ಕೋಲಾರ

ಬೇಯಿಸದ ಆಹಾರ ಸೇವನೆಯಿಂದ ಉತ್ತಮ ಪೌಷ್ಟಿಕತೆ

Published On :

ಚಿಂತಾಮಣಿ: ಗರ್ಭಿಣಿಯರು, ಬಾಣಂತಿಯರು ಹಾಗೂ ಕಿಶೋರಿಯರಿಗೆ ಪೌಷ್ಠಿಕ ಆಹಾರದಡಿ ಬೇಯಿಸದೆ ತಯಾರಿಸುವ ಆಹಾರದಲ್ಲಿ ಉತ್ತಮ ಪೋಷಕಾಂಶಗಳು ಲಭಿಸುತ್ತವೆ ಎಂದು ತಾಲೂಕಿನ ವೈದ್ಯಾಧಿಕಾರಿ ವಾಸೀಮ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ಒಲೆಯಿಲ್ಲದ ಅಡಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೌಷ್ಠಿಕ ಆಹಾರದಲ್ಲಿ ಬೇಯಿಸದೆ ತಯಾರಿಸುವ ಆಹಾರಗಳಾದ ತರಕಾರಿ ಸಾಲಾಡ್, ಹಣ್ಣಿನ ಸಾಲಾಡ್, ಹಣ್ಣಿನ ಜ್ಯೂಸ್, ತರಕಾರಿ ಜೂಸ್ ವಿವಿಧ ಸೊಪ್ಪು ಸೇವಿಸುವುದರಿಂದ ಮಕ್ಕಳು ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಉತ್ತಮವಾಗುತ್ತದೆ ಎಂದರು.
ವೆಂಕಟನಾರಾಯಣಮ್ಮ ಮಾತನಾಡಿ, ಮಕ್ಕಳ ತೂಕ, ಎತ್ತರ ಹಿಮೋಗ್ಲೋಬಿನ್ ಅಂಶ ಹೆಚ್ಚಾಗಿರುತ್ತದೆ. ಇದರಿಂದ ರಕ್ತ ಹೀನತೆ ತಡೆಯಬಹುದು ಎಂದರು. ಆರೋಗ್ಯ ಇಲಾಖೆಯ ಲಿಲ್ಲಿ ವಿಕ್ಟೋರಿಯಾ, ಅಂಗನವಾಡಿ ಕಾರ್ಯಕರ್ತೆಯರಾದ ರೋಜಾರಮಣಿ, ಗಾಯತ್ರಿದೇವಿ, ಸುಜಾತ ಹಾಗೂ ಜಬೀನ್ ತಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.