ಚಿಕ್ಕಬಳ್ಳಾಪುರ ಜಿಲ್ಲೆ: 2,243 ಸೋಂಕಿತರು
ಚಿಕ್ಕಬಳ್ಳಾಪುರ: ಏಡ್ಸ್ ವಿರುದ್ಧ ಜಾಗೃತಿ ಮೂಡಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೈರಾಡ, ಸೌಖ್ಯ ಸಂಜೀವಿನಿ ಸಂಸ್ಥೆ ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ನಿರಂತರ ಸೇವೆ ನಡೆಸುತ್ತಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2009ರಿಂದ 2013ರ ಅಕ್ಟೋಬರ್ ಅಂತ್ಯಕ್ಕೆ 2,243 ಮಂದಿ ಎಚ್ಐವಿ ಸೋಂಕಿತರನ್ನು ಗುರುತಿಸಲಾಗಿದೆ.
ಆದರೆ ಇವರಲ್ಲಿ ಕೇವಲ 1,368 ಮಂದಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಎಚ್ಐವಿ ಸೋಂಕಿತರಲ್ಲಿ ಪುರುಷರದ್ದೇ ಮೇಲುಗೈ. 1,111 ಮಂದಿ ಪುರುಷರು ಮತ್ತು 1,089 ಮಂದಿ ಮಹಿಳೆಯರು ಸೋಂಕಿಗೆ ಗುರಿಯಾಗಿದ್ದು, 77 ಜನ ಮಕ್ಕಳಲ್ಲಿ 36 ಮಂದಿ ಗಂಡು ಮಕ್ಕಳು ಮತ್ತು 41 ಮಂದಿ ಹೆಣ್ಣು ಮಕ್ಕಳು, 6 ಮಂದಿ ಲೈಂಗಿಕ ಕಾರ್ಯಕರ್ತೆಯರು ಸೋಂಕಿಗೆ ಗುರಿಯಾಗಿದ್ದಾರೆ.
ಜಿಲ್ಲೆಯಲ್ಲಿ ಸೋಂಕಿತರಲ್ಲಿ ಗೌರಿಬಿದನೂರು (490) ಪ್ರಥಮ, ಚಿಂತಾಮಣಿ (477) ದ್ವಿತೀಯ ಮತ್ತು ಚಿಕ್ಕಬಳ್ಳಾಪುರ (475) ತೃತೀಯ ಸ್ಥಾನ ಪಡೆದು ಪೈಪೋಟಿಯಲ್ಲಿವೆ. ಬಾಗೇಪಲ್ಲಿ 391, ಶಿಡ್ಲಘಟ್ಟ 292, ಗುಡಿಬಂಡೆ 158 ಮಂದಿ ಎಚ್ಐವಿ ಸೋಂಕಿತರನ್ನು ಹೊಂದಿದೆ. ಗೌರಿಬಿದನೂರಿನಲ್ಲಿ 490 ಜನರಿಗೆ 290 ಮಂದಿ, ಚಿಕ್ಕಬಳ್ಳಾಪುರದಲ್ಲಿ 475 ಮಂದಿಗೆ 288, ಚಿಂತಾಮಣಿಯಲ್ಲಿ 477 ಮಂದಿಗೆ 308 ಮಂದಿ, ಬಾಗೇಪಲ್ಲಿಯಲ್ಲಿ 391 ಮಂದಿಗೆ 225 ಮಂದಿ, ಗುಡಿಬಂಡೆಯಲ್ಲಿ 158 ಮಂದಿಗೆ 83 ಮಂದಿ, ಶಿಡ್ಲಘಟ್ಟದಲ್ಲಿ 292 ಜನರಿಗೆ 174 ಮಂದಿ ಮಾತ್ರ ಚಿಕಿತ್ಸೆಯನ್ನು ಪಡೆಯುತ್ತಿದ್ದು ಇಂತಹ ಪ್ರಕರಣದಲ್ಲಿ ಸೋಂಕು ತಗುಲಿದೆ ಎಂಬ ಭೀತಿಯಲ್ಲಿ ಜಿಲ್ಲೆಯಿಂದ ಹೊರಗೆ ಹೋಗುವಂತಹುದು ಅಥವಾ ಬೇರೆ ಕಡೆಯಿಂದ ಇಲ್ಲಿಗೆ ಬಂದು ತಪಾಸಣೆ ಮಾಡಿಸಿಕೊಂಡು ಹೋಗುವಂತಹುದು ನಡೆಯುತ್ತಿದ್ದು ಜಿಲ್ಲೆಯಲ್ಲಿ 219 ಮಂದಿ ಏಡ್ಸ್ನಿಂದ ಸಾವನ್ನಪ್ಪಿದ್ದಾರೆ.
ಪರೀಕ್ಷೆಗೆ ಸೂಚನೆ: ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ಮೂಲಕ ಸೋಂಕಿಗೆ ಗುರಿಯಾಗದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲವೇ ಸೋಂಕಿಗೆ ಗುರಿಯಾಗಿರುವುದು ದೃಢಪಟ್ಟಲ್ಲಿ ಸೂಕ್ತ ಚಿಕಿತ್ಸೆ ಪಡೆದು ಸಹಜ ಜೀವನ ನಡೆಸಬೇಕು. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತವಾಗಿ ರಕ್ತ ಪರೀಕ್ಷೆ ಮಾಡಲಾಗುತ್ತಿದೆ. ಅಲ್ಲದೇ ಸೋಂಕಿತರಿಗೆ ಕೌನ್ಸಿಲಿಂಗ್ ನಡೆಸಿ ಧೈರ್ಯ ತುಂಬುವುದರ ಜತೆಗೆ ಅಗತ್ಯವಿರುವ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿರುವ ಆರೋಗ್ಯ ಇಲಾಖೆ ಅಧಿಕಾರಿಗಳು, ಏಡ್ಸ್ ರೋಗವನ್ನು ದೂರವಿಡಿ, ಏಡ್ಸ್ ರೋಗಿಗಳನ್ನಲ್ಲ. ಮುಂಜಾಗ್ರತೆಯಿಂದಿದ್ದರೆ ಏಡ್ಸ್ ಕಾಯಿಲೆಯಿಂದ ದೂರವಿರಬಹುದು ಎಂದು ಕೋರಿದ್ದಾರೆ.
ಅಂಕಿ ಅಂಶಗಳು
ಚಿಕ್ಕಬಳ್ಳಾಪುರ 475
ಚಿಂತಾಮಣಿ 477
ಬಾಗೇಪಲ್ಲಿ 391
ಗೌರಿಬಿದನೂರು 490
ಗುಡಿಬಂಡೆ 158
ಶಿಡ್ಲಘಟ್ಟ 292
ಒಟ್ಟು 2283
ಒಟ್ಟು ಗಂಡಸರು 1,111
ಹೆಂಗಸರು 1089
ಗಂಡು ಮಕ್ಕಳು 36
ಹೆಣ್ಣು ಮಕ್ಕಳು 41
ಲೈಂಗಿಕ ಅಲ್ಪಸಂಖ್ಯಾತರು 06
ಮರಣ ಸಂಖ್ಯೆ 219
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

