ನಿವೃತ್ತ ನೌಕರರಿಗಾಗಿ ವಿವಿಧ ಸ್ಪರ್ಧೆಗಳು
ಚಿಂತಾಮಣಿ: ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ವತಿಯಿಂದ ನಿವೃತ್ತ ನೌಕರರಿಗಾಗಿ ಹಾಗೂ ಹಿರಿಯ ನಾಗರಿಕರಿಗಾಗಿ ಇಲ್ಲಿನ ಸರ್ಕಾರಿ ಬಾಲಕರ ಪ್ರೌಢಶಾಲೆ ಮೈದಾನದಲ್ಲಿ ಆಯೋಜಿಸಿದ್ದ ಆಟೋಟ ಸ್ಪರ್ಧೆಗಳು ಯಶಸ್ವಿಯಾಗಿ ನಡೆದವು.
ಈ ಸ್ಪರ್ಧೆಗಳಲ್ಲಿ ನಿವೃತ್ತರು ಹಾಗೂ ಹಿರಿಯ ನಾಗರಿಕರು ಇಳಿ ವಯಸ್ಸಿನಲ್ಲಿಯೂ ಉತ್ಸಾಹದಿಂದ ಪಾಲ್ಗೊಂಡು ಯುವಕರಿಗಿಂತ ತಾವೇನು ಕಡಿಮೆಯಿಲ್ಲವೆಂಬುದನ್ನು ತೋರಿಸಿಕೊಟ್ಟರು. ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ.ಎನ್. ರಮಣಾರೆಡ್ಡಿ ಗುಂಡು ಎಸೆಯುವುದರ ಮೂಲಕ ಸ್ಪರ್ಧೆಗೆ ಚಾಲನೆ ನೀಡಿ, ಕ್ರೀಡೆಗಳು ಆರೋಗ್ಯವನ್ನು ಮತ್ತು ಆನಂದವನ್ನು ನೀಡಬಲ್ಲವೆಂದರು. ಹಿರಿಯ ನಾಗರಿಕರು ಸರಿಯಾದ ಆಹಾರ ಪದ್ಧತಿ ಅನುಸರಿಸುವುದರ ಜೊತೆಗೆ ಸೂಕ್ತವ್ಯಾಯಾಮಗಳಿಂದ ಆರೋಗ್ಯವನ್ನು ಕಾಪಾಡಿಕೊಂಡು ಸಧೃಡರಾಗಬೇಕೆಂದು ಹೇಳಿದರು.
ಸಂಘದ ಅಧ್ಯಕ್ಷ ಕಾಗತಿ ವಿ. ವೆಂಕಟರತ್ನಂ ಮಾತನಾಡಿ, ಹಿರಿಯ ನಾಗರಿಕರು ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಅವರಲ್ಲಿ ನವಚೈತನ್ಯ ಮೂಡುವುದಲ್ಲದೆ ಕೀಳರಿಮೆ ದೂರವಾಗಿ ಮನೋಸ್ಥೈರ್ಯ ಮೂಡುವುದೆಂದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ವೀಪ್ಪರೆಡ್ಡಿ, ಹಿರಿಯ ನಾಗರಿಕರ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಕೆ.ಎಸ್. ಅಪ್ಪಾಜಿರೆಡ್ಡಿ, ಉಪಾಧ್ಯಕ್ಷ ಬೊಗ್ಗರಂ ರಾಮಾಂಜನೇಯಗುಪ್ತ, ನಿವೃತ್ತ ಉಪನ್ಯಾಸಕ ಶ್ರೀರಾಮಮೂರ್ತಿ, ವೆಂಕಟರಮಣ, ಹನುಮಂತಪ್ಪ ಹಾಗೂ ದೈಹಿಕ ಶಿಕ್ಷಕ ಲಕ್ಷ್ಮಣರೆಡ್ಡಿ ಮತ್ತು ಅಶ್ವತ್ಥನಾರಾಯಣ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

