ಅಮಾಯಕರ ಕೊಲೆ ವಿರುದ್ಧ ಯುವಪೀಳಿಗೆ ಸಂಘಟಿತರಾಗಿ'
ಬಂಗಾರಪೇಟೆ: ದೇಶದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ, ಅಮಾಯಕರ ಕೊಲೆ ಹೆಚ್ಚಾಗುತ್ತಿದ್ದು ಇಂದಿನ ಯುವಪೀಳಿಗೆ ಸಂಘಟಿತರಾಗಿ ಈ ಅನಿಷ್ಟತೆಗಳನ್ನು ನಿಲ್ಲಿಸಲು ಹೋರಾಟ ಮಾಡಬೇಕಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಗೀತಾ ಹೇಳಿದರು.
ಪಟ್ಟಣದ ಪುರಸಭೆ ಬಯಲು ರಂಗಮಂದಿರದಲ್ಲಿ ಡಿವೈಎಪ್ಐ ವತಿಯಿಂದ ಹಮ್ಮಿಕೊಂಡಿದ್ದ ದೇಶ ಪ್ರೇಮಿ ಭಗತ್ ಸಿಂಗರ 106ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ನಮ್ಮನ್ನು ಆಳುವ ಸರ್ಕಾರದ ನಿರ್ಲಕ್ಷದಿಂದಾಗಿ ಮೂರು ವರ್ಷದಿಂದ 60ವರ್ಷದವರ ಮೇಲೆ ಅತ್ಯಾಚಾರಗಳು ನಡೆಯಲು ಅವರು ತೊಡುವ ಉಡುಪಗಳು ಕಾರಣವಲ್ಲ ಎಂದವರು ಈ ಅತ್ಯಾಚಾರ ಪ್ರಕರಣಗಳು ಪದೇ ಪದೆ ಮರುಕಳಿಸಲು ಇಂದಿನ ಯುವಪೀಳಿಗೆ ದಿಕ್ಕು ತಪ್ಪಲು ದೃಶ್ಯ ಮಾಧ್ಯಮಗಳು ಹಾಗೂ ಮೊಬೈಲ್ಗಳೇ ಕಾರಣವಾಗಿದ್ದು ಯುವಕರಲ್ಲಿ ಮೌಲ್ಯಗಳು ಕುಸಿಯುತ್ತಿದ್ದು ಆದ್ದರಿಂದ ಯುವಪೀಳಿಗೆ ಸ್ವಾತಂತ್ರ್ಯದ ಉಳಿವಿಗಾಗಿ ಜಾತ್ಯತೀತ ಮೌಲ್ಯಗಳನ್ನು ಉಳಿಸಲು ಪಣತೊಟ್ಟು ಹೋರಾಟ ಮಾಡಬೇಕೆಂದು ಕರೆ ನೀಡಿದರು.
ಪೋಷಕರು ತಮ್ಮ ಮಕ್ಕಳಿಗೆ ಹಣ ಸಂಪಾದನೇ ಮುಖ್ಯ ಗುರಿಯಾಗಿ ಪ್ರೇರೇಪಿಸದೆ ದೇಶ ಪ್ರೇಮ,ದೇಶ ಭಕ್ತಿ ದೇಶಕ್ಕಾಗಿ ಹೋರಾಟ ಮಾಡುವ ಮನೋಭಾವವನ್ನು ಬೆಳೆಸಬೇಕೆಂದು ತಿಳಿಸಿದರು. ಭಗತ್ಸಿಂಗ್ ಧ್ಯೇಯ, ಸಿದ್ಧಾಂತಗಳನ್ನು ಡಿವೈಎಪ್ಐ ಅಳವಡಿಸಿಕೊಂಡಿದ್ದು ಅವರ ದೇಶ ಪ್ರೇಮವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದರು.
ಪುರಸಭೆ ಮಾಜಿ ಅದ್ಯಕ್ಷ ಕೆ. ಚಂದ್ರಾರೆಡ್ಡಿ ಸಸಿ ನಡುವೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಭಗತತ್ಸಿಂಗ್ರ್ವರು ದೇಶದ ವಿದ್ಯಾರ್ಥಿಗಳಿಗೆ ಯುವ ಜನತೆಗೆ ಸ್ಫೂರ್ತಿಯ ಸೆಳೆಯಾಗಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಸ್ವಾತಂತ್ರ್ಯ ವೀರರ ದೇಶ ಭಕ್ತಿ ಪರಂಪರೆ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ನೆಹರು ಯುವ ಜನರ ಕೇಂದ್ರ ಅಧಿಕಾರಿ ನಾರಾಯಣಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಡಿವೈಎಪ್ಐನ ಜಿಲ್ಲಾಧ್ಯಕ್ಷ ಸಂಪಂಗಿ, ಕಾರ್ಯದರ್ಶಿ ವಿಜಯಕೃಷ್ಣ, ತಂಗರಾಜು, ಅಪ್ಪಯ್ಯಣ್ಣ, ಲಲಿತಮ್ಮ, ನಾರಾಯಣಸ್ವಾಮಿ, ಎ. ಹರೀಶ್, ಕೃಷ್ಣಮೂರ್ತಿ, ಜಿವಿಕ ರಾಮಚಂದ್ರ, ರವೀಂದ್ರ, ನಾರಾಯಣಸ್ವಾಮಿ, ರಾಜೇಂದ್ರ, ದೇವರಾಜ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

