ಕೋಲಾರ

4ನೇ ದಿನಕ್ಕೆ ಕಾಲಿಟ್ಟ ದಲಿತರ ಧರಣಿ

Published On :

ಗುಡಿಬಂಡೆ: ತಮ್ಮ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಸಂಸ ತಾಲೂಕು ಕೇಂದ್ರ ಗುಡಿಬಂಡೆಯಲ್ಲಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಕಾರ್ಯಕ್ರಮ ಸೋಮವಾರ ಸಹ ಮುಂದುವರೆದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕ ಸಿ.ಜಿ. ಗಂಗಪ್ಪ ದಲಿತರ ನ್ಯಾಯಬದ್ಧ ಸಮಸ್ಯೆಗಳ ಇತ್ಯರ್ಥಕ್ಕಾಗಿ ಹಲವಾರು ವರ್ಷಗಳಿಂದ ನಡೆಸುತ್ತಿರುವ ಹೋರಾಟಕ್ಕೆ ನೌಕರಶಾಹಿ ಸ್ಪಂದಿಸದೇ ಜಾಣ ಕಿವುಡು ಪ್ರದರ್ಶಿಸುತ್ತಿದೆ. ಆಡಳಿತ ನಡೆಸುತ್ತಿರುವ ಅಧಿಕಾರಿಶಾಹಿ ಸಂಪೂರ್ಣವಾಗಿ ಜಾತಿ ವಿರೋಧಿಯಾಗಿದ್ದು, ಭ್ರಷ್ಟಾಚಾರದಲ್ಲಿ ಮುಂದಾಗಿದೆ. ಕೆಳ ಹಂತದ ನೌಕರರು ಹಾಗೂ ಇವರ ಮೇಲಾಧಿಕಾರಿಗಳು ದಲಿತ ವಿರೋಧಿಗಳಾಗಿರುವ ಕಾರಣ ದಲಿತರಿಗೆ ಸಾಮಾಜಿಕ ನ್ಯಾಯ ಮರೀಚಿಕೆಯಾಗಿದೆ.
ಬಡತನ, ಹಸಿವು, ಅನಾರೋಗ್ಯದಂತಹ ಸಾಮಾಜಿಕ ಸಮಸ್ಯೆಗಳು ದಲಿತ ಸಮುದಾಯವನ್ನು ಅಧಃಪತನಕ್ಕೆ ತಳ್ಳುತ್ತಿದೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಾದ ಗ್ರಾ.ಪಂ.ಗಳು ನಿಯಮಗಳನ್ನು ಗಾಳಿಗೆ ತೂರಿ ದಲಿತ ವಿರೋಧಿ ವಾತವರಣವನ್ನು ನಿರ್ಮಿಸುತ್ತಿದೆ. ಜನಪ್ರತಿನಿಧಿಗಳು ಸಮುದಾಯದ ಬಗ್ಗೆ ಕಾಳಜಿ ತೋರದೆ ಒಬ್ಬಗೆ ನೀತಿ ಅನುಸರಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ದಲಿತರ ಸಮಸ್ಯೆಗಳನ್ನು ಬಗೆಹರಿಸುವ ತನಕ ಜಿಲ್ಲಾದ್ಯಂತ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಅನಿರ್ದಿಷ್ಟ ಧರಣಿ ಆರಂಭಿಸಲಾಗಿದೆ ಎಂದರು.
ತಾಲೂಕು ಸಂಚಾಲಕ ಕೆ.ಎಸ್. ನರಸಿಂಹಪ್ಪ ಬೇಡಿಕೆಗಳ ಬಗ್ಗೆ ವಿವರಿಸಿ ಬಗರ್‌ಹುಕುಂ, ಅಕ್ರಮ ಸಕ್ರಮ ಮತ್ತು ಭೂನ್ಯಾಯ ಮಂಡಲಿ ವ್ಯಾಪ್ತಿಗೆ ಬರುವ ದಲಿತರ ಜಮೀನುಗಳ ಸಮಸ್ಯೆ ಇತ್ಯರ್ಥ ಸ.ನಂ 30, 295ಣ3, 199, 2 ಹಾಗೂ ಸರ್ವೇ ನಂ. 76ರ ಸರ್ಕಾರಿ ಭೂಮಿಯನ್ನು ಸಾರ್ವಜನಿಕ ಉಪಯೋಗಕ್ಕೆ ಮೀಸಲಿಡುವುದು, ಪ.ಜಾತಿ ಮತ್ತು ಪಂಗಡ ದವರಿಗೆ ರುದ್ರಭೂಮಿ ಮಂಜೂರು, ಬ್ರಾಹ್ಮಣರಹಳ್ಳಿ, ಪಸುಪಲೋಡು, ಕೊಂಡರೆಡ್ಡಿಹಳ್ಳಿ, ದಪ್ಪರ್ತಿ ಮುಂತಾದ ಗ್ರಾಮಗಳ ದಲಿತರಿಗೆ ಉಚಿತ ನಿವೇಶನ ಮಂಜೂರು ಸೇರಿದಂತೆ ಸಂಘಟನೆ ಹಲವಾರು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ ಎಂದು ತಿಳಿಸಿದರು.ಧರಣಿಯಲ್ಲಿ ತಾಲೂಕು ಸಂಚಾಕಲರಾದ ಆದಿನಾರಾಯಣ, ನಂದಿಶ್, ಗಂಗುಲಪ್ಪ, ಖಜಾಂಚಿ ನಾಗರಾಜು, ಆದೆಪ್ಪ, ಆದಿನಾರಾಯಣ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.