'ವೀರತ್ವ, ತ್ಯಾಗ ಎರಡಕ್ಕೂ ಕುರುಬ ಸಮಾಜ ಪ್ರತೀಕ'
ಚಿಕ್ಕಬಳ್ಳಾಪುರ: ವೀರತ್ವ ಮತ್ತು ತ್ಯಾಗ ಎರಡಕ್ಕೂ ಕುರುಬ ಸಮಾಜ ಪ್ರತೀಕ ಎಂದು ಶಾಸಕ ಡಾ.ಕೆ. ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಲಕ್ಕಮ್ಮ ದೊಡ್ಡ ಮುನಿಯಪ್ಪ ಕಲ್ಯಾಣ ಮಂಟಪದಲ್ಲಿ ತಾಲೂಕು ಕುರುಬ ಸಮಾಜದ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ವೀರತ್ವದ ಪ್ರತೀಕವಾದರೆ, ಭಕ್ತ ಕನಕನಕದಾಸರು ತ್ಯಾಗದ ಸಂಕೇತ. ಹೀಗೆ ನಾಡಿಗಾಗಿ ದುಡಿದ ಹಲವು ನಾಯಕರನ್ನು ನೀಡಿದ ಕೀರ್ತಿ ಕುರುಬ ಸಮಾಜಕ್ಕೆ ಸಲ್ಲಬೇಕೆಂದರು.
ರಾಜ್ಯ ಕಂಡ ಅಪರೂಪದ ರಾಜಕಾರಣಿ, ನೇರ ನುಡಿಯ ನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಕುರುಬ ಸಮಾಜಕ್ಕೆ ಸೇರಿದವರು. ಇದೇ ರೀತಿ ಅನೇಕ ನಾಯಕರು ನಮ್ಮ ಕಣ್ಣಮುಂದೆಯೇ ಇದ್ದಾರೆ. ಇಂದು ಶೈಕ್ಷಣಿಕ, ಸಾಮಾಜಿಕ, ರಾಜಕೀಯ ರಂಗಗಳಲ್ಲಿ ಉನ್ನತ ಸ್ಥಾನಗಳಿಗೇರಿದ್ದಾರೆ ಎಂದು ಸಾಧನೆಗೈದ ಸಮಾಜದ ವಿವಿಧ ನಾಯಕರನ್ನು ಸ್ಮರಿಸಿದರು.
ನನ್ನ ಈ ಗೆಲುವಿನಲ್ಲಿ ನಿಮ್ಮಗಳ ಪಾತ್ರ ಹಿರಿದು. ನನ್ನ ಗೆಲುವಿಗಾಗಿ ಶ್ರಮಿಸಿರುವ ನಿಮಗೆ ನಾನು ಚಿರಋಣಿ ಎಂದ ಶಾಸಕರು, ಸಂಘಕ್ಕಾಗಿ ಕಟ್ಟಡ ನಿರ್ಮಿಸಿ ಕೊಡುವಂತೆ ಮನವಿಯನ್ನು ಈಡೇರಿಸಲು ಮಾಡಿರುವಿರಿ. ಇದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಇನ್ನು ವಿದ್ಯಾರ್ಥಿ ನಿಲಯ ಸ್ಥಾಪನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸುತ್ತೇನೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

