ಕೋಲಾರ

ಮಾಲೂರಿನಲ್ಲಿ ಸಂಚಾರಿ ಪೊಲೀಸ್ ವ್ಯವಸ್ಥೆ ಸುಧಾರಣೆಗೆ ಕ್ರಮ: ಎಸ್‌ಪಿ

Published On :

ಮಾಲೂರು: ಪಟ್ಟಣದಲ್ಲಿ ನಾಲ್ಕೈದು ದಿನದಲ್ಲಿ ಸಂಚಾರಿ ಪೊಲೀಸ್ ವ್ಯವಸ್ಥೆ ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್‌ನಿವಾಸ್ ಸಪಟ್ ಹೇಳಿದರು. ಇಲ್ಲಿನ ಪೊಲೀಸ್‌ಠಾಣೆ ಪರಿಶೀಲನೆಗಾಗಿ ಮಂಗಳವಾರ ಭೇಟಿ ನೀಡಿದ ಸಂಧರ್ಭದಲ್ಲಿ ಮಾತನಾಡಿ, ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಸರಿಪಡಿಸಲು ಮೊದಲ ಹಂತವಾಗಿ ನಾಲ್ಕು ಸಂಚಾರಿ ಪೇದೆಗಳನ್ನು ನೇಮಿಸಲಾಗುವುದು ಎಂದರು. ಸ್ಥಳೀಯ ಕೈಗಾರಿಕೆ ಉದ್ಯಮಿಗಳು ಸಹಕಾರ ನೀಡಿದಲ್ಲಿ ಪುರಸಭೆ ಅನುಮತಿ ಮೇರೆಗೆ ಪಟ್ಟಣದ ಪ್ರಮುಖ ಎರಡು ವೃತ್ತದಲ್ಲಿ ಸಿಗ್ನಲ್ ದೀಪಗಳನ್ನು ಆಳವಡಿಸುವುದಾಗಿ, ಪಟ್ಟಣದ ಕಾಲೇಜು ಬಳಿ ಪೋಲಿ ಹುಡುಗರ ಕಾಟ ಹೆಚ್ಚಾಗಿರುವ ದೂರುಗಳು ಬಂದಿದ್ದು, ಅಂತಹ ಸ್ಥಳಗಳಲ್ಲಿ ಪೊಲೀಸ್ ರೌಂಡ್ ಪ್ರಾರಂಭಿಸಲಾಗುವುದು ಎಂದರು. ತಾಲೂಕಿನಲ್ಲಿ ರಸ್ತೆ ದರೋಡೆ, ಕೊಲೆಯಂತಹ ಪ್ರಕರಣಗಳು ಸಂಭವಿಸುತ್ತಲೇ ಇದ್ದು, ಅವುಗಳನ್ನು ತಡೆಯುವ ಸಂಬಂಧ ಯೋಜನೆ ರೂಪಿಸುತ್ತಿರುವುದಾಗಿ, ಅಪರಾಧ ತಡೆಯಲು ಸಾರ್ವನಿಕರ ಸಹಕಾರ ಅಗತ್ಯ ಎಂದರು. ಅಕ್ರಮ ಮರಳು ಮಾಫಿಯಾ ರಾಜ್ಯ ಸರ್ಕಾರ ತರುತ್ತಿರುವ ನೂತನ ಮರಳುಗಣಿಗಾರಿಕೆ ನೀತಿ ಬಂದ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಸ್ಥಳೀಯ ಠಾಣೆಯಲ್ಲಿ ದೂರು ನೀಡಲು ಬಂದವರಿಗೆ ಉತ್ತಮವಾಗಿ ಸ್ವಂದಿಸುತ್ತಿಲ್ಲ ಎಂಬ ಪ್ರಶ್ನಗೆ ಉತ್ತರಿಸಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಸ್ಥಳೀಯ ಪೊಲೀಸ್ ಅದಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿದ್ದು, ಒಂದು ವೇಳೆ ಇಂತಹ ದೂರು ಮರುಕಳಿಸಿದರೆ ದೂರುದಾರರು ನನ್ನ ಗಮನಕ್ಕೆ ತರಬೇಕೆಂದು ಕೋರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.