ಜಮೀನು ಒತ್ತುವರಿ ತಡೆ; ಆತ್ಮಹತ್ಯೆ ಯತ್ನ
ಕೋಲಾರ: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ವಾನರಾಶಿ ಗ್ರಾಮದ ಸರ್ವೇ ನಂ.1ರ ಸರ್ಕಾರಿ ಭೂಮಿಯ ಒತ್ತುವರಿ ತೆರವುಗೊಳಿಸಲು ಹೋದ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶನಿವಾರ ನಡೆದಿದೆ. ವಾನರಾಶಿಯ ಶ್ರೀರಾಮಪ್ಪ ಎಂಬವರು ಅಕ್ರಮವಾಗಿ ಸರ್ಕಾರಿ ತೋಪಿನಲ್ಲಿ ಪ್ರವೇಶ ಮಾಡಿ, ಕಟ್ಟಡ ನಿರ್ಮಿಸಲು ಪ್ರಯತ್ನಿಸಿದ್ದು. ಇದನ್ನು ಕೋಲಾರ ತಾಲೂಕು ತಹಸೀಲ್ದಾರ್ ಮತ್ತು ಸಿಬ್ಬಂದಿ ತೆರವುಗೊಳಿಸಲು ಹೋದಾಗ ಶ್ರೀರಾಮಪ್ಪ, ಲಕ್ಷ್ಮಮ್ಮ, ಸರಸಮ್ಮ ಅವರು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದಲ್ಲದೆ ಸೀಮೆಎಣ್ಣೆಯನ್ನು ಮೈಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದಾಗ 3 ಜನರನ್ನು ವಶಕ್ಕೆ ಪಡೆದುಪ್ರಕರಣ ದಾಖಲಿಸಿಸಲಾಗಿದೆ.
ರಸ್ತೆ ಅಪಘಾತ: ಒಬ್ಬರ ಸಾವು
ಕೋಲಾರ: ತಾಲೂಕಿನ ಚಾಕರಸನಹಳ್ಳಿ ಗೇಟ್ ಬಳಿ ಕಳೆದ ರಾತ್ರಿ ದ್ವಿಚಕ್ರ ವಾಹನಕ್ಕೆ ಕೋಲಾರ ಕಡೆಯಿಂದ ಬರುತ್ತಿದ್ದ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಗಂಗಪ್ಪ ಎಂಬವರು ತೀವ್ರವಾಗಿ ಗಾಯಗೊಂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಂಗಪ್ಪ ಮತ್ತು ಮುನಿವೆಂಕಟಪ್ಪ ಎಂಬವರು ದ್ವಿಚಕ್ರ ವಾಹನದಲ್ಲಿ ಹೊಸಕೋಟೆ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡ ರಾಜ್ಯೋತ್ಸವ
ಚಿಂತಾಮಣಿ: ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಸೀಮಿತವಾಗದೆ ವರ್ಷ ಪೂರ್ತಿ ಕನ್ನಡ ಸೊಬಗನ್ನು ಬೆಳಗಲಿ ಎಂದು ತಾಲೂಕು ದಂಡಾಧಿಕಾರಿ ಕೃಷ್ಣಸ್ವಾಮಿ ಹೇಳಿದರು. ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಅನ್ನಪೂರ್ಣೇಶ್ವರಿ ಗೆಳೆಯರ ಬಳ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ಗಡಿ ಭಾಗವಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕನ್ನಡ ಭಾಷೆ, ನೆಲ-ಜಲ ಬಗ್ಗೆ ಜಾಗೃತಿ ಮೂಡಿಸಿ ಎಂದರು. ನಗರ ಠಾಣೆ ವೃತ್ತ ನಿರೀಕ್ಷಕ ನಂಜಪ್ಪ ಮಾತನಾಡಿದರು. ಕಾರ್ಯಕ್ರಮಕ್ಕೆ ಮುನ್ನ ಧ್ವಜರೋಹಣವನ್ನು ತಾಲೂಕು ದಂಡಾಧಿಕಾರಿ ಕೃಷ್ಣಸ್ವಾಮಿ, ಭರತ್ ಭೂಷಣ್, ಚೌಡರೆಡ್ಡಿ, ಸಿ.ಐ ನಂಜಪ್ಪ ನೆರವೇರಿಸಿದರು.
ಕ್ಷಯ ರೋಗಿಗಳಿಗೆ ಧನ ಸಹಾಯ
ಮುಳಬಾಗಲು: ಪಟ್ಟಣದ ಸರ್ಕಾರಿ ಅಸ್ಪತ್ರೆಯಲ್ಲಿ ತಾಲೂಕಿನ 184 ಕ್ಷಯ ರೋಗಿಗಳಿಗೆ ಶಾಸಕ ಕೊತ್ತೂರು ಮಂಜುನಾಥ್ ಪ್ರತಿ ತಿಂಗಳು ನೀಡುವ ತಲಾ ಒಂದು ಸಾವಿರ ರು.ಗಳನ್ನು ಅವರ ಅನುಪಸ್ಥಿತಿಯಲ್ಲಿ ತಹಸೀಲ್ದಾರ್ ಡಿ.ವಿ. ರಾಮಮೂರ್ತಿ ಮತ್ತು ಡಿವೈಎಸ್ಪಿ ಟಿ. ಸಿದ್ದಪ್ಪ ವಿತರಿಸಿದರು. ರೋಗಿಗಳ ಶಾಸಕ ಮಂಜುನಾಥ್ ಅವರಿಗಿರುವ ಕಾಳಜಿಯನ್ನು ಶ್ಲಾಘಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್ ಮಾತನಾಡಿದರು. ಡಾ.ಮನು. ಎನ್.ಆರ್. ನಾರಾಯಣಸ್ವಾಮಿ, ಬಿ.ಎಂ. ಮಧುಕರ್, ಎನ್. ಮುರಳಿ, ವೆಂಕಟೇಶಬಾಬು, ಪ್ರಭಾಕರ್, ಶ್ರೀನಾಧ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

