ಕೋಲಾರ

'ಸರ್ವಪಲ್ಲಿ ರಾಧಾಕೃಷ್ಣ ಅವರ ಆದರ್ಶ ಪಾಲಿಸಿ'

Published On :

ಕೆಜಿಎಫ್: ಸರ್ವಪಲ್ಲಿ ರಾಧಾಕೃಷ್ಣ ಅವರ ಆದರ್ಶಗಳನ್ನು ಪಾಲಿಸಲು ಶಿಕ್ಷರು ಮುಂದಾಗಬೇಕು ಎಂದು ಶಾಸಕಿ ವೈ. ರಾಮಕ್ಕ ಹೇಳಿದರು.
ಕೆಜಿಎಫ್ ವಲಯದ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ಶಿಕ್ಷಕರು ನಗರದಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಮಾಜಿ ಶಾಸಕ ವೈ. ಸಂಪಂಗಿ ಮಾತನಾಡಿ, ತಂದೆ ತಾಯಿಗಳು ದೇವರಿಗೆ ಸಮಾನ ಅದರಲ್ಲೂ ಶಿಕ್ಷಕರು ಪ್ರಥಮ ಎಂದು ಎಲ್ಲರೂ ಅರಿಯಬೇಕಿದೆ ಎಂದರು.
ಪೊಲೀಸ್ ಉಪರಕ್ಷಣಾಧಿಕಾರಿ ವಿವೇಕಾನಂದ ಅವರು, ವಿವಿಧ ಸರ್ಕಾರಿ ಇಲಾಖೆಗಳಲ್ಲಿ ನಿವೃತ್ತಿ ಎಂಬುದು ಇರುತ್ತದೆ ಆದರೆ ಶಿಕ್ಷಕರು ನಿವೃತ್ತಿ ಹೊಂದಿದ ನಂತರವೂ ನೀತಿ ಪಾಠಗಳನ್ನು ಹೇಳುವ ಗುರುಗಳು ಎಂದು ಕರೆಸಿಕೊಳ್ಳುತ್ತಾರೆ ಎಂದು ತಿಳಿಸಿದರು.  ಮುನಿಯಪ್ಪ, ಅರ್ಜುನನ್, ಗೋಪಿನಾಥ್, ಕಿರಣ್‌ಕುಮಾರ್, ಪ್ರಭಾಕರ್, ಆರೀಫ್‌ಅಹ್ಮದ್, ರಾಜಶ್ರೀ, ನರಸಿಂಹಲು, ಸುರೇಶ್‌ನಾರಾಯಣಕುಟ್ಟಿ, ಬಾಟಾ ಗೋಪಾಲ್, ನಗರಸಭಾ ಸದಸ್ಯರಾದ ವಿಜಯಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.