ಕೋಲಾರ

ರೈಲು ಪ್ರಯಾಣ ದರ ಏರಿಕೆಗೆ ವಿರೋಧ

Published On :

ಬಂಗಾರಪೇಟೆ: ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಹೊರಬರಲಾಗದೆ ಬಡವರು ಪರಿತಪಿಸುತ್ತಿರುವಾಗಲೆ ರೈಲು ಪ್ರಯಾಣ ದರ ಏರಿಕೆ ಮಾಡಲು ಮುಂದಾಗಿರುವುದು ಜನಸಾಮಾನ್ಯರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ರೈಲುಗಳಲ್ಲಿ ಎಲ್ಲಾ ವರ್ಗದ ಜನರ ಕೈಗೆಟಕುವಂತ ದರವಿರುವುದರಿಂದ ಹೆಚ್ಚಾಗಿ ಜನರು ರೈಲು ಪ್ರಯಾಣಕ್ಕೆ ಒತ್ತು ಕೊಡುತ್ತಿದ್ದರು. ಪಟ್ಟಣದಿಂದ ಪ್ರತಿದಿನ ಸುಮಾರು 12 ಸಾವಿರ ಮಂದಿ ಬೆಂಗಳೂರುಗೆ ರೈಲಿನಲ್ಲಿ ತೆರಳುವರು.
ಪಟ್ಟಣದಿಂದ ಬೆಂಗಳೂರಿಗೆ ಹೋಗುವ ಹತ್ತಾರು ರೈಲುಗಳಲ್ಲಿ ಪ್ರತಿದಿನ ಅಗತ್ಯಗಿಂತಲೂ ಅಧಿಕ ಪ್ರಯಾಣಿಕರು ಸಂಚರಿಸುತ್ತಾರೆ. ಕಳೆದ ಆರು ತಿಂಗಳ ಹಿಂದಷ್ಟೇ ಶೇ.20 ರಷ್ಟು ಏರಿಕೆ ಮಾಡಲಾಗಿತ್ತು. ಪಟ್ಟಣದಿಂದ ಬೆಂಗಳೂರಿಗೆ ಕೇವಲ 12 ರು.ಗಳಲ್ಲಿ ಹೋಗಬಹುದಾಗಿತ್ತು, ಆರು ತಿಂಗಳ ಹಿಂದೆ ಪ್ರಯಾಣ ದರ ಏರಿಕೆ ಮಾಡಿದ ನಂತರ ಬೆಂಗಳೂರಿಗೆ ಪ್ಯಾಸೆಂಜರ್ ರೈಲಿನಲ್ಲಿ 12ರಿಂದ 15ಕ್ಕೆ ಎಕ್ಸ್‌ಪ್ರಸ್‌ನಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡಿತ್ತು. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಹೊರಯಾಗಿರಲಿಲ್ಲ.
ಈಗ ರೈಲ್ವೆ ಖಾತೆಯನ್ನು ಮಲ್ಲಿಕಾರ್ಜುನ ಖರ್ಗೆ ವಹಿಸಿಕೊಂಡ ನಂತರ ನಷ್ಟದ ನೆಪವೊಡ್ಡಿ ಪ್ರಯಾಣ ದರ ಏರಿಸಲು ಮುಂದಾಗಿರುವುದು ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಿದಂತಾಗಿದೆ. ಪ್ರಯಾಣ ದರ ಏರಿಕೆಯಾದರೆ ಪಾಸ್ ದರ ದುಪ್ಪಟ್ಟಾಗಿದೆ. ಇದರಿಂದ ಸಾರ್ವಜನಿಕರು ಕೇಂದ್ರ ಸರ್ಕಾರದ ವಿರುದ್ಧ ಶಾಪಹಾಕುವಂತಾಗಿದೆ.
ಬಹುತೇಕ ರೈಲುಗಳಲ್ಲಿ ಮೂಲ ಸೌಲಭ್ಯಗಳೇ ಇಲ್ಲ. ಹಲವು ವರ್ಷಗಳಿಂದ ಬೋಗಿಗಳ ಸಂಖ್ಯೆ ಹೆಚ್ಚಿಸಲು ಪ್ರಯಾಣಿಕರು ಒತ್ತಾಯಿಸುತ್ತಿದ್ದರೂ ಕಿವಿಗೊಡದ ಇಲಾಖೆ ಪ್ರಯಾಣ ದರ ಏರಿಕೆ ಮಾಡುತ್ತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೇಂದ್ರ ಸರ್ಕಾರ ಕೂಡಲೆ ಪ್ರಯಾಣ ದರ ಏರಿಕೆ ಪ್ರಸ್ತಾವನೆಯನ್ನು ಕೈಬಿಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.