ಮಿಣಕಿನಗುರ್ಕಿ ಮಹೇಶ್ವರಿ ಕ್ಷೇತ್ರಕ್ಕೆ ಬೇಕಿದೆ ಕಾಯಕಲ್ಪ
ವಿ.ಡಿ. ಗಣೇಶ್
ಕ.ಪ್ರ.ವಾರ್ತೆ ಗೌರಿಬಿದನೂರು ನ. 26
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿಯ ಮಿಣಕಿನಗುರ್ಕಿ ಮಹೇಶ್ವರಿ
ಕ್ಷೇತ್ರವು ಒಂದು ಕಾಲಕ್ಕೆ ರಾಜ್ಯದ ಪ್ರವಾಸಿಗರನ್ನು ಆಸ್ತಿಕರನ್ನು, ನಾಸ್ತಿಕರನ್ನು, ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುತ್ತಿತ್ತು.
ಆದರೆ, ಇಂದು ಮೂಲ ಸೌಕರ್ಯಗಳಿಲ್ಲದೆ ಸೂಕ್ತ ನಿರ್ವಹಣೆ ಕೊರತೆಯಿಂದ ಕ್ಷೇತ್ರ ಕಳೆಗುಂದಿದ್ದು, ಪ್ರವಾಸಿಗರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ.
ಬೆಂಗಳೂರಿನಿಂದ 80 ಕಿ.ಮೀ.ದೂರದಲ್ಲಿರುವ ಈ ಕ್ಷೇತ್ರವು ಪ್ರವಾಸ ಪ್ರಿಯರಿಗೂ ಹೆಚ್ಚು ಮುದನೀಡುತ್ತಿದ್ದ ಇಲ್ಲಿ ಈಗ ನೀರಿನ ಸಮಸ್ಯೆ, ಸೂಕ್ತ ನಿರ್ವಹಣೆ ಕೊರತೆಯಿಂದ ವಿಶೇಷ ರೀತಿಯಲ್ಲಿ ನಿರ್ಮಿಸಿರುವ ನವಗ್ರಹ ಮಂಟಪ, ನವಗ್ರಹವನ, ರಾಶಿವನ, ದೇವಿವನ, ಧನ್ವಂತರಿವನ, ತುಳಸಿವನ, ಶಿವಪಂಚಾಯತನ ಮತ್ತು ದೇವಿವನದಲ್ಲಿ ಶಿವ, ವಿಷ್ಣು, ಸೂರ್ಯ, ಗಣೇಶ ಮತ್ತು ಅಂಬಿಕ ಹಾಗೂ ಮಹೇಶ್ವರಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಅದರ ಸುತ್ತ ಪತ್ರ ಪುಷ್ಪ ಮತ್ತು ವೃಕ್ಷಗಳ ಸೂಕ್ತ ನಿರ್ವಹಣೆಯ ಕೊರತೆಯಿಂದ ಒಣಗುತ್ತಿದೆ.
ದೇವಸ್ಥಾನದ ಹಿನ್ನೆಲೆ: ದೈವಭಕ್ತರಾಗಿದ್ದ ಕೊಂಡಾರ್ಯ ಎಂಬುವಪರು ಭಕ್ತಿಯಿಂದ ಮಹೇಶ್ವರಿ ದೇವಿಯ ಮೇಲೆ ಭಜನೆಗೀತೆ ಹಾಡುತ್ತಿದ್ದಾಗ ಒಮ್ಮೆ ಮಹೇಶ್ವರಿ ದೇವಿ ಕನಸಿನಲ್ಲಿ ಬಂದು ಇಲ್ಲಿಯೇ ನೆಲೆಸುತ್ತೇನೆಂದಾಗ ಕೊಂಡಾರ್ಯರು ಮಹೇಶ್ವರಿಯ ಸಣ್ಣಗುಡಿ ನಿರ್ಮಿಸಿ ಪೂಜಿಸುತ್ತಿದ್ದರು.
ವನ್ಯಪ್ರಾಣಿಗಳ ವನವಿತ್ತು: ಅರಣ್ಯ ಇಲಾಖೆ ಸಹಕಾರ ದಿಂದ ಜಿಂಕೆ, ಮೊಲ, ನವಿಲು ಮತ್ತು ಪಕ್ಷಿಗಳಿಂದ ಕೂಡಿರುವ ವನ್ಯಪ್ರಾಣಿಗಳ ವನವನ್ನು ಸ್ಥಾಪಿಸಲಾಗಿತ್ತು ಆದರೆ ಸೂಕ್ತ ನಿರ್ವಹಣೆ ಇಲ್ಲದೆ ನಾಯಿಗಳಿಂದ ದಾಳಿಯಾಗಿ ಜಿಂಕೆಗಳು ಸಾವನ್ನಪ್ಪಿದ್ದವು, ನವಿಲುಗಳು ಕಳ್ಳರ ಪಾಲಾಗಿದ್ದವು, ಈಗ ಹೆಸರಿಗೆ ಮಾತ್ರ ಎಂಬಂತೆ 2ಜಿಂಕೆಗಳನ್ನು ನಿರ್ವಹಿಸಲಾಗುತ್ತಿದೆ.
ಪ್ರತಿವರ್ಷವೂ ಚೈತ್ರ ಪೂರ್ಣಮಿಯಂದು ಮಹೇಶ್ವರಿಯ ಬ್ರಹ್ಮರಥೋತ್ಸವ ಹಾಗೂ 3ದಿನಗಳ ಜಾತ್ರೆ ನಡೆಯುತ್ತದೆ.
ನೀರಿನ ಸೂಕ್ತ ವ್ಯವಸ್ಥೆಯಿಲ್ಲ, ನೀರಿನ ಕಾರಂಜಿಗಳ ಸ್ಥಗಿತಗೊಂಡಿದೆ ಗಿಡಮರಗಳು ಹಾಗೂ ಔಷಧೀಯ ಸಸ್ಯಗಳು, ಎಲ್ಲಾ ರೀತಿಯ ವನಗಳು ಒಣಗುತ್ತಿದೆ. ವ್ಯವಸ್ಥಾಪಕ ಟ್ರಸ್ಟಿಯಾಗಿ ನಿರ್ವಹಿಸುತ್ತಿದ್ದ ಎಂ. ವಾಸುದೇವಯ್ಯ ಅವರಿದ್ದ ಕಾಲದಲ್ಲಿ ತೋಟಗಾರಿಕೆ ಇಲಾಖೆಯಿಂದ ತೋಟಗಾರಿಕೆ ಇಲಾಖೆಯಿಂದ ಸುಂದರವನವನ್ನು ನಿರ್ವಹಿಸಲಾಗುತ್ತಿತ್ತು ಅವರ ಮರಣಾನಂತರ ಅವರ ಪತ್ನಿ ಈ ಕ್ಷೇತ್ರವನ್ನು ನಿರ್ವಹಿಸುತ್ತಿದ್ದು, ಮಠಾಧೀಶರೋ, ಶಾಸಕರು, ಸಚಿವರು ಹಾಗೂ ಪ್ರವಾಸೋಧ್ಯಮ ಮತ್ತು ಮುಜರಾಯಿ ಇಲಾಖೆ ಆಸಕ್ತಿವಹಿಸಿ ಅಭಿವೃದ್ಧಿ ಪಡಿಸಿದರೆ, ಭಕ್ತರಿಗೆ ದೇವಲೋಕವಾಗಿ, ಪ್ರವಾಸಿಗರಿಗೆ ಸ್ವರ್ಗಲೋಕವಾಗಿ, ಹಸಿರು ಪ್ರಿಯರಿಗೆ ಹಸಿರುಲೋಕವಾಗಿ ಹಸಿರುಲೋಕವಾಗಿ, ಪ್ರೇಮಿಗಳಿಗೆ ಪ್ರೇಮಲೋಕವಾಗಿ, ಪಕ್ಷಿಗಳಿಗೆ, ವನ್ಯಜೀವಿಗಳಿಗೆ ಆಶ್ರಯ ತಾಣವಾಗಿದ್ದ ಹಾಗೂ ಮನಶಾಂತಿಗಾಗಿ ಭೇಟಿನೀಡುತ್ತಿದ್ದ ಜನರಿಗಾಗಿ ಈ ಕ್ಷೇತ್ರವನ್ನು ಉಳಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

