ಮಗು, ಅಪಹರಣಕಾರ ಶವವಾಗಿ ಪತ್ತೆ
ಕ.ಪ್ರ.ವಾರ್ತೆ ಮಾಲೂರು ಆ.7
ಕಳೆದ ಗುರುವಾರದಂದು ತಾಲೂಕಿನ ಅಹನ್ಯ ಗ್ರಾಮದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಹತ್ತು ತಿಂಗಳ ಮಗು ಹಾಗೂ ಪೋಷಕರನ್ನು ಯಾಮಾರಿಸಿ ಮಗುವಿನೊಂದಿಗೆ ಪರಾರಿಯಾಗಿದ್ದ ಅದೇ ಗ್ರಾಮದ ಯುವಕ ಚಂದ್ರಶೇಖರ್ ಜೊತೆ ಮಗುವಿನ ಶವ ತಮಿಳುನಾಡಿನ ವ್ಯಾಪನಹಳ್ಳಿಯ ಪತ್ತೂರು ಅರಣ್ಯ ಪ್ರದೇಶದ ಬಂಡೆಕಲ್ಲಿನ ಮೇಲೆ ಕಂಡು ಬಂದಿದೆ. ಕೊಲೆಯೋ ಆತ್ಮಹತ್ಯೆಯೋ ತಿಳಿದುಬಂದಿಲ್ಲ.
ತಾಲೂಕಿನ ಅಹನ್ಯದ ಗ್ರಾಮದ ಶ್ರೀಧರ್ ಎಂಬುವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಮನೆ ಮುಂದೆ ಆಟವಾಡುತ್ತಿದ್ದ ತನ್ನ ಮಗುವನ್ನು ಅದೇ ಗ್ರಾಮದ ಚಂದ್ರಶೇಖರ್ ಎಂಬಾಂತ ಆಟವಾಡಿಸಲು ತೆಗೆದುಕೊಂಡು ಹೋದವಾ ನಂತರ ಪತ್ತೆ ಇಲ್ಲ. ಕೂಡಲೇ ಆರೋಪಿಯನ್ನು ಬಂಧಿಸಿ ಮಗುವನ್ನು ಹುಡುಕಿಕೊಡಿ ಎಂದಿದ್ದರು. ಈ ಬಗ್ಗೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಈ ಬಗ್ಗೆ ತಾಲೂಕು ಹಾಗೂ ತಮಿಳುನಾಡಿನ ಗಡಿ ಪೊಲೀಸ್ ಠಾಣೆಗಳಲ್ಲಿ ಮಾಹಿತಿ ಸಹ ನೀಡಲಾಗಿತ್ತು. ಭಾನುವಾರದಂದು ತಮಿಳುನಾಡಿನ ಥಳಿ ಬಳಿಯ ವ್ಯಾಪನಹಳ್ಳಿ ವ್ಯಾಪ್ತಿಯ ಪತ್ತೂರು ಅರಣ್ಯ ಪ್ರದೇಶದ ಬಂಡೆಕಲ್ಲಿನ ಮೇಲೆ ಇಬ್ಬರ ಶವ ಕಂಡು ಬಂದಿದೆ. ಶವಗಳ ಸಮೀಪವೇ ಆರೋಪಿಯ ಮೋಟಾರ್ ಬೈಕ್ ಸಿಕ್ಕಿದ್ದು, ಬೈಕ್ನಲ್ಲೇ ಇಲ್ಲಿಗೆ ಬಂದು ಊಟ ಮಾಡಿರುವ ಕುರುಹು ಇದೆ ಎನ್ನಲಾಗಿದೆ.
ಸ್ಥಳಕ್ಕೆ ಸಮೀಪವಾಗಿ ಕಣಿವೆ ಬಸವೇಶ್ವರ ದೇವಾಲಯ ಜಾತ್ರೆ ನಡೆಯುತ್ತಿದ್ದು, ಅಲ್ಲಿ ಊಟ ತಂದು ವಿಷ ಬೆರಿಸಿ ಮಗುವಿಗೆ ತಿನ್ನಿಸಿ, ನಂತರ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಸಂಬಂಧವಿಲ್ಲದ ಮಗುವಿನೊಂದಿಗೆ ತಾನೂ ಸಾಯಬೇಕಾದರೆ ಮಗುವಿನೊಂದಿಗೆ ಪರಾರಿಯಾಗಲು ಸಹಕರಿಸಿದ ವ್ಯಕ್ತಿಗಳೇ ಇಬ್ಬರಿಗೂ ವಿಷಯ ಊಟ ನೀಡಿ ಕೊಲೆ ಮಾಡಿರಬಹುದು ಎಂಬು ಇನ್ನೊಂದು ವಾದ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ. ಪೊಲೀಸ್ ತನಿಖೆಯಿಂದಲ್ಲೇ ಮಾತ್ರ ಸಾವಿನ ರಹಸ್ಯ ಹೊರಬರಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

