ಕೋಲಾರ

ಕೂಡಲೇ ಪರಿಹಾರ ನೀಡಿ

Published On :

ಕೋಲಾರ: ಕಾಲುಬಾಯಿಯಿಂದ ಸಾವನ್ನಪ್ಪಿರುವ ಜಾನುವಾರುಗಳ ಮಾಲೀಕರಿಗೆ ಸರ್ಕಾರ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕೆಂದು ಜಿಲ್ಲಾ ಹಾಲು ಉತ್ಪಾದಕರ ಹಿತರಕ್ಷಣಾ ಸಮಿತಿಯ ಗೌರವ ಅಧ್ಯಕ್ಷ ಉರಿಗಲಿ ರುದ್ರಸ್ವಾಮಿ, ಪ್ರ. ಕಾರ್ಯದರ್ಶಿ ಅಬ್ಬಣಿ ಶಂಕರ್ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಕಾಲುಬಾಯಿ ಜ್ವರದಿಂದ ಲಕ್ಷಾಂತರ ರು. ಮೌಲ್ಯದ ಸಾವಿರಾರು ಸಂಖ್ಯೆಯ ಜಾನುವಾರುಗಳು ಸಾವನ್ನಪ್ಪಿದೆ. ಇದರಿಂದಾಗಿ ಜಾನುವಾರುಗಳನ್ನೇ ಅವಲಂಬಿಸಿ ಜೀವನೋಪಾಯ ಕಂಡು ಕೊಂಡಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.  ಪಶುಸಂಗೋಪನಾ ಇಲಾಖೆಯ ಮತ್ತು ಕೋಲಾರ - ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವತಿಯಿಂದ ಕಾಲು ಬಾಯಿ ಜ್ವರದಿಂದ ಬಳಲುತ್ತಿರುವ ಜಾನುವಾರುಗಳಿಗೆ ಲಸಿಕೆ ಹಾಕುತ್ತಿರುವ ಕ್ರಮವು ಅವೈಜ್ಞಾನಿಕತೆಯಿಂದ ಕೂಡಿದೆ. ಲಸಿಕೆ ಹಾಕುವ ಸಂದರ್ಭದಲ್ಲಿ ಒಂದೇ ನೀಡಲ್ (ಇಂಜಕ್ಷನ್ನಿಂದ ಹಲವಾರು ಜಾನುವಾರುಗಳಿಗೆ ಲಸಿಕೆ ಹಾಕುತ್ತಿದ್ದ ಹಿನ್ನಲೆಯಲ್ಲಿ ಕಾಲುಬಾಯಿ ಜ್ವರ ಹಬ್ಬಿದೆ.
ಕಾಲುಬಾಯಿ ಜ್ವರ ಬಂದಿರುವಂತಹ ಹಸುಗಳಿಗೆ  ಲಸಿಕೆ ಬಳಿಸಿದ  ನೀಡಲ್ನಿಂದ ಕಾಲುಬಾಯಿ ಜ್ವರ ಬಾರದೆ ಇರುವ ರಾಸುಗಳಿಗೆ ಮುಂಜಾಗ್ರತ ಕ್ರಮವಾಗಿ ಹಾಕುತ್ತಿದ್ದ ಲಸಿಕೆಗೂ ಇದೇ ನೀಡಲ್ನ್ನೇ  ಬಳಸಿದ್ದರಿಂದ ಕಾಲುಬಾಯಿ ಜ್ವರ ಮತ್ತಷ್ಟು ಹರಡಲು ಕಾರಣವಾಯಿತು. ಇಲಾಖೆಗೆ ತಡವಾಗಿ ಜ್ಞಾನೋದಯವಾಗಿ ಒಂದು ಹಸುವಿಗೆ ಒಂದೇ ಸೂಜಿಯನ್ನೇ  ಬಳಸುತ್ತಿದೆ. ಈ ಮೊದಲೇ ಮುಂಜಾಗ್ರತ ಕ್ರಮ ಕೈ ಗೊಂಡಿದ್ದರೆ. ಕಾಲುಬಾಯಿ ಜ್ವರ ಹರಡುವಿಕೆಯನ್ನು  ಸ್ವಲ್ಪ ಮಟ್ಟಿಗಾದರೂ ತಡೆಗಟ್ಟ ಬಹುದಾಗಿತ್ತು ಎಂದಿದ್ದಾರೆ.
ಸೀಮೆ ಹಸುಗಳಿಗೆ ಎಲ್ಲಾ ರೈತರು ವಿಮೆ ಕಟ್ಟಿರುವುದಿಲ್ಲ. ಕಟ್ಟಿರುವವರಿಗೂ ಸಹ ಸೀಮೆ ಹಸುವಿನ ಬೆಲೆಗೆ ತಕ್ಕಂತೆ ಪರಿಹಾರವು ನೀಡುತ್ತಿಲ್ಲ.  ಸೀಮೆ ಹಸುವಿನ ಮೌಲ್ಯವು ಲಕ್ಷಾಂತರ ರು. ಇದ್ದರೂ  ವಿಮಾ ಯೋಜನೆಯಲ್ಲಿ ಗರಿಷ್ಠ ಪರಿಹಾರ ನೀಡುತ್ತಿರುವುದರಿಂದ ಸೀಮೆ ಹಸುವಿನ ಮಾಲೀಕನಿಗೆ  ಸಾಲದ ಸಂಕಷ್ಟಕ್ಕೆ ಸಿಲುಕಿ ದಿಕ್ಕು ತೋಚದಂತಾಗಿ ಆತ್ಮಹತ್ಯೆಯಂತಹ ಚಿಂತನೆಗೆ ಒಳಗಾಗುವಂತಾಗಿದೆ.
ಸರ್ಕಾರ ಮಧ್ಯ ಪ್ರವೇಶಿಸಿ ಕಾಲುಬಾಯಿ ಜ್ವರದಿಂದ ಸಾವನ್ನಪ್ಪಿರುವ  ಸೀಮೆ ಹಸುವಿನ  ಮಾಲೀಕರಿಗೆ   ಗರಿಷ್ಠ ಮಟ್ಟದ ಪರಿಹಾರ ನೀಡಬೇಕೆಂದು ತಿಳಿಸಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.