ಸುದ್ದಿ ಸಂಕ್ಷೇಪ
ಇಂದಿನಿಂದ ಸೂಲಿಬೆಲೆಯಲ್ಲಿ ವಾರ್ಡ್ ಸಭೆ
ಸೂಲಿಬೆಲೆ: ಸೂಲಿಬೆಲೆ ಗ್ರಾಪಂದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಮಗಾರಿಗಳ ಕ್ರಿಯಾ ಯೋಜನೆಗೆ ಸಂಬಂಧಪಟ್ಟಂತೆ ಅ.7 ರಿಂದ ನಾಲ್ಕು ದಿನಗಳ ಕಾಲ ವಾರ್ಡ್ ಸಭೆಗಳು ನಡೆಯಲಿದ್ದು, ಅ.11 ರಂದು ಗ್ರಾಮಸಭೆಯನ್ನು ಏರ್ಪಡಿಸಲಾಗಿದೆ ಎಂದು ಬಿಲ್ ಕಲೆಕ್ಟರ್ ನಾರಾಯಣಸ್ವಾಮಿ ತಿಳಿಸಿದ್ದಾರೆ.
ವಾರ್ಡು ಸಭೆ ಎಲ್ಲಿ, ಯಾವಾಗ: ಅ.7 ರಂದು ಒಂದನೇ ವಾರ್ಡು, ಮದರಸ ಶಾಲೆ ಹಾಗೂ ಎರಡನೇ ವಾರ್ಡು ಸಮುದಾಯಭವನ ಅಂಬೇಡ್ಕರ್ ನಗರ. ಅ.8 ರಂದು ಮೂರನೇ ವಾರ್ಡು ಪಾಂಡುರಂಗಸ್ವಾಮಿ ದೇವಸ್ಥಾನ, ನಾಲ್ಕನೇ ವಾರ್ಡು ಸಾಯಿಬಾಬಾ ನಗರ. ಅ.9ರಂದು ಐದನೇ ವಾರ್ಡು ಸುಗ್ಗಲಮ್ಮ ದೇವಸ್ಥಾನ, ಆರನೇ ವಾರ್ಡು ಗಣೇಶನ ದೇವಸ್ಥಾನ. ಅ.10 ರಂದು ಏಳನೇ ವಾರ್ಡು ಪಾರ್ವತಿ ಪರಮೇಶ್ವರ ದೇವಸ್ಥಾನ, 8ನೇ ವಾರ್ಡು ರಾಂಪುರ ಶಾಲೆಯಲ್ಲಿ ಸಭೆಗಳನ್ನು ಆಯೋಜಿಸಲಾಗಿದೆ.
11ಕ್ಕೆ ಗ್ರಾಮಸಭೆ: ಅ.11 ರಂದು ಬೆಳಿಗ್ಗೆ 11 ಗಂಟೆಗೆ ಸೂಲಿಬೆಲೆ ಸಂತೆ ಮೈದಾನದಲ್ಲಿ ಗ್ರಾಪಂ ಅಧ್ಯಕ್ಷ ಕೆ.ನಾರಾಯಣಪ್ಪ ಅವರ ಅಧ್ಯಕ್ಷತೆಯಲ್ಲಿ ಗ್ರಾಮಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮಸ್ಥರು ಈ ಸಭೆಗಳಲ್ಲಿ ಪಾಲ್ಗೊಂಡು ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದ್ದಾರೆ.
ಸ್ನೇಹಿತರ ನಡುವೆ ನಡೆದ ಜಗಳದಲ್ಲಿ ಒಬ್ಬನ ಕೊಲೆ
ರಾಮನಗರ: ತಲಘಟ್ಟಪುರದ ಎಲಿಗೆಂಟ್ ಅಪಾರ್ಟ್ಮೆಂಟ್ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಸ್ನೇಹಿತರ ನಡುವೆ ನಡೆದ ಜಗಳದಲ್ಲಿ ಒಬ್ಬನ ಕೊಲೆಯಾಗಿದ್ದು, ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಮಧ್ಯಪ್ರದೇಶ ಮೂಲದ ರೋಷನ್ (27) ಕೊಲೆಯಾದ ವ್ಯಕ್ತಿ. ರಾಜೇಶ್ ಎಂಬುವನ ತಲೆಗೆ ತೀವ್ರ ಗಾಯವಾಗಿದ್ದು ಈತ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅತುಲ್ ಎಂಬುವವನೇ ರೋಷನ್ ಮತ್ತು ರಾಜೇಶ್ನ ಮೇಲೆ ಹಲ್ಲೆ ನಡೆಸಿದವನು. ಈ ಮೂರೂ ಮಂದಿ ತಲಘಟ್ಟಪುರ ಪಕ್ಕದಲ್ಲಿರುವ ಎಲಿಗೆಂಟ್ ಅಪಾರ್ಟ್ಮೆಂಟ್ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಆರೋಪಿ ಅತುಲ್ ಶನಿವಾರ ರಾತ್ರಿ 8ರ ಸುಮಾರಿಗೆ ರೋಷನ್ನನ್ನು ಅಪಾರ್ಟ್ಮೆಂಟ್ ಪಕ್ಕದ ತೋಟಕ್ಕೆ ಕರೆದುಕೊಂಡು ಹೋಗಿ ಆತನ ತಲೆಗೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ನಂತರ 9 ಗಂಟೆ ವೇಳೆಗೆ ಅಪಾರ್ಟ್ಮೆಂಟ್ನಲ್ಲಿದ್ದ ರಾಜೇಶ್ನನ್ನೂ ಪಕ್ಕದ ತೋಟಕ್ಕೆ ಕರೆದೊಯ್ದು ತಲೆಗೆ ಬಲವಾಗಿ ಹೊಡೆದಿದ್ದಾನೆ. ನಂತರ ಮೃತಪಟ್ಟಿರಬಹುದು ಎಂದು ತಿಳಿದು ಪರಾರಿಯಾಗಿದ್ದಾನೆ. ಸ್ವಲ್ಪ ಚೇತರಿಸಿಕೊಂಡ ರಾಜೇಶ್ ಅಪಾರ್ಟ್ಮೆಂಟ್ಗೆ ಬಂದು ವಿಷಯ ತಿಳಿಸಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

