ಕೋಲಾರ

ಡಿಎಸ್‌ಎಸ್‌ನಿಂದ ತಮಟೆ ಚಳವಳಿ

Published On :

ಗೌರಿಬಿದನೂರು: ತಾಲೂಕು ಕಚೇರಿ ಆವರಣದಲ್ಲಿ ಕಳೆದ 4 ದಿನದಿಂದ ದಲಿತರ ಹಕ್ಕೊತ್ತಾಯಗಳಿಗೆ ಒತ್ತಾಯಿಸಿ ಅನಿರ್ದಿಷ್ಟ ಧರಣಿ ಹಮ್ಮಿಕೊಂಡಿದ್ದು, ತಾಲೂಕು ಆಡಳಿತ ಗಮನ ನೀಡದ ಕಾರಣ ತಮಟೆ ಚಳುವಳಿ ಮೂಲಕ ಪ್ರತಿಭಟನೆ ಮುಂದುವರೆಸುವುದಾಗಿ ಸಿ.ಜಿ. ಗಂಗಪ್ಪ ತಿಳಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಸಿ.ಜಿ. ಗಂಗಪ್ಪ ಮಾತನಾಡಿ, ಹಲವಾರು ವರ್ಷಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಜಲ ತಜ್ಞ ನಾರಾಯಣ ಸ್ವಾಮಿ, ಬಿ.ವಿ. ಆನಂದ್, ಪಿ.ನರಸಿಂಮೂರ್ತಿ, ಜಿ. ಲಕ್ಷ್ಮೀನಾರಾಯಣ, ಜಿ. ಬಾಲಪ್ಪ, ನರಸಿಂಹಯ್ಯ ಇದ್ದರು.
ರೈತರ ಬೇಡಿಕೆ ಈಡೇರಿಸಲು ಒತ್ತಾಯ
ಕೋಲಾರ: ಜಿಲ್ಲೆಯಲ್ಲಿ ರೈತ ಸಮಸ್ಯೆ ಹೆಚ್ಚುತ್ತಿದ್ದು ರಾಜ್ಯ ಸರ್ಕಾರ ರೈತರನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾದಿಂದ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಕಾಲುಬಾಯಿ ರೋಗದಿಂದ ನಿಧನ ಹೊಂದಿರುವ ಜಾನುವಾರುಗಳಿಗೆ ಸರ್ಕಾರ ಘೋಷಿಸಿರುವಂತೆ, ಕೂಡಲೇ ರು. 25 ಸಾವಿರ ಪರಿಹಾರ ನೀಡಬೇಕು, ಜಿಲ್ಲೆಯಲ್ಲಿ ರಾಜ ಕಾಲುವೆಗಳು ಮತ್ತು ಕೆರೆಗಳು ಒತ್ತುವರಿ ಅಗಿದ್ದು, ಕೂಡಲೇ ತೆರವುಗೊಳಿಸಿ ರಾಜ ಕಾಲುವೆಗಳನ್ನು ದುರಸ್ತಿ ಮಾಡಿ ಕೆರೆಗಳಿಗೆ ನೀರು ಬರುವಂತೆ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ವೈ. ಸಂಪಂಗಿ, ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಕೆಂಬೋಡಿ ನಾರಾಯಣಸ್ವಾಮಿ, ಸಾಹುಕಾರ್ ಶಂಕರಪ್ಪ, ಮಂಜುನಾಥ್ ಗೌಡ. ಎಲ್. ಚಂದ್ರಶೇಖರ್, ಮಮತ, ರತ್ನಮ್ಮ, ಜಯಲಕ್ಷ್ಮಮ್ಮ, ಎಂ. ಮಂಜುನಾಥ್, ಮು. ರಾಘವೇಂದ್ರ, ಶಕುಂತಲಾ, ರವೀಂದ್ರ, ನಾಗರಾಜ್ ಇದ್ದರು.
ಇಂದು ಕೋಲಾರ ಜಿಲ್ಲೆಗೆ ಸಿಎಂ ಭೇಟಿ
ಕೋಲಾರ: ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಸೇರಿದ ಅಚ್ಚನಹಳ್ಳಿಯಲ್ಲಿ ಸ್ಕ್ಯಾನಿಯಾ ಕಮರ್ಷಿಯಲ್ ವೆಹಿಕಲ್ಸ್ ಪ್ರೈವೇಟ್ ಕಂಪನಿ ಸ್ಥಾಪಿಸಿರುವ ಸ್ಕ್ಯಾನಿಯಾ ವಾಣಿಜ್ಯ ವಾಹನ ಘಟಕದ ಉದ್ಘಾಟನಾ ಸಮಾರಂಭ ಮಂಗಳವಾರ ಬೆಳಿಗ್ಗೆ 11.45ಕ್ಕೆ ಹಮ್ಮಿಕೊಂಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೂತನ ಘಟಕ ಉದ್ಘಾಟಿಸಲಿದ್ದಾರೆ.
ಇಂದು ಪತ್ರಕರ್ತರಿಗೆ ತರಬೇತಿ ಶಿಬಿರ
ಕೋಲಾರ: ಕರ್ನಾಟಕ ಮಾದ್ಯಮ ಅಕಾಡೆಮಿಯಿಂದ ಮಂಗಳವಾರ ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಗ್ರಾಮಾಂತರ ಪತ್ರಕರ್ತರಿಗೆ ಆಧುನಿಕ ತಂತ್ರಜ್ಞಾನ ಬಳಕೆಯ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಾಸಕ ಕೆ.ಆರ್. ರಮೇಶ್ ಕುಮಾರ್ ಅವರು ಮಾದ್ಯಮ ಮತ್ತು ರಾಜಕಾರಣ ವಿಷಯದ ಬಗ್ಗೆ ಮಾತನಾಡಲಿದ್ದಾರೆ. ನ್ಯಾಯಾಂಗ ಮತ್ತು ಮಾಧ್ಯಮ ವರದಿ ತಯಾರಿಕೆಯ ಬಗ್ಗೆ ಹಿರಿಯ ನ್ಯಾಯವಾದಿ ಪ್ರಮಿಳಾ ನೇಸರ್ಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ನಿವಾಸ್ ಸಪಟ್ ಅಪರಾಧ ವರದಿಗಾರಿಕೆ, ಜಿಪಂ ಸಿಇಓ ಎಸ್.ಎಂ. ಝುಲ್ಫೀಖಾರ್ ಉಲ್ಲಾ ಗ್ರಾಮೀಣ ಅಭಿವೃದ್ಧಿ , ಪತ್ರಕರ್ತ ಇ.ಎಸ್. ಸುಧೀಂದ್ರ ಪ್ರಸಾದ್ ಅಂತರ್ಜಾಲ ಮಾಹಿತಿ ಹಾಗೂ ಎಸ್.ಆರ್. ಆರಾಧ್ಯ ವಿದ್ಮುನ್ಮಾನ ಮಾಧ್ಯಮ ಕುರಿತು ವಿಷಯ ಮಂಡಿಸಲಿದ್ದಾರೆ.
ಮಧ್ಯಾಹ್ನ 3.30ಕ್ಕೆ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಅರ್ಹತಾ ಪತ್ರ ವಿತರಣೆ ಜೊತೆಗೆ ಮಾಧ್ಯಮ ಮತ್ತು ಅಭಿವೃದ್ಧಿ ಕುರಿತು ಮಾತನಾಡುವರು. ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಮೊದಲಿಯಾರ್ ಮುಖ್ಯ ಅತಿಥಿಯಾಗಿ ಭಾಗವಹಿಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.