ಗಾಯತ್ರಿ ಜಪ ತಪ್ಪದೆ ಆಚರಿಸಿ: ಶ್ರೀ
ಮುಳಬಾಗಲು: ಬ್ರಾಹ್ಮಣರು ಗಾಯತ್ರಿ ಜಪವನ್ನು ತಪ್ಪದೆ ಆಚರಿಸಲು ತಂಬಿಹಳ್ಳಿ ಮಠದ ವಿದ್ಯಾಸಾಗರ ಮಾಧವ ತೀರ್ಥ ಶ್ರೀಪಾದಂಗಳವರು ಕರೆ ನೀಡಿದರು.
ಪಟ್ಟಣದ ಸೂರ್ಯನಾರಾಯಣಸ್ವಾಮಿ ದೇವಾಲಯದಲ್ಲಿ ನಿರ್ಮಾಣವಾಗಿರುವ ವಿಮಾನಗೋಪುರ ಮಹಾ ಕುಂಭಾಬಿಷೇಕ ಹಾಗೂ ಸೂರ್ಯರಥ ಉದ್ಘಾಟನೆಯಲ್ಲಿ ಆಶಿರ್ವಚನ ನೀಡಿ, ಬ್ರಾಹ್ಮಣರಿಗೆ ಸಂಸ್ಕಾರ ಮುಖ್ಯ ಎಂದರು. ದೇವಾಲಯದ ವಿಮಾನ ಗೋಪುರ ದಾನಿಗಳಾದ ಬೆಂಗಳೂರಿನ ಅನಸೂಯಮ್ಮರವನ್ನು ಸನ್ಮಾನಿಸಿದರು. ಶಾಸಕ ಕೊತ್ತೂರು ಮಂಜುನಾಥ್ ಸೂರ್ಯನಾರಾಯಣಸ್ವಾಮಿ ದೇವಾಲಯದ ವತಿಯಿಂದ ನಿರ್ಮಾಣವಾಗುವ ಕಲ್ಯಾಣ ಮಂಟಪಕ್ಕೆ ಐದು ಲಕ್ಷರುಪಾಯಿಗಳ ದೇಣೆಗೆ ನೀಡುವುದಾಗಿ ಪ್ರಕಟಿಸಿದರು. ಕೋಲಾರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಮು.ಕೃ. ಪದ್ಮನಾಭರಾವ್, ತಾಲೂಕು ಶುಕ್ಲ ಯಜುರ್ವೇದ ಮಹಾ ಸಭಾ ಅಧ್ಯಕ್ಷ ಅನಂತಪದ್ಮನಾಭರಾವ್, ಅಲಂಗೂರು ಗುರುಶಂಕರ್, ಬಂಗಾರುಪೇಟೆ ರವಿ, ರಘುನಂದನರಾವ್, ಕಾರ್ಯದರ್ಶಿ ಕೆ.ಎಂ. ಗೋಪಾಲ್, ಕೆ. ಮಾಧವರಾವ್, ಕೆಎನ್ಎಲ್. ರಾವ್, ಜಿ.ಆರ್.ನಾಗಭೂಷಣರಾವ್, ಪ್ರಭಾಕರರಾವ್, ವಲ್ಲಭಣ್ಣ, ಕೆ.ಆರ್. ನರಸಿಂಹನ್. ಜಿ.ಎನ್. ವೆಂಕಟಾಟಲಯ್ಯ, ಕಲ್ಲುಪಲ್ಲಿ ಪ್ರಕಾಶ್ ಇತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

