ಕೋಲಾರ

ನವರಾತ್ರಿ ಉತ್ಸವಕ್ಕೆ ಚಾಲನೆ

Published On :

ಕೋಲಾರ: ನಗರದಲ್ಲಿ ನವರಾತ್ರಿ ದಸರ ಉತ್ಸವಕ್ಕೆ ಶನಿವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಕಳೆದ ಎರಡು ವರ್ಷಗಳಿಂದ ನಗರದ ಕಠಾರಿಪಾಳ್ಯದ ಶ್ರೀ ವಿವೇಕಾನಂದ ಮಿತ್ರ ಬಳಗ ನವರಾತ್ರಿ ಸಂದರ್ಭದಲ್ಲಿ ಕೆಇಬಿ ವಿದ್ಯಾ ಗಣೇಶ ದೇವಾಲಯದ ಆವರಣದಲ್ಲಿ ನವರಾತ್ರಿ ಉತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತಾ ಬಂದಿದ್ದು ಈ ಬಾರಿ ಕೋಲಾರದ ಜನತೆಗೆ ಗುರುವಾಯೂರಪ್ಪ ದೇವಾಲಯ ಹಾಗೂ ವಿನಾಯಕ ದರ್ಶನವನ್ನು ನೋಡುವ ಅವಕಾಶ ಮಾಡಿಕೊಡಲಾಗಿದೆ.
ಸುಮಾರು 40್ಢ120 ಚದುರಡಿ ಜಾಗದಲ್ಲಿ ನವರಾತ್ರಿ ಉತ್ಸವ ಅದ್ಧೂರಿಯಾಗಿ ನಡೆಯಲು ಎಲ್ಲಾ ರೀತಿಯ ಸಿದ್ಧತೆ ನಡೆದಿದ್ದು 30್ಢ40 ಅಳತೆ ಜಾಗದಲ್ಲಿ ಗುರುವಾಯೂರಪ್ಪ ದೇವಾಲಯದ ಮಾದರಿಯನ್ನು ನಿರ್ಮಿಸಲಾಗಿದೆ. ಕೊಯಮತ್ತೂರಿನ ಚಂದ್ರು, ಕೋಲಾರ ಜಿಲ್ಲೆಯ ರವಿ, ಈಶ್ವರಪ್ಪ, ಅಂಬರೀಷ್ ಹಾಗೂ ಪ್ರಸನ್ನ ಅವರು ಈ ಕಲಾಕೃತಿಯನ್ನು ರಚಿಸಿದ್ದಾರೆ. ಅ.5ರಿಂದ 19ರವರೆಗೆ ನವರಾತ್ರಿ ದಸರಾ ಉತ್ಸವದ ಜೊತೆಗೆ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ. ಶನಿವಾರ ವಿಶೇಷ ಪೂಜೆಯೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ಮೊದಲ ದಿನವೇ ನೂರರು ಜನರು ಗುರುವಾಯೂರಪ್ಪ ವಿನಾಯಕ ದರ್ಶನ ಪಡೆದರು. ನಗರದ ಕೋಟೆ ಪ್ರದೇಶದ ಶ್ರೀಶಂಕರ ಮಠದಲ್ಲಿ ಶಾರದಾದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಇದೇ ರೀತಿ ಕೋಲಾರಮ್ಮ ದೇವಾಸ್ಥಾನ, ಗಲ್ ಪೇಟೆಯ ಶ್ರೀ ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ವಿವಿಧ ಕಡೆ ನವರಾತ್ರಿ ಪೂಜಾ ಕಾರ್ಯಗಳಿಗೆ ಚಾಲನೆ ನೀಡಲಾಯಿತು.
ಪೊಲೀಸರ ಕಾರ್ಯಕ್ಕೆ ಅಸಮಾಧಾನ
ಚಿಂತಾಮಣಿ: ತಾಲೂಕಿನಲ್ಲಿ ಸರ್ಕಾರಕ್ಕೆ ಸೇರಿದ ಜಮೀನು ನಕಲಿ ದಾಖಲೆ ಸೃಷ್ಟಿಸಿ ಭೂಮಾಫಿಯಾದಲ್ಲಿ ತೊಡಗಿದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಮೀನಮೇಷ ಎನಿಸುತ್ತಿದ್ದಾರೆಂದು ಆರೋಪಿಸಿ ಸಿಪಿಐ(ಎಂ) ಪಕ್ಷದ ಜಿಲ್ಲಾ ಸಂಚಾಲಕ ಎಂ. ಗೋಪಿನಾಥ್ ಅಸಮದಾನ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅವರು, ತಾಲೂಕಿನಲ್ಲಿ ಕಾರ್ಯನಿರ್ವಹಿಸುವ ಹಲವು ಕಂದಾಯ ಅಧಿಕಾರಿಗಳು ನಗರಸಭೆಯಲ್ಲಿ ಬೇರೆ ಹೆಸರುಗಳನ್ನು ಸೇರಿಸಿ ಹಣ ಲೂಟಿ ಮಾಡುತ್ತಿರುವ ಪ್ರಕರಣಗಳು ಸಾಕ್ಷ್ಯಾದಾರಗಳ ಸಮೇತ ತಾಲೂಕು ದಂಡಾಧಿಕಾರಿಗಳೇ ಪೊಲೀಸರಿಗೆ ದೂರು ನೀಡಿ 15 ದಿನ ಕಳೆದರೂ ಕ್ರಮ ಕೈಗೊಳ್ಳದ ಸ್ಥಳೀಯ ಪೊಲೀಸ್ ವೈಖರಿಗೆ ವಿರೋಧ ವ್ಯಕ್ತಪಡಿಸಿದರು. ಸಿಪಿಐಎಂ ಮುಖಂಡ ಗೋಪಸಂದ್ರ ಶ್ರೀನಿವಾಸರೆಡ್ಡಿ, ರೈತ ಸಂಘದ ಲಕ್ಷ್ಮಿನಾರಾಯಣರೆಡ್ಡಿ ಇದ್ದರು.
ಕೃತಿಗೆ ಇಳಿಯದ ಪರಿಹಾರದ ಮಾತು
ಮಂಡ್ಯ: ಕಾಲು ಬಾಯಿ ಜ್ವರ ಬಾಧೆಯಿಂದ ಜಾನುವಾರುಗಳನ್ನು ಕಳೆದ ಕೊಂಡ ರೈತ ಸಮುದಾಯಕ್ಕೆ ಪರಿಹಾರ ಕೊಡುವ ಮಾತುಗಳು ಇನ್ನೂ ಸರ್ಕಾರ ಬಾಯಿಯಿಂದ ಹೊರ ಬೀಳದೇ ಇರುವುದು ರೈತರನ್ನು ಅತಂತ್ರ ಸ್ಥಿತಿಗೆ ತಳ್ಳಿದೆ.
ಕಳೆದ ಸೆ. 25 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆ.ಆರ್. ಪೇಟೆ ಅಂಬಿಗರಹಳ್ಳಿ ಸಮೀಪದ ತ್ರಿವೇಣಿ ಸಂಗಮದಲ್ಲಿ ನಡೆದ ಕುಂಭಮೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಕಾಲು ಬಾಯಿ ಜ್ವರದ ಬಾಧೆಯಿಂದ ಸಾವನ್ನಪ್ಪಿದ ಜಾನುವಾರಗಳ ಬಗ್ಗೆ ಮಾಹಿತಿ ತರಿಸಿಕೊಂಡು ರೈತರಿಗೆ ಸೂಕ್ತ ಪರಿಹಾರ ಕೊಡುವ ಭರವಸೆ ನೀಡಿದ್ದರು. ಆದರೆ ಅದು ಇನ್ನೂ ಈಡೇರಿಲ್ಲ.
ಕಾಲು ಬಾಯಿ ಜ್ವರದ ಬಾಧೆಯಿಂದ ಜಾನುವಾರುಗಳನ್ನು ಕಳೆದುಕೊಂಡ ರೈತರಿಗೆ ಯಾವ ರೀತಿ ಪರಿಹಾರ ಕೊಡಬೇಕು ಎಂಬ ಬಗ್ಗೆ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ. ಆದರೆ ಜಾನುವಾರುಗಳಿಗೆ ಕಾಲು ಬಾಯಿ ಜ್ವರ ಬಾಧಿಸಿದ ಪರಿಣಾಮ ಜಿಲ್ಲೆಯಲ್ಲಿ ಸೆಪ್ಟಂಬರ್ 1 ರಿಂದ ಅಕ್ಟೋಬರ್ 4ರವರೆಗೆ ಒಟ್ಟು 320 ರಾಸುಗಳು ಸಾವನ್ನಪ್ಪಿರುವುದಾಗಿ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಪ್ರಸಾದ್ ಮೂರ್ತಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.