'ಆಟೋ ಚಾಲಕರ ಕನ್ನಡ ಸೇವೆ ಪ್ರಶಂಸನೀಯ'
ಗೌರಿಬಿದನೂರು: ಆಟೋ ಚಾಲಕರು ಕನ್ನಡ ಉಳಿಸಿ ಬೆಳೆಸಲು ತಮ್ಮದೇ ಆದ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯಪುರ ವೃತ್ತ ನಿರೀಕ್ಷಕ ಎಸ್. ಮಹೇಶ್ ಕುಮಾರ್ ತಿಳಿಸಿದರು.ಪಟ್ಟಣದ ಕೆಎಸ್ಆರ್ಟಿಸಿ ಮುಂಬಾಗದ ಗಂಗಾಭಾಗೀರಥಿ ಆಟೋ ಚಾಲಕರ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ಆಟೋ ಚಾಲಕರು ತಾಲೂಕಿನ ನಿಜವಾದ ರಾಯಬಾರಿಗಳು ಎಂದರು.ಡಾ. ಶಶಿಧರ್ ಮಾತನಾಡಿ, ಕನ್ನಡ ಭಾಷೆಗೆ ಎರಡು ಸಾವಿರದ ವರ್ಷಗಳ ಇತಿಹಾಸ ವಿದ್ದು, ಇತ್ತೀಚಿನ ದಿನಗಳಲ್ಲಿ ಕನ್ನಡ ಪರ ಸಂಘಟಣೆಗಳು ಹಾಗೂ ಆಟೋ ಚಾಲಕರ ಸಂಘಗಳು ಕನ್ನಡಕ್ಕಾಗಿ ತಮ್ಮದೆ ಆದ ಸೇವೆ ಸಲ್ಲಿಸುತ್ತಿರುವುದು ಪ್ರಶಂಸನೀಯ ಎಂದರು. ಇದೇ ಸಂದರ್ಭದಲ್ಲಿ ಆಟೋ ಚಾಲಕರ ಮಕ್ಕಳಿಗಾಗಿ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದರು. ದೇವಿ ಮಂಜುನಾಥ್, ಅಮಾನುಲ್ಲಾ, ಸಣ್ಣಕ್ಕಿ ವೆಂಕಟರವಣಪ್ಪ, ವೆಂಕಟಾಚಲ, ವಿಶ್ವನಾಥ ಗುಪ್ತ, ಅಮ್ಜತ್ ಖಾನ್ , ಚಂದ್ರ ಇದ್ದರು.
'ಮಕ್ಕಳ ಪ್ರತಿಭೆ ಅನಾವರಣಗೊಳ್ಳಲಿ'
ಗೌರಿಬಿದನೂರು: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅರಳಿಸಲು ಪ್ರತಿಭಾ ಕಾರಂಜಿ ಸ್ಪರ್ಧೆಗಳು ಸಹಕಾರಿ ಎಂದು ಗೆದರೆ ಗ್ರಾಪಂ ಅಧ್ಯಕ್ಷ ಶಿವಾನಂದರೆಡ್ಡಿ ಅಭಿಪ್ರಾಯಪಟ್ಟರು. ಗೆದರೆ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಕ್ಲಸ್ಟರ್ ಮಟ್ಟದ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಕೇವಲ ಪಠ್ಯಕ್ರಮದಿಂದ ಮಗುವಿನ ಪೂರ್ಣ ವ್ಯಕ್ತಿತ್ವ ರೂಪಿಸಲು ಸಾಧ್ಯವಿಲ್ಲ, ಇಂತಹ ಸ್ಪರ್ಧೆಗಳು ಆಗಿಂದಾಗ್ಗೆ ನಡೆಯುವುದರಿಂದ ಮಕ್ಕಳ ಪ್ರತಿಭೆಬೆಳೆಸಲು ಪೂರಕ ಎಂದು ಮಾರ್ಗದರ್ಶಿ ಶಿಕ್ಷಕ ಜಿ.ಸಿ. ರಾಮಚಂದ್ರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಬಾರಿ ಮುಖ್ಯಶಿಕ್ಷಕ ರಾಜಶೇಖರ್ ಎಚ್.ವಿ ಮಾತನಾಡಿರು. ಪಂಚಾಯಿತಿ ಸದಸ್ಯರಾದ ಜಿ.ಸಿ.ಶ್ರೀನಿವಾಸ್, ಅಶ್ವಥನಾರಾಯಣ್, ಶಿವಕುಮಾರರೆಡ್ಡಿ, ರತ್ನಮ್ಮ ಚಂದ್ರಣ್ಣ, ಸೋಮಯ್ಯ, ನರಸಿಂಹಯ್ಯ, ಶ್ರೀರಾಮಯ್ಯ,ಚೆನ್ನಿಗರಾಯಪ್ಪ, ಪ್ರಸಾದ್, ಲಕ್ಷ್ಮೀಪತಿ ಇದ್ದರು.
ಸ್ಪಿರಿಟ್ ಸಿಡಿದು ವಿದ್ಯಾರ್ಥಿಗೆ ಗಾಯ
ಗೌರಿಬಿದನೂರು: ತಾಲೂಕು ಡಿ.ಪಾಳ್ಯ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ 9ನೇ ತರಗತಿ ವಿದ್ಯಾರ್ಥಿ ಪವನ್ ವಿಜ್ಞಾನ ಪ್ರಯೋಗ ನಡೆಸುತ್ತಿದ್ದಾಗ ಸ್ಪಿರಿಟ್ ಸಿಡಿದು ಕುತ್ತಿಗೆ ಹತ್ತಿರ ಸಣ್ಣಗಾಯವಾಗಿದೆ. ಡಿ. ಪಾಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಗಾಯ ಸಣ್ಣದಾಗಿದ್ದು ಅಪಾಯವಿಲ್ಲ ಎಂದು ಕ್ಷೇತ್ರ ಶಿತ್ರಣಾಧಿಕಾರಿ ಬೈಯಪ್ಪರೆಡ್ಡಿ ತಿಳಿಸಿದ್ದಾರೆ.
ಪ್ರತಿಭಾ ಪುರಸ್ಕಾರ
ಮಾಲೂರು: ತಾಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ತಾಲೂಕಿನ ಕುಲಬಾಂಧವರಿಗೆ ಡಿಸೆಂಬರ್ ಎರಡನೇ ವಾರದಲ್ಲಿ ಪ್ರತಿಭಾಪುರಸ್ಕರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಹಮ್ಮಿಕೊಂಡಿದೆ. 2008-09 ನಿಂದ ಕಳೆದ ಸಾಲಿನ ವರೆಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಯಲ್ಲಿ ಶೇ.75 ಕ್ಕೂ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳೂ ಹಾಗೂ ನಿವೃತ್ತ ನೌಕರರು ತಮ್ಮ ಹೆಸರನ್ನು ಡಿಸೆಂಬರ್ 10 ರೊಳಗೆ ನೋಂದಾಯಿಸಿಕೊಳ್ಳುವಂತೆ ಸಂಘ ಕೋರಿದೆ. ಹೆಸರು ನೋಂದಾಯಿಸಿಕೊಳ್ಳಲು ಟಿ.ಕೆ. ಅಶ್ವಥ್ ನಾರಾಯಣ್ ಗೌಡ(9900810964), ತಿಮ್ಮರಾಯಪ್ಪ ಎಮ್ (9448714296), ಕೆಂಪಣ್ಣ ಎನ್(9448022395), ಎಂ. ಮುನಿನಾರಾಯಣ (8050319080), ಮುನಿರಾಜು (9141103684)ರನ್ನು ಸಂಪರ್ಕಿಸಲು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

