ಕೋಲಾರ

ಸುದ್ದಿ ಸಂಕ್ಷೇಪ

Published On :

ಜೂಜು: 6 ಜನರ ಬಂಧನ
ಚಿಂತಾಮಣಿ: ನಗರದ ಹೊರವಲಯದ ಕರಿಯಪ್ಪಲ್ಲಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೋಲೀಸರು ಏಕಾಏಕಿ ದಾಳಿ ನಡೆಸಿ ಆರೋಪಿಗಳಾದ ರಾಜಾರೆಡ್ಡಿ, ಚಂದ್ರ, ನಾಗರಾಜ್ ಬಾಜಾನ್, ವೆಂಕಟರೆಡ್ಡಿ, ಅಸ್ಲಾಂ ಬಂಧಿಸಿ ರವರಿಂದ 2120 ರು. ನಗದು ಹಣ ಹಾಗೂ 2 ದ್ವಿಚಕ್ರ ವಾಹನಗಳು ಮತ್ತು ಆಟೋ ವಾಹನವನ್ನು ವಶಪಡಿಸಿಕೊಂಡಿದ್ದಾರೆ ಈ ಪ್ರಕರಣಕ್ಕೆ ಸಂಬಂದಿಸಿ ಪೊಲೀಸರು ಕೇಸು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಚಂದ್ರಶೇಖರಾನಂದ ಸ್ವಾಮೀಜಿಗೆ ಶ್ರದ್ಧಾಂಜಲಿ
ಶಿಡ್ಲಘಟ್ಟ: ಸೋಮವಾರ ನಿಧನರಾದ ಆರ್ಯ ವೈಶ್ಯ ಸಮಾಜದ ವಾಸವಿ ವಿಶ್ವ ಕುಲ ಪೀಠಾಧಿಪತಿ ಶ್ರೀ ಚಂದ್ರ ಶೇಖರಾನಂದ ಗಿರಿಸ್ವಾಮೀಜಿರವರ ಆತ್ಮಕ್ಕೆ ಶಾಂತಿ ಕೋರಿ ಇಲ್ಲಿನ ಆರ್ಯ ವೈಶ್ಯ ಕುಲ ಬಾಂಧವರು ಶ್ರದ್ಧಾಂಜಲಿ ಅರ್ಪಿಸಿದರು.
ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಸೇರಿದ ಮುಖಂಡರು ಸಂಘದ ಅದ್ಯಕ್ಷ ಎ.ಜಿ. ನಾಗೇಂದ್ರ ಅಧ್ಯಕ್ಷತೆಯಲ್ಲಿ ಸಂತಾಪ ಸೂಚಿಸಿದರು.  ಜಿಲ್ಲಾ ಆರ್ಯ ವೈಶ್ಯ ಮಹಾಸಭೆ ಉಪಾಧ್ಯಕ್ಷ ರೂಪಸಿ ರಮೇಶ್, ಶ್ರೀಗಳ ಗುಣಗಾನ ಮಾಡಿದರು.ವಾಸವಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಮೃತರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಶಾಲೆಗೆ ರಜೆ ಘೋಷಿಸಲಾಯಿತು. ಸಭೆಯಲ್ಲಿ ಮುಖಂಡರಾದ ಎಸ್.ಎನ್, ಸತ್ಯನಾರಾಯಣ ಶೆಟ್ಟಿ, ವಾಸವಿಯ ಯುವಜನ ಸಂಘದ ಅದ್ಯಕ್ಷ ಎ.ಎನ್.ಕೇದಾರಿನಾಥ್, ಮುರಳಿ ಕೃಷ್ಣ, ವಾಸವಿ ಮಹಿಳಾ ಮಂಡಳಿಯ ಗಜಲಕ್ಷೀ ಭೂಷಣ್  ಮತ್ತಿತರರು ಇದ್ದರು.
30ರಂದು ನಾಟಕ ಪ್ರದರ್ಶನ
ಕೆಜಿಎಫ್: ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಗಡಿನಾಡು ಸಾಂಸ್ಕೃತಿಕ ಕಲಾವಿದರ ವೇದಿಕೆ ವತಿಯಿಂದ ಇದೇ ತಿಂಗಳು ನ.30 ರಂದು ಶನಿವಾರ ಕೆಜಿಎಫ್‌ನ ಕಿಂಗ್‌ಜಾರ್ಜ್‌ಹಾಲ್‌ನಲ್ಲಿ ಸತಿಸಾವಿತ್ರಿ ಪೌರಾಣಿಕ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಶನಿವಾರ ಸಂಜೆ 7 ಗಂಟೆಗೆ ನಡೆಯಲಿರುವ ನಾಟಕ ಪ್ರದರ್ಶನದ ಜೊತೆಗೆ ನಗರದ  ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಹಾಸ್ಯೋತ್ಸವ ಕಾರ್ಯಕ್ರಮವನ್ನು ವೇದಿಕೆ ಅಧ್ಯಕ್ಷ ಜಿ. ಪ್ರಭಾಕರರೆಡ್ಡಿ ನೇತೃತ್ವದಲ್ಲಿ ಏರ್ಪಡಿಸಲಾಗಿದೆ ಎಂದು ವೇದಿಕೆ ಸಂಚಾಲಕ ಎಫ್.ಎಂ. ಅಶ್ವತ್ ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿಕಟೋಚ್ ಸೆಫಟ್, ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಕೆಜಿಎಫ್ ಶಾಸಕಿ ವೈ. ರಾಮಕ್ಕ, ಡಿಡಿಪಿಐ ಎಸ್.ವಿ. ಪದ್ಮನಾಭ ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.