ಸಂತೆ ನಿಷೇಧದ ನಡುವೆ ಜಾನುವಾರು ಮಾರಾಟ ಅವ್ಯಾಹತ
ಬಂಗಾರಪೇಟೆ: ತಾಲೂಕು ಸೇರಿದಂತೆ ಜಿಲ್ಲಾದ್ಯಂತ ಹಸುಗಳಿಗೆ ಕಾಲುಬಾಯಿ ಜ್ವರ ವ್ಯಾಪಕವಾಗಿ ಕಾಣಿಸಿಕೊಂಡು ನೂರಾರು ಹಸುಗಳು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪ್ರತಿ ಶುಕ್ರವಾರ ಸೇರುವ ಜಾನುವಾರುಗಳ ಸಂತೆಯನ್ನು ಜಿಲ್ಲಾಡಳಿತ ನಿಷೇಧಿಸಿರುವುದರಿಂದ ವ್ಯಾಪಾರಿಗಳು ನಿಷೇಧವನ್ನು ದಿಕ್ಕರಿಸಿ ಹೊರವಲಯದಲ್ಲಿ ರಾಜಾರೋಷವಾಗಿ ಹಸುಗಳನ್ನು ಮಾರಾಟ ಮಾಡಲು ಯತ್ನಿಸಿದಾಗ ಪೊಲೀಸರು ಅವರನ್ನು ಚದುರಿಸಿದರು.
ಪಟ್ಟಣದಲ್ಲಿ ಪ್ರತಿ ಶುಕ್ರವಾರ ಜಾನುವಾರುಗಳ ಸಂತೆ ಎಪಿಎಂಸಿ ಯಾರ್ಡ್ ಪ್ರಾಂಗಣದಲ್ಲಿ ನಡೆಯಲಿದೆ. ಈ ಸಂತೆಯಲ್ಲಿ ಜಿಲ್ಲೆಯಿಂದಲ್ಲದೆ ಪಕ್ಕದ ತಮಿಳುನಾಡು, ಆಂಧ್ರದಿಂದಲೂ ನೂರಾರು ಜಾನುವಾರುಗಳು ಸೇರಲಿದೆ ಇದಲ್ಲದೆ ಕುರಿಗಳು, ಮೇಕೆಗಳು, ಕೋಳಿಗಳೂ ಸಂತೆಯಲ್ಲಿ ವ್ಯಾಪಾರವಾಗಲಿದೆ. ಆದರೆ ಇತ್ತೀಚೆಗೆ ಜಿಲ್ಲೆಯಲ್ಲಿ ಹಸುಗಳಿಗೆ ಕಾಲುಬಾಯಿ ಜ್ವರ ವ್ಯಾಪಕವಾಗಿ ಕಾಣಿಸಿಕೊಂಡು ಹಸುಗಳು ಸಾಯುತ್ತಿವೆ. ನಿಯಂತ್ರಣಕ್ಕೆ ಬರುತ್ತಿಲ್ಲ ಇದರಿಂದ ಹಸುಗಳು ಹೆಚ್ಚಾಗಿ ಸೇರುವ ಸಂತೆಗಳನ್ನು ನಿಷೇಧಿಸಿದೆ ಸ್ವಲ್ಪ ಮಟ್ಟಿಗೆ ರೋಗವನ್ನು ಹತೋಟಿಗೆ ತರಬಹುದು ಎಂದು ಜಿಲ್ಲಾಧಿಕಾರಿಗಳು ಎಲ್ಲಾ ತಾಲೂಕುಗಳಲ್ಲೂ ಜಾನುವಾರುಗಳ ಸಂತೆಯನ್ನು ನಿಷೇಧಿಸುವಂತೆ ಆದೇಶ ನೀಡಿದೆ. ಅದರಂತೆ ಶುಕ್ರವಾರ ಪಟ್ಟಣದಲ್ಲಿ ಜಾನುವಾರುಗಳ ಮಾಲೀಕರು ಟೆಂಪೋಗಳಲ್ಲಿ ಹಸುಗಳನ್ನು, ಕುರಿಗಳನ್ನು ಕೋಳಿಗಳನ್ನು ನಿಷೇಧ ಗೊತ್ತಿದ್ದರೂ ಮಾರಾಟ ಮಾಡಲು ತಂದಿದ್ದರು.
ಎಪಿಎಂಸಿ ಪ್ರಾಂಗಣದಲ್ಲಿ ಸಂತೆಗೆ ಅವಕಾಶ ನೀಡದೆ ಅಧಿಕಾರಿಗಳು ಮರಳಿ ಮನೆಗಳಿಗೆ ವಾಪಸ್ ಹೋಗುವಂತೆ ಸೂಚಿಸಿದರು. ಮೊದಲೇ ಬರದಿಂದ ತತ್ತರಿಸಿರುವ ರೈತರು ತಮ್ಮ ಜಾನುವಾರುಗಳನ್ನು ಪೋಷಿಸಲಾಗದೆ ಮಾರಾಟ ಮಾಡಲು ತಂದಿದ್ದರು. ಆದರೆ ಇಲ್ಲಿಯೂ ನಿಷೇಧವಿರುವುದರಿಂದ ಪಿಕಲಾಟಕ್ಕೆ ತುತ್ತಾಗಿ ನಂತರ ಕೋಲಾರ ಬಂಗಾರಪೇಟೆ ಮುಖ್ಯರಸ್ತೆ ಎಸ್.ಎನ್. ರೆಸಾರ್ಟ್ ಬಳಿ ರಸ್ತೆ ಬದಿಯಲ್ಲೇ ನಿಂತು ತಮ್ಮ ಜಾನುವಾರುಗಳನ್ನು ರಾಜರೋಷವಾಗಿ ಮಾರಾಟ ಮಾಡಿ ಜಿಲ್ಲಾಡಳಿತಕ್ಕೆ ಸೆಡ್ಡು ಹೊಡೆದರೂ ಅಧಿಕಾರಿಗಳು ಮಾತ್ರ ಚಕಾರ ಎತ್ತಲಿಲ್ಲ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ವ್ಯಾಪಾರ ಮಾಡದಂತೆ ಜಾನುವಾರುಗಳ ಮಾಲೀಕರನ್ನು ಚದುರಿಸಿದರು. ಪೊಲೀಸರನ್ನು ಕಂಡು ಜನರೂ ಸಹ ಅವರಿಂದ ತಪ್ಪಿಸಿಕೊಳ್ಳಲು ಹರಸಾಹಸ ಮಾಡಿದರು.
ನಮಗೆ ಎಪಿಎಂಸಿ ಪ್ರಾಂಗಣದಲ್ಲಿ ಸಂತೆಗೆ ಅವಕಾಶ ನೀಡಬಾರದು ಎಂಬ ಆದೇಶವಿದೆ. ಅದನ್ನು ಪಾಲಿಸಿದ್ದೇವೆ ಎಂದು ಅಧಿಕಾರಿಗಳು ಹೇಳುವರು ಇದರಿಂದ ಜಿಲ್ಲಾದಿಕಾರಿಗಳ ಆದೇಶ ಪಾಲಿಸಿದಂತಾಗುವುದೆ ಸಂತೆ ಎಲ್ಲಿ ನಡೆದರೂ ಅದನ್ನು ತಡೆಯಬೇಕು. ಆದರೆ ಅಧಿಕಾರಿಗಳು ಮಾಮೂಲಿ ಸ್ಥಳದಲ್ಲಿ ನಡೆದಿಲ್ಲ ಎನ್ನುವುದರಿಂದ ಕಾಲುಬಾಯಿ ಜ್ವರ ತಡೆಯಬಹುದೆ ಎಂಬ ಎಕ್ಷ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

