ಕೋಲಾರ

ಸುದ್ದಿ ಸಂಕ್ಷೇಪ

Published On :

ಇಂದು ಕನ್ನಡ ರಾಜ್ಯೋತ್ಸವ
ಚಿಕ್ಕಬಳ್ಳಾಪುರ; ತಾಲೂಕಿನ ಅಂಗರೇಖನಹಳ್ಳಿಯಲ್ಲಿ ನ.29 ಸಂಜೆ 5.30 ಕ್ಕೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಂಗರೇಖನಹಳ್ಳಿ ಡಾ. ರಾಜ್ ಕುಮಾರ್ ಕನ್ನಡ ಯುವಕರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ಯಲುವಹಳ್ಳಿ ಎನ್. ರಮೇಶ್ ಉದ್ಘಾಟಿಸಲಿದ್ದು, ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವೈ.ಎಲ್. ಹನುಮಂತರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಪಿ.ನವಮೋಹನ್, ತಾಪಂ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷೆ ಲಕ್ಷ್ಮಮ್ಮ ಆಂಜನಪ್ಪ, ತಿಪ್ಪೆನಹಳ್ಳಿ ಪಿ. ನಾರಾಯಣಸ್ವಾಮಿ, ಜಿಪಂ ಸದಸ್ಯ ಪಿ.ಎನ್. ಮುನೇಗೌಡ, ಗ್ರಾಪಂ ಅಧ್ಯಕ್ಷ ಆರ್.ವೈ. ರಾಮಾಂಜಿನಿ, ಸದಸ್ಯ ಚನ್ನಕೇಶವಮೂರ್ತಿ, ರಾಧಮ್ಮ, ಕೆ.ವಿ. ಡಿಇಡಿ ಕಾಲೇಜಿನ ಉಪನ್ಯಾಸಕ ಹಾಲಪ್ಪ, ಇ. ರಾಮಕೃಷ್ಣ, ಎ.ಟಿ. ರಾಮಕೃಷ್ಣೇಗೌಡ ಭಾಗವಹಿಸಲಿದ್ದಾರೆ. ಸಿಂಧೂರ ನೃತ್ಯ ಅಕಾಡೆಮಿ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೃತ್ಯೋತ್ಸವ ನಡೆಯಲಿದೆ ಎಂದು ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಂ. ಕೃಷ್ಣಪ್ಪ ತಿಳಿಸಿದ್ದಾರೆ.
ಪಡಿತರ ಚೀಟಿ ಪರಿಶೀಲನೆ
ಶಿಡ್ಲಘಟ್ಟ: ಸಾರ್ವಜನಿಕರು ಆನ್ ಲೈನ್‌ನಲ್ಲಿ ಪಡಿತರ ಚೀಟಿಗೆ ಹಾಕಿರುವ ಅರ್ಜಿಗಳನ್ನು ಪರಿಶೀಲಿಸುವ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಪುರಸಭೆಯ ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕರು ಪರಿಶೀಲನಾ ಕಾರ್ಯದಲ್ಲಿ ತೊಡಗಿದ್ದು ಅಧಿಕಾರಿಗಳು ಅರ್ಜಿ ಹಾಕಿರುವಂತಹವರ ಮನೆಗಳಿಗೆ ಭೇಟಿ ನೀಡಿ, ಅರ್ಜಿದಾರರು ಎಪಿಎಲ್ ಅಥವಾ ಬಿಪಿಎಲ್ ಸೇರಿದಂತೆ ಯಾವ ಚೀಟಿ ಪಡೆಯಲು ಅರ್ಹರಾಗಿದ್ದಾರೆ ಎನ್ನುವುದನ್ನು ಗುರುತಿಸಲಿದ್ದಾರೆ ಎಂದು ಆಹಾರ ಇಲಾಖೆಯ ಶಿರಸ್ತೆದಾರ್ ರಂಗನಾಥ್ ತಿಳಿಸಿದ್ದಾರೆ.
ರು. 5 ಲಕ್ಷ ಬೆಲೆ ಬಾಳುವ ಗುಟ್ಕಾ ವಶ
ಗೌರಿಬಿದನೂರು: ಅಕ್ರಮವಾಗಿ ದಾಸ್ತಾನು ಮಾಡಿದ್ದ ಸುಮಾರು 5ಲಕ್ಷ ರು. ಮೌಲ್ಯದ ಸುಮಾರು 65 ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಟ್ಟಿದ್ದ ಗುಟ್ಕಾ ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸಿಪಿಐ ಕೆ. ನಾಗರಾಜ್, ಪಿಎಸ್‌ಐ ಬೈರ ಮತ್ತು ತಂಡ ಪಟ್ಟಣದ ನೆಹರೂಜಿ ಕಾಲೊನಿಯ ವ್ಯಾಪಾರಿ ಅಸ್ಲಾಂಪಾಷಾ ಮತ್ತು ನ್ಯೂಪೇಟೆ ಮೇದರಬೀದಿಯ ವಾಸಿ ರಾಮು ಅಲಯಾಸ್ ವೆಂಕಟರಾಮು ದಾಸ್ತಾನು ಮಾಡಿದ್ದ ಗುಟ್ಕಾಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.