ಟೊಮೆಟೋ ಮಾರುಕಟ್ಟೆ ಹೊಸ ವರ್ಷದಲ್ಲಿ ಲೋಕಾರ್ಪಣೆ
ಬಂಗಾರಪೇಟೆ: ತಾಲೂಕಿನ ರೈತರ ಬಹುದಿನಗಳ ಕನಸಾಗಿರುವ ಟೋಮೇಟೋ ಮಾರುಕಟ್ಟೆಯನ್ನು ಹೊಸ ವರ್ಷದ ಮೊದಲ ವಾರದಲ್ಲಿ ಲೋಕಾರ್ಪಣೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡುವುದಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬಿ.ವಿ. ಮಹೇಶ್ ತಿಳಿಸಿದರು.
ಮಾರುಕಟ್ಟೆ ಸಪ್ತಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಹಲವು ವರ್ಷಗಳಿಂದ ಚಾಲನೆಯಾಗದೆ ನೆನೆಗುದಿಗೆ ಬಿದ್ದಿದ್ದ ಟೋಮೇಟೋ ಮಾರುಕಟ್ಟೆಗಿದ್ದ ಅಡೆತಡೆಗಳನ್ನು ನಿವಾರಿಸಿ ಜನವರಿ ತಿಂಗಳಲ್ಲಿ ಪ್ರಾಂರಭಿಸುವ ಮೂಲಕ ರೈತರಿಗೆ ಹೊಸ ವರ್ಷದ ಕಾಣಿಕೆ ನೀಡುವುದಾಗಿ ಹೇಳಿ ರೈತರು ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ದೊರೆಯುವಂತೆ ಪ್ರಯತ್ನಿಸುವುದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಮುಖ್ಯ ಉದ್ದೇಶವಾಗಿದೆ ಮಾರುಕಟ್ಟೆ ಪ್ರಯತ್ನದ ಬಳಿಕವೂ ಸೂಕ್ತ ಬೆಲೆ ಸಿಗದೆ ಇರುವುದಕ್ಕೆ ಇದಕ್ಕೆ ರೈತರು ಸುಗ್ಗಿಯ ಮಸಯದಲ್ಲಿ ಅವರ ಸಣ್ಣ ಪುಟ್ಟ ಸಾಲಗಳು ಹಾಗೂ ಇತರೆ ಹಣಕಾಸಿನ ತೊಂದರೆಯನ್ನು ಆದಷ್ಟು ಬೇಗನೆ ಪರಿಹರಿಸಿಕೊಳ್ಳಲು ತೀರ ಆತುರದಿಂದ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದು ಇದರಿಂದಾಗಿ ಮಾರುಕಟ್ಟೆಯಲ್ಲಿ ಉತ್ಪನ್ನದ ಸರಬರಾಜು ಅತಿಯಾಗಿ ಬೆಲೆಗಳು ಕುಸಿಯುತ್ತದೆ.
ಈ ಗೊಂದಲ ನಿವಾರಣೆಗೆ ನಮ್ಮಲ್ಲಿ ಉತ್ಪನ್ನಗಳ ಅಡಮಾನ ಸಾಲ ಯೋಜನೆಯನ್ನು ರೂಪಿಸಲಾಗಿದೆ ಈ ಯೋಜನೆಯ ಅನ್ವಯ ಕೃಷಿ ಉತ್ಪನ್ನಗಳಿಗೆ ಅತ್ತಮ ಧಾರಣೆ ದೊರೆಯದೇ ಬೆಲೆ ಕುಸಿದಾಗ ರೈತರನ್ನು ಆರ್ಥಿಕ ಸಂಕಷ್ಟದಿಂದ ತಪ್ಪಿಸಲು ಮಾರುಕಟ್ಟೆ ಸಮಿತಿಗಳಲ್ಲಿ ಪ್ರತ್ಯೇಕ ಆವರ್ತ ನಿಧಿಯನ್ನು ಕ್ರೋಡಿಕರಿಸಿ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಅಡವಿಟ್ಟು ಅಲ್ಪಾವಧಿ ಮುಂಗಡ ಸಾಲ ನೀಡಲಾಗುವುದು ಇದನ್ನು ರೈತರು ಬಳಸಿಕೊಂಡು ಸಾಲ ಮುಕ್ತರಾಗಬೇಕು ಎಂದರಲ್ಲದೆ ರೈತರು ತಮ್ಮ ಮಾಲನ್ನು ಮಾರುಕಟ್ಟೆಗೆ ತಂದು ಮಾರುವಾಗ ಅನಧಿಕೃತ ಬೀಳಿ ಚೀಟಿಗಳನ್ನು ದಿಕ್ಕರಿಸಿ ಅಧಿಕೃತ ರಸೀದಿಪಡೆಯಬೇಕು, ರೈತರು ತಮ್ಮ ಜಮೀನುಗಳಲ್ಲಿ ಗೋದಾಮು ನಿರ್ಮಿಸಿಕೊಂಡರೆ ಬಡ್ಡಿ ರಹಿತ ಸಾಲವನ್ನು ಬ್ಯಾಂಕಿನಿಂದ ಕೊಡಿಸುವ ವ್ಯವಸ್ಥೆ ಜಾರಿಯಲ್ಲಿದೆ ರೈತರ ಭಾಂದವರು ಸರ್ಕಾರದ ಯೋಜನೆಗಳನ್ನು ತಿಳಿದು ಬಳಸಿಕೊಂಡು ಆರ್ಥಿಕವಾಗಿ ಬಲಿಷ್ಟರಾಗಿ ಎಂದು ಹೇಳಿದರು. ಜಿಲ್ಲೆಯಲ್ಲೇ ಪಟ್ಟಣದ ಎಪಿಎಂಸಿ ಎಲ್ಲಾ ರೀತಿಯಲ್ಲಿಯೂ ಮೊದಲ ಸ್ಥಾನದಲ್ಲಿರುವುದಕ್ಕೆ ಹೆಮ್ಮಪಟ್ಟರು.
ಇಲಾಖೆ ಸಹಾಯಕ ನಿರ್ದೇಶಕ ಬಿ.ಜಿ.ಶಿ ವಣ್ಣ, ಸಹಾಯಕ ಪ್ರಧಾನ ವ್ಯವಸ್ಥಾಪಕ ಸ್ವಾಮಿ, ಕಾರ್ಯದರ್ಶಿ ರಾಮದೇವರು, ನಿರ್ದೇಶಕ ಎಂ.ಅಶ್ವಥ್ ಮಾತನಾಡಿದರು. ನಿರ್ದೇಶಕರಾದ ರಾಮಪ್ಪ ತಿಮ್ಮರಾಯಪ್ಪ, ಲಕ್ಷ್ಮೀದೇವಿ, ಮಂಜುನಾಥ್,ತಾಪಂ ಅಧ್ಯಕ್ಷೆ ರೇಣುಕಾಬಾಲಚಂದ್ರ,ಮುಖಂಡ ಚಕ್ರವರ್ತಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

