟ್ಟಡ: ವಸತಿ ಶಾಲೆಗಾಗಿ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಗ್ರಾಮದ ವರದಾಪುರ ರಸ್ತೆಯ ಸರ್ವೆ ನಂ. 525 ರಲ್ಲಿ 5 ಎಕರೆ ಜಮೀನು ನೀಡಿದ್ದು ಸರ್ವೆ ಕಾರ್ಯ ನಡೆದಿದೆ. ಈ ಹಿಂದೆ ಇದ್ದಂತಹ ಮಾಜಿ ಶಾಸಕ ಕೃಷ್ಣಯ್ಯಶೆಟ್ಟಿ ಈ ಬಗ್ಗೆ ನಿರ್ಲಕ್ಷ್ಯವಹಿಸಿದ್ದು ಇದು ಕುಂಠಿತಗೊಳ್ಳಲು ಕಾರಣವಾಯಿತು.
ಮಾಲೂರು ಶಾಸಕ ಕೆ.ಎಸ್. ಮಂಜುನಾಥಗೌಡ ಈ ಸಂಬಂಧ ಕಾಳಜಿ ವಹಿಸಿ ವಸತಿ ಶಾಲೆಯ ಕಟ್ಟಡ ಕಟ್ಟುವ ಸ್ಥಳ ಪರಿಶೀಲನೆಗೆ ಬಂದು ನಮ್ಮ ಜೊತೆ ಸಹಕರಿಸಿ ಈ ಬಗ್ಗೆ ಉಸ್ತುವಾರಿ ಸಚಿವರ ಬಳಿಯೂ ಮಾತನಾಡುವುದಾಗಿ ಈ ವಿಷಯದ ಬಗ್ಗೆ ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯುವುದಾಗಿ ನಮಗೆ ಆಶ್ವಾಸನೆ ನೀಡಿದ್ದಾರೆ.
ಅದರಂತೆ ಇದೀಗ ಮಕ್ಕಳನ್ನು ಸರ್ಕಾರಿ ಶಾಲೆಯ ಕೊಠಡಿಗಳಲ್ಲಿ ಇರಿಸಿದ್ದು, ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿ ರಚನೆ ಮಾಡಿದ್ದು, ಮಕ್ಕಳಿಗೆ ಬಿಇಒ. ಮಾರ್ಶನದಲ್ಲಿ ಸ್ಥಳೀಯ ಮುಖ್ಯ ಶಿಕ್ಷಕರಿಂದ ಉತ್ತಮ ಊಟದ ವ್ಯವಸ್ಥೆ ಸಕಲ ಸೌಕರ್ಯ ನೀಡುವುದಾಗಿ ಇದರ ಅಂದಾಜು ವೆಚ್ಚ ವರ್ಷಕ್ಕೆ 5 ಲಕ್ಷ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಆದಷ್ಟೂ ಬೇಗ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಮಾಸ್ತಿ ವಸತಿ ಶಾಲೆಗೆ ಮೂಲ ಸೌಲಭ್ಯಗಳನ್ನು ಒದಗಿಸಿ ವಸತಿ ಶಾಲೆಯನ್ನು ಮಾಸ್ತಿಯಲ್ಲಿಯೇ ಉಳಿಸಿ ಕನ್ನಡ ಆಸ್ತಿಯಾಗಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

