ಗ್ರಾಹಕರ ಪ್ರಾಣ, ಹಣದ ರಕ್ಷಣೆಗೆ ಸುರಕ್ಷಾ ಕ್ರಮ ಕೈಗೊಳ್ಳಿ
ಕೆಜಿಎಫ್: ಬ್ಯಾಂಕುಗಳಲ್ಲಿ ಹಾಗೂ ಎಟಿಎಂ ಕೇಂದ್ರಗಳಲ್ಲಿ ಗ್ರಾಹಕರಿಗೆ ಸೂಕ್ತ ಭದ್ರತೆಯನ್ನು ಒದಗಿಸಲು ಸುರಕ್ಷಿತಾ ವಿಧಿ ವಿಧಾನಗಳನ್ನು ಪಾಲಿಸಬೇಕು ಎಂದು ಕೆಜಿಎಫ್ ಎಸ್ಪಿ ಡಾ. ರೋಹಿಣಿಕಟೋಚ್ ಸೆಫಟ್ ಹೇಳಿದ್ದಾರೆ.
ಅವರು ತಮ್ಮ ಕಚೇರಿಯಲ್ಲಿ ಏರ್ಪಡಿಸಿದ್ದ ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರ ಹಾಗೂ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿ ಬ್ಯಾಂಕು ಹಾಗೂ ಎಟಿಎಂ ಕೇಂದ್ರಗಳಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ ಗ್ರಾಹಕರ ಪ್ರಾಣ ಮತ್ತು ಹಣದ ರಕ್ಷಣೆಗಾಗಿ ಎಲ್ಲಾ ಬ್ಯಾಂಕುಗಳ ಅಧಿಕಾರಿಗಳು ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ಎಟಿಎಂ ಮತ್ತು ಬ್ಯಾಂಕುಗಳಿಗೆ 24 ಗಂಟೆಗಳ ಕಾಲ ಕಡ್ಡಾಯವಾಗಿ ಶಸ್ತ್ರಸಜ್ಜಿತ ಕಾವಲುಗಾರರ ನೇಮಕ, ಬ್ಯಾಂಕ್ನ ಒಳಗೆ ಮತ್ತು ಹೊರಗೆ 24 ಗಂಟೆಗಳ ಕಾಲ ನಿಂರಂತರ ವಿದ್ಯುತ್ ಸಂಪರ್ಕ ಇರುವಂತೆ ಯುಪಿಎಸ್, ವ್ಯವಸ್ಥೆ, ಬ್ಯಾಂಕಿನ ಆವರಣದ ಸುತ್ತಲೂ ಅಗತ್ಯವಾದ ಲೈಟಿಂಗ್ ವ್ಯವಸ್ಥೆ, ಎಲ್ಲಾ ಬ್ಯಾಂಕುಗಳಿಗೆ ಹತ್ತಿರದ ಪೊಲೀಸ್ ಠಾಣೆಗಳಿಗೆ ಹಾಟ್ಲೈನ್ ದೂರವಾಣಿ ಸಂಪರ್ಕವನ್ನು ಪಡೆಯಬೇಕು ಎಂದು ಸೂಚಿಸಿದರು. ಎಟಿಎಂ ಹಾಗೂ ಬ್ಯಾಂಕುಗಳಿಗೆ ಸೈರನ್ ವ್ಯವಸ್ಥೆ, ಹಣವನ್ನು ಸಾಗಿಸುವಾಗ ಪೊಲೀಸ್ ಬೆಂಗಾವಲು ವ್ಯವಸ್ಥೆ, ಸಿಸಿ ಕ್ಯಾಮೆರಾಗಳ ಅಳವಡಿಕೆ, ಎಟಿಎಂ ಕೇಂದ್ರಗಳನ್ನು ಹೆಚ್ಚಾಗಿ ಜನಸಂದಣಿ ಇರುವಂತಹ ಸ್ಥಳಗಳಲ್ಲಿ ಮಾತ್ರ ಸ್ಥಾಪಿಸುವಂತೆ, ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಜನ ಸಂದಣಿ ಕಡಿಮೆ ಇರುವ ಪ್ರದೇಶಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ವರೆಗೆ ಎಟಿಎಂಗಳನ್ನು ಸಾಧ್ಯವಾದರೆ ಮುಚ್ಚುವಂತೆ ಎಸ್ಪಿ ಡಾ.ರೋಹಿಣಿಕಟೋಚ್ ಸೆಫಟ್ ಸೂಚಿಸಿದರು.
ಸಭೆಯಲ್ಲಿ ಕೆಜಿಎಫ್, ಬಂಗಾರಪೇಟೆ, ಬೇತಮಂಗಲ, ಕಾಮಸಮುದ್ರಂ, ಸುಂದರಪಾಳ್ಯ, ಆಂಡ್ರಸನ್ಪೇಟೆ, ಕೆಂಪಾಪುರ, ಬೆಮೆಲ್ನಗರ ಸೇರಿದಂತೆ ಮತ್ತಿತರ ಬ್ಯಾಂಕುಗಳ ವ್ಯವಸ್ಥಾಪಕರು, ಅಧಿಕಾರಿಗಳು ಹಾಗೂ ಪೊಲೀಸ್ ಉಪರಕ್ಷಣಾಧಿಕಾರಿ ಹೆಚ್.ಪಿ. ರಾಜಣ್ಣ, ಸರ್ಕಲ್ ಇನ್ಸ್ಪೆಕ್ಟರ್ ಎಂ.ಡಿ. ಲಕ್ಷ್ಮೀನಾರಾಯಣ, ವೆಂಕಟಾಚಲಪತಿ, ಜಿ.ಟಿ. ಸ್ವಾಮಿ ಹಾಗೂ ಪಿಎಸ್ಐಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

