ಕೋಲಾರ

ಕ್ಷುಲ್ಲಕ ಕಾರಣಕ್ಕೆ ಜಗಳ; ನಾಲ್ವರು ಆಸ್ಪತ್ರೆಗೆ

Published On :

ಚಿಂತಾಮಣಿ; ಕ್ಷುಲ್ಲಕ ಕಾರಣಕ್ಕೆ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ 4 ಮಂದಿ ತೀವ್ರ ಗಾಯಗೊಂಡು, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಜಂಗಮಶೀಗನಹಳ್ಳಿಯಲ್ಲಿ ನಡೆದಿದೆ.
ಜಂಗಮಶೀಗನಹಳ್ಳಿ ನಾರಾಯಣಪ್ಪ ಎಂಬವರ ಹುಡುಗ ವಿನೋದ ಮಳೆ ಬೀಳುತ್ತಿರುವುದರಿಂದ ಮನೆ ಮೇಲಿದ್ದ ಬಟ್ಟೆ ತೆಗೆಯಲು ಹೋದಾಗ ಪಕ್ಕದ ಮನೆಯ ಮೇಘನಾ ಎಂಬ ಹುಡುಗಿ ಸ್ನಾನದ ಕೋಣೆಯ ಕಿಟಕಿಯಲ್ಲಿ ನೋಡಿದ ಎಂದು ಆರೋಪಿಸಿ ನಾರಾಯಣಪ್ಪ, ಮುನಿರಾಜು, ದೇವರಾಜು, ಬಚ್ಚಮ್ಮ, ಸವಿತಾ,ನಾರಾಯಣ ಎಂಬವರು ಪಾರ್ವತಮ್ಮ, ಆಂಜನಪ್ಪ, ವಿನೋದ, ವಿಶ್ವನಾಥ ಎಂಬವರ ಮೇಲೆ ದೊಣ್ಣೆ, ಕಲ್ಲುನಿಂದ ಮನೆಗೆ ನುಗ್ಗಿ ಗೃಹಪಯೋಗಿ ವಸ್ತುಗಳನ್ನು ನಾಶಪಡಿಸಿರುವುದಾಗಿ ಆಂಜನಪ್ಪನ ಮಗ ವಿಶ್ವನಾಥ ಪೊಲೀಸರಿಗೆ ದೂರು ನೀಡಿದ್ದಾರೆ.
ಹಳೇ ವೈಶಮ್ಯ: ಗ್ರಾಮದ ನಾರಾಯಣಪ್ಪ ಹಾಗೂ ಮುನಿಆಂಜಪ್ಪ ಎಂಬ 2 ಕುಟುಂಬಗಳಿಗೂ ಕಳೆದ ಹಲವು ವರ್ಷಗಳಿಂದ ನಿವೇಶನಕ್ಕೆ ಸಂಬಂಧಿಸಿ ವೈಮನಸ್ಸು ಇತ್ತು ಎನ್ನಲಾಗಿದೆ. ತೀವ್ರ ಗಾಯಗೊಂಡ ಪಾರ್ವತಮ್ಮ, ಮುನಿಆಂಜಪ್ಪ, ವಿನೋದ, ವಿಶ್ವನಾಥ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಪಾರ್ವತಮ್ಮ ಹಾಗೂ ಮುನಿಆಂಜಪ್ಪ ಪರಿಸ್ಥಿತಿ ಗಂಭೀರವಾಗಿರುವುದರಿಂದ ಕೋಲಾರ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.
ಬೂದಿ ಮುಚ್ಚಿದ ಕೆಂಡ: ಎರಡೂ ಕುಟುಂಬಗಳ ನಡುವೆ ಘರ್ಷಣೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ಪರಿಸ್ಥಿತಿ ನಿರ್ಮಾಣಗೊಂಡಿರುವುದರಿಂದ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ವೆಂಕಟೇಶಮೂರ್ತಿ, ಸಬ್‌ಇನ್ಸ್ ಪೆಕ್ಟರ್ ರಾಘವೇಂದ್ರ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಬಚ್ಚಮ್ಮ ಹಾಗೂ ಮೇಘನಾ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.