ಕೋಲಾರ

ಸಮಾಜಕ್ಕೆ ಬಲಿಜ ಜನಾಂಗದ ಕೊಡುಗೆ ಅಪಾರ

Published On :

ಗೌರಿಬಿದನೂರು: ರಾಜ್ಯದಲ್ಲಿ ಸುಮಾರು 50 ಲಕ್ಷ ಜನಸಂಖ್ಯೆ ಹೊಂದಿರುವ ಬಲಿಜ ಜನಾಂಗಕ್ಕೆ ತನ್ನದೇ ಆದ ಇತಿಹಾಸವಿದೆ. ಈ ಸಮುದಾಯ ನಾಡಿಗೆ ಸಾಕಷ್ಟು ಕೊಡುಗೆ ನೀಡಿದೆ ಎಂದು ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಹೇಳಿದರು.
ಪಟ್ಟಣದ ನದಿದಡದಲ್ಲಿರುವ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ತಾಲೂಕು ಬಲಿಜ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕೈವಾರದ ನಾರಾಯಣಪ್ಪನವರು ತಾವು ರಚಿಸಿದ ಕಾಲಜ್ಞಾನ ಹಾಗೂ ತತ್ವಗಳು ಸಮಾಜ ಕಣ್ಣು ತೆರೆಸುವಂತಹವು. ಇಂತಹ ಪುಣ್ಯ ಪುರುಷರ ಕ್ಷೇತ್ರ ಕೈವಾರವನ್ನು ಬಲಿಜ ಜನಾಂಗದ ಹಿರಿಯರಾದ ಎಂ.ಎಸ್. ರಾಮಯ್ಯನವರು ಅಭಿವೃದ್ಧಿಪಡಿಸಿದ್ದಾರೆ. ಜೊತೆಗೆ ಶೈಕ್ಷಣಿಕ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.
ಈಗಾಗಲೆ ಸರ್ಕಾರ ಬಲಿಜ ಜನಾಂಗಕ್ಕೆ ಶೈಕ್ಷಣಿಕವಾಗಿ 2ಎ ಮೀಸಲು ನೀಡಿದೆ. ಅದನ್ನು ಇತರೆ ಕ್ಷೇತ್ರಗಳಾದ ಸರ್ಕಾರಿ ನೌಕರಿ ನೇಮಕಾತಿಗೆ ಹಾಗೂ ರಾಜಕೀಯ ಕ್ಷೇತ್ರಕ್ಕೆ ಅನುಕೂಲವಾಗಲು 2ಎ ಮೀಸಲನ್ನು ನಿಗದಿಪಡಿಸಲು ಶ್ರಮಿಸುವುದಾಗಿ ಹೇಳಿದರು.
ತಾಲೂಕು ಬಲಿಜ ಕ್ಷೇಮಾಭಿವೃದ್ಧಿ ಸಂಘಕ್ಕೆ ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಿಸಲು ನಿವೇಶನ ಮಂಜೂರು ಮಾಡಿಸಿ ಕಟ್ಟಡ ನಿರ್ಮಿಸಲು ಶಾಸಕರ ನಿಧಿಯಿಂದ ಹಣ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ವಿಧಾನಸಭೆ ಉಪಾಧ್ಯಕ್ಷರನ್ನು ಬಲಿಜ ಸಂಘದಿಂದ ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಪ್ರಾಸ್ತಾವಿಕ ಭಾಷಣ ಮಾಡಿದ ತಾಲೂಕು ಬಲಿಜ ಸಂಘದ ಅಧ್ಯಕ್ಷ ವಿ. ರವೀಂದ್ರ, ಕಳೆದ ನಾಲ್ಕು ವರ್ಷದಿಂದ ಸಂಘದ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದೇವೆ. ಉಚಿತ ಆರೋಗ್ಯ ತಪಾಸಣಾ ಶಿಬಿರ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ತಾತಯ್ಯನವರ ಆರಾಧನೆ ನಡೆದುಕೊಂಡು ಬಂದಿದೆ ಎಂದರು.
ಬಲಜ ಜನಾಂಗದ ಮುಖಂಡ ಆವಲಪ್ಪ ಮಾತನಾಡಿ, ಸತತವಾಗಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎನ್.ಎಚ್. ಶಿವಶಂಕರರೆಡ್ಡಿಯವರು ಬಲಿಜ ಜನಾಂಗದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು. ಪುರಸಭೆ ಸದಸ್ಯ ಎಂ. ನರಸಿಂಹಮೂರ್ತಿ ಮಾತನಾಡಿ, ತಾಲೂಕು ಕಂಡ ಸರಳ ರಾಜಕಾರಣಿ ಶಿವಶಂಕರರೆಡ್ಡಿಯವರನ್ನು ಬಲಿಜ ಸಂಘ ಸನ್ಮಾನಿಸುತ್ತಿರುವುದು ಸಂತೋಷದ ಸಂಗತಿ ಎಂದರು. ಬಲಿಜ ಜನಾಂಗದ ಹಿರಿಯರಾದ  ಬಿ.ಎನ್. ರಾಮಯ್ಯ, ತಾಪಂ ಸದಸ್ಯೆ ಪಾರ್ವತಮ್ಮ, ಪುರಸಭಾ ಸದಸ್ಯರಾದ ಕೆ.ಎಸ್. ಅನಂತರಾಜು, ಮಂಜುನಾಥ್, ಶಾರದಾಅರುಣ್, ಶೇಷಪ್ಪ, ಮಾರ್ಕೆಟ್ ರಾಮು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೆಂಕಟರಮಣ, ಮಾರ್ಕೆಟ್ ಅಂಜಿನಪ್ಪ, ಕೋಟೆ ಅಶ್ವತ್ಥಪ್ಪ, ಮಾರ್ಕೆಟ್ ರಾಜು, ಅಂಜಿನಪ್ಪ, ಪಿ.ಎನ್. ನಾಗರಾಜ್, ಜಯಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.