ಶಾಲೆ ಅಭಿವೃದ್ಧಿಗೆ ಪಣ ತೊಟ್ಟ ಆದರ್ಶ ಶಿಕ್ಷಕ
ಬಂಗಾರಪೇಟೆ: ಹಲವು ದಶಕಗಳಿಂದ ಮೂಲ ಸೌಲಭ್ಯಗಳಲ್ಲಿದೆ ಸೊರಗಿದ್ದ ಸರ್ಕಾರಿ ಶಾಲೆ ಅಭಿವೃದ್ಧಿಗೆ ಸ್ವಂತ ಹಣದಿಂದ ತಾನು ಪಾಠ ಮಾಡುವ ಶಾಲೆಯನ್ನು ಮಾದರಿ ಶಾಲೆಯಾಗಿ ಮಾಡಿ ಗ್ರಾಮಸ್ಥರಿಂದ ಮೆಚ್ಚಿಗೆಗಳಿಸಿದ ಅಪರೂಪದ ಶಿಕ್ಷರೊಬ್ಬರು ಇಲ್ಲಿದ್ದಾರೆ.
ತಾಲೂಕಿನ ಗಡಿ ಭಾಗದ ಯಲುವಗುಳಿ ಗ್ರಾಮದಲ್ಲಿ ಶಾಲಾಭಿವೃದ್ಧಿ ಸಮಿತಿ, ಶಿಕ್ಷಣ ಇಲಾಖೆಯಾಗಲಿ ಅವ್ಯವಸ್ಥೆಯಿಂದ ಕೂಡಿದ್ದ ಈ ಶಾಲೆ ಅಭಿವೃದ್ಧಿಗೆ ಸ್ಪಂದಿಸಿಲ್ಲ. ಅವ್ಯವಸ್ಥೆಯಲ್ಲೇ ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳುವಂತಾಗಿತ್ತು. ಪಟ್ಟಣದ ನಿವಾಸಿ ರವೀಂದ್ರ ಎಂಬ ಶಿಕ್ಷಕ ಸದರಿ ಶಾಲೆಗೆ ವರ್ಗಾವಣೆಗೊಂಡಾಗ ಶಾಲೆಯನ್ನು ನೋಡಿ ಅಚ್ಚರಿಗೊಂಡರು. ಮಳೆ ಬಂದರೆ ಕಟ್ಟಡ ಸೋರುವುದು, ಮಕ್ಕಳಿಗೆ ಕೂರಲು ಆಸನಗಳಿಲ್ಲ ನೆಲದ ಮೇಲೆ ಕೂರಬೇಕು, ಬಣ್ಣ ಕಿತ್ತೋಗಿರುವ ಗೋಡೆಗಳು, ಇದು ಶಾಲೆಯೇ ಎಂಬ ಅನುಮಾನ ಅವರನ್ನು ಕಾಡಿತ್ತು.
ಸಂಬಳಕ್ಕೆ ಕೆಲಸ ಮಾಡಲು ಒಪ್ಪದೆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಹಾಗೂ ಅಧುನಿಕ ಸೌಲಭ್ಯಕಲ್ಪಿಸಲು ಪಣ ತೊಟ್ಟು ಹಲವು ದಾನಿಗಳನ್ನು, ಗ್ರಾಮಸ್ಥರನ್ನು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಶಾಲೆಗೆ ಮೋಕ್ಷ ನೀಡುವಂತೆ ಕೋರಿದರು. ಆದರೆ ಯಾರೂ ಇವರ ಬೇಡಿಕೆಗೆ ಸ್ಪಂದಿಸಲಿಲ್ಲ. ಆದ್ದರಿಂದ ಶಿಕ್ಷಕರೇ ತಮ್ಮ ಸಂಬಳದಲ್ಲಿ ಸುಮಾರು 4ಲಕ್ಷ ರುಪಾಯಿ ವೆಚ್ಚದಲ್ಲಿ ಶಾಲೆಗೆ ಹೊಸ ರೂಪ ನೀಡಿದ್ದಾರೆ. ಶಾಲೆ ಸತ್ತಲೂ ಕಾಂಪೌಂಡ್ ಹಾಕಿಸಿ, ಗಾಂಧಿ ಪ್ರತಿಮೆ ಸ್ಥಾಪಿಸಿ ಅದಕ್ಕೆ ಸುಂದರ ಮಂಟಪ ನಿರ್ಮಿಸಿದ್ದಾರೆ. ಈ ಬೆಳವಣಿಗೆ ನಂತರ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಳವಾಗಿದೆ.
ಆದರೆ ಇಂತಹ ಶಿಕ್ಷಕನನ್ನು ಇಲಾಖೆ ಗುರುತಿಸದೆ ಕಡೆಗಣಿಸಿರುವುದು ಅವರಲ್ಲಿ ಬೇಸರ ಮೂಡಿಸಿದೆ. ಇಲಾಖೆ ಇನ್ನಾದರು ಶಿಕ್ಷಕ ರವೀಂದ್ರ ಅವರ ಸಾಧನೆ ಗುರುತಿಸುವ ಮೂಲಕ ಇತರೆ ಶಿಕ್ಷಕರಿಗೆ ಸ್ಪೂರ್ತಿಯಾಗುವಂತೆ ಮಾಡಬೇಕೆಂಬುದು ಶಾಲಾ ಮಕ್ಕಳ ಆಸೆಯಾಗಿದೆ.
-ಕೆ. ರಮೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

