'ಮಿಶ್ರ ಬೆಳೆ ಬೆಳೆಸಿ, ಆರ್ಥಿಕ ಸಬಲರಾಗಿ'
ಮಾಲೂರು; ರೈತರು ಕೃಷಿಯಲ್ಲಿ ಪೌಷ್ಟಿಕಾಂಶದ ಮಿಶ್ರ ಬೆಳೆ ಬೆಳೆಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ ಅರ್ಥಿಕ ಪರಿಸ್ಥಿತಿ ಉತ್ತಮಗೊಳಿಸಿಕೊಳ್ಳಬೇಕು ಎಂದು ಜಿ.ಕೆ.ವಿ.ಕೆ. ವಿಜ್ಞಾನಿ ಡಾ. ನಿರಂಜನ ಬಾಬು ಕರೆ ನೀಡಿದರು.
ಸ್ಥಳೀಯ ಬೆಳಕು ಸಂಸ್ಥೆ ತಾಲೂಕಿನ ಸ್ವಸಹಾಯ ಮಹಿಳಾ ಸಂಘಗಳ ಕಾರ್ಯಕರ್ತೆರಿಗಾಗಿ ಪಟ್ಟಣದ ವೈದ್ಯರ ಸಂಘದಲ್ಲಿ ಬುಧವಾರ ಆಯೋಜಿಸಿದ್ದ ರಾಜಗಿರಿ ದಂಟು ಬೆಳೆಯ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಗಿ ಜತೆಯಲ್ಲಿ ರೈತರು ಹೆಚ್ಚಿನ ಪೌಷ್ಟಿಕಾಂಶವಿರುವ ರಾಜಗಿರಿ ದಂಟಿನ ಸೊಪ್ಪು ಬೆಳೆಯಬೇಕು. ಉತ್ತಮ ಮಾರುಕಟ್ಟೆ ಬೆಲೆಯುಳ್ಳ ರಾಜಗಿರಿ ದಂಟಿನ ಬೆಳೆಯಿಂದ ರೈತರ ಅರ್ಥಿಕ ಮಟ್ಟ ಹೆಚ್ಚುವುದಲ್ಲದೇ ಅವನ್ನು ಆಹಾರದಲ್ಲಿ ಉಪಯೋಗಿಸುವ ಮೂಲಕ ಹೆಚ್ಚಿನ ಪೌಷ್ಟಿಕಾಂಶ ಪಡೆಯಬಹದು ಎಂದರು.
ಜಿ.ಕೆ.ವಿ.ಕೆಯ ಡಾ. ಶಂಶುದ್ದ್ ಬೇಗಂ ಮಾತನಾಡಿ, ಅತಿ ಹೆಚ್ಚು ಪೌಷ್ಟಿಕಾಂಶವುಳ್ಳ ರಾಜಗಿರಿ ದಂಟಿನಿಂದ ವಿವಿಧ ರೀತಿಯ ಆಹಾರ ಉತ್ಪನ್ನಗಳನ್ನು ರೈತ ಮಹಿಳೆಯರು ತಮ್ಮ ಮನೆಯಲ್ಲೇ ತಯಾರಿಸಬಹುದಾಗಿದ್ದು, ಉತ್ತಮ ಮಾರುಕಟ್ಟೆ ಸಿಗಲಿದೆ ಎಂದರು. ಬೆಳಕು ಸಂಸ್ಥೆಯ ರಂಗನಾಥ್ ಬಾಬು ಮಾತನಾಡಿ, ಕಡಿಮೆ ಖರ್ಚಿನಲ್ಲಿ ರಾಗಿ ಜತೆಯಲ್ಲಿ ಬೆಳೆಯಬಹುದಾದ ರಾಜಗಿರಿ ದಂಟು ಬೆಳೆಯನ್ನು ತಾಲೂಕಿನಲ್ಲಿ 800ಕ್ಕೂ ಹೆಚ್ಚು ರೈತರು ಬೆಳೆಯುತ್ತಿದ್ದು, ಹೆಚ್ಚಿನ ಮಾರುಕಟ್ಟೆ ಅವಶ್ಯವಾಗಿದೆ. ಎಲ್ಲ ಬ್ಯಾಂಕ್ಗಳು ಸ್ವಸಹಾಯ ಗುಂಪುಗಳಿಗೆ ಸಾಲ ನೀಡುತ್ತಿದ್ದರೂ ಪಟ್ಟಣದ ಎಸ್ಬಿಐ ಮಾತ್ರ ನಿರ್ಲಕ್ಷ್ಯ ತೋರುತ್ತಿದೆ. ಈ ನಿಟ್ಟಿನಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಸ್ವಂದಿಸದ ಎಸ್.ಬಿ.ಐ ಬ್ಯಾಂಕಿನಲ್ಲಿ ನಿರ್ವಹಣೆ ಮಾಡುತ್ತಿರುವ ಖಾತೆಗಳನ್ನು ಇಂಡಿಯನ್ ಓವರ್ಸೀಸ್ ಬ್ಯಾಂಕ್ಗೆ ವರ್ಗಾವಣೆ ಮಾಡಬೇಕಾಗಿದೆ ಎಂದರು.
ಐಒಬಿಯ ವ್ಯವಸ್ಥಾಪಕ ಜಿತೇಂದ್ರ, ರಶ್ಮಿ, ವಸಂತ, ಅನಿತಾ, ಶಾಂತ, ಬೆಳಕು ಸಂಸ್ಥೆಯ ಮಂಜುನಾಥ್ ಜವಳಿ, ಯೋಗೇಶ್, ಆಂಜಿನಪ್ಪ, ಅಣ್ಣಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

