ಕೋಲಾರ

ಸಂಬಂಧಿಕರ ಕಲಹ: ರೇಷ್ಮೆ ಹುಳುಗಳಿಗೆ ವಿಷ

Published On :

ಕ.ಪ್ರ. ವಾರ್ತೆ, ಕೋಲಾರ,ಅ.5
ತಾಲೂಕಿನ ವಿಟ್ಟಪ್ಪನಹಳ್ಳಿ ಗ್ರಾಮದಲ್ಲಿ ಸಂಬಂಧಿಕರ ನಡುವಿನ ಕಲಹದಿಂದ ರೇಷ್ಮೆ ಹುಳುಗಳಿಗೆ ವಿಷ ಹಾಕಿ ನಾಶಪಡಿಸಿರುವ ಘಟನೆ ನಡೆದಿದೆ.
ಜಮೀನಿನ ವಿಷಯದಲ್ಲಿ ತಮ್ಮ ಹಾಗೂ ಸಂಬಂಧಿಕರ ನಡುವೆ ಇದ್ದ ಕಲಹವೇ ಘಟನೆಗೆ ಕಾರಣವೆಂದು ಶಂಕರಪ್ಪ ಆರೋಪಿಸಿದ್ದಾರೆ.
ತಮ್ಮ ರೇಷ್ಮೆ ತೋಟಕ್ಕೆ ವಿಷ ಸಿಂಪಡಿಸಿ ಸುಮಾರು 950 ಮೊಟ್ಟೆ ರೇಷ್ಮೆ ಹುಳು ನಾಲ್ಕನೆ ಹಂತಕ್ಕೆ ಬಂದು 4 ದಿನವಾಗಿದ್ದು ಇಂದಿನ ದರದಲ್ಲಿ ಸುಮಾರು ಮೂರು ಲಕ್ಷ ನಷ್ಟವಾಗಿದೆ ಎಂದು ಶಂಕರಪ್ಪ ತಮ್ಮ ಅಳಲು ತೋಡಿಕೊಂಡಿದ್ದಾರೆ.   ಹುಳು ಸಾಕಾಣಿಕೆ ಮಾಡಲು ಮನೆ ಮತ್ತು ಸಲಕರಣೆಗಳಿಗೆ ಪ್ರಗತಿ ಗ್ರಾಮೀಣ ಬ್ಯಾಂಕಿನಿಂದ ಸುಮಾರು ಹದಿನೈದು ಲಕ್ಷ ಸಾಲ ಮಾಡಿದ್ದು ತಮ್ಮ ಸಂಬಂಧಿಕರು ಮಾಡಿರುವ ಕೃತ್ಯಕ್ಕೆ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.