ಅಭಿನಂದನಾ ಸಮಾರಂಭ
ಗೌರಿಬಿದನೂರು: ತಾಲೂಕಿನ ಹುಣಸೇನಹಳ್ಳಿ ಗ್ರಾಮ ಸಾಹಿತ್ಯ ಸಂಗೀತ ಕ್ಷೇತ್ರದಲ್ಲಿ ಸುಮಾರು 800 ವರ್ಷ ಹಿನ್ನೆಲೆ ಹೊಂದಿರುವ ಗ್ರಾಮವಾಗಿದೆ ಎಂದು ವಿಧಾನ ಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಶ್ಲಾಘಿಸಿದರು.
ಸಪ್ಪಲಮ್ಮದೇವಿ ಕಲ್ಯಾಣ ಮಂಟಪ ಉದ್ಘಾಟನೆ ಮತ್ತು ನಾಗದೇವತೆ 2ನೇ ವಾರ್ಷಿಕೋತ್ಸವ ಧ್ವನಿ ಸುರುಳಿ ಬಿಡುಗಡೆ ಮತ್ತು ಗಣ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಹುಣಸೇನಹಳ್ಳಿ ಗ್ರಾಮದ ವಂಶಸ್ಥರು ಸಂಗೀತ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಘನತೆ ಇವರಿಗೆ ಸಲ್ಲುತ್ತದೆ. ಮೈಸೂರು ಮಹಾರಾಜರ ಸಂಸ್ಥಾನದಲ್ಲಿ ವಿಜಯನಗರ ರಾಜರ ಆಸ್ಥಾನದಲ್ಲಿ ಸಂಗೀತವನ್ನು ನುಡಿಸಿ ರಾಜಮಹಾರಾಜರಿಂದ ಮನ್ನಣೆ ಪಡೆದಂತ ವಂಶಸ್ಥರು ಇವರು ಎಂದರು.
ಜಿಪಂ ಸದಸ್ಯ ಕೇಶವರೆಡ್ಡಿ ಮಾತನಾಡಿ, ನಿವೇಶನ ಒದಗಿಸಿದರೆ ಕೊಠಡಿಗೆ ಪಂಚಾಯಿತಿ ಮತ್ತು ಶಾಸಕರ ಸಹಾಯ ನಿಧಿಯಿಂದ ಹಣ ನೀಡುವುದಾಗಿ ಭರವಸೆ ಕೊಟ್ಟರು. ಕಾರ್ಯಕ್ರಮದಲ್ಲಿ ಗಣ್ಯರಿಗೆ ಅಭಿನಂದನೆ ಹಮ್ಮಿಕೊಳ್ಳಲಾಗಿತ್ತು. ಜಿಪಂ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ತಾಪಂ ಅಧ್ಯಕ್ಷ ನಿರಂಜನ್, ಹನುಂತರೆಡ್ಡಿ, ಪ್ರಕಾಶ್ರೆಡ್ಡಿ, ಬೊಮ್ಮಣ್ಣ, ಪ್ರೇಮಸೇಲ್ವರಾಜ್, ಪದ್ಮಾವತಮ್ಮ, ಅಂಜಿನಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

