ವಿದ್ಯುತ್ ಕಣ್ಣಾಮುಚ್ಚಾಲೆ ತಪ್ಪಿಸಿ...
ಚಿಕ್ಕಬಳ್ಳಾಪುರ: ಪದೇ ಪದೇ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳುವ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸಾರ್ವಜನಿಕರು ಬೆಸ್ಕಾಂ ಇಲಾಖೆಯನ್ನು ಒತ್ತಾಯಿಸಿದರು.
ನಗರದ ವಾಪಸಂದ್ರದಲ್ಲಿರುವ ಕೆಇಬಿ ಸಭಾಂಗಣದಲ್ಲಿ ಬೆಸ್ಕಾಂ ಹಾಗೂ ಬೆಂಗಳೂರು ಕ್ರಿಯೇಟ್ ಸಂಸ್ಥೆ, ಚಿಂತಾಮಣಿ ಜನ ಜಾಗೃತಿ ವೇದಿಕೆ ಮತ್ತು ಮಹಿಳಾ ಜಾಗೃತಿ ಶ್ರೇಯೋಭಿವೃದ್ಧಿ ಟ್ರಸ್ಟ್ನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿದ್ಯುತ್ ಗ್ರಾಹಕರ ಸಭೆಯಲ್ಲಿ, ವಿವಿಧೆಡೆ ಎದುರಾಗುತ್ತಿರುವ ವಿದ್ಯುತ್ತಿನ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಗಮನ ಸೆಳೆದರು.
ಹಲವೆಡೆ ವಿದ್ಯುತ್ ಕಂಬಗಳು ಶಿಥಿಲಾವಸ್ಥೆಯಲ್ಲಿವೆ.ಇನ್ನೂ ಹಲವೆಡೆ ವಿದ್ಯುತ್ ಕಂಬಗಳನ್ನು ಅಳವಡಿಸುವ ಕಾಮಗಾರಿ ನಡೆಯುತ್ತಿದೆ ಎಂಬ ನೆಪದಲ್ಲಿ ವಿದ್ಯುತ್ತಿನ ಸರಬರಾಜನ್ನು ಹೆಚ್ಚಿನ ಸಮಯ ಕಡಿತಗೊಳಿಸಲಾಗುತ್ತಿದೆ.ಅಲ್ಲದೇ ವಿದ್ಯುತ್ ಪದೇ ಪದೇ ಹೋಗಿ ಬರುತ್ತಿದ್ದು ಹೈವೋಲ್ಟೇಜಿನಿಂದ ಮನೆಯಲ್ಲಿ ವಿದ್ಯುತ್ ಉಪಕರಣಗಳು ಹಾನಿಗೊಳ್ಳುತ್ತಿವೆ ಎಂದು ತಿಳಿಸಿದ ಸಾರ್ವಜನಿಕರು, ಗ್ರಾಹಕರು ದೂರು ನೀಡಿದ ತಕ್ಷಣ ಸಿಬ್ಬಂದಿ ಬಂದು ಸಮಸ್ಯೆಯನ್ನು ಸರಿಪಡಿಸಲು ಮೊದಲ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.
ಬೆಸ್ಕಾಂ ಜಾಗೃತ ದಳದ ಆರಕ್ಷಕ ವೃತ್ತ ನೀರಿಕ್ಷಕ ಕೆ.ಎನ್. ರಮೇಶ್ ಮಾತನಾಡಿ, ಬೆಸ್ಕಾಂ ಗ್ರಾಹಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು ದೂರಿಗೆ ತ್ವರಿತವಾಗಿ ಸ್ಪಂದಿಸುವ ಕೆಲಸವಾಗುತ್ತಿದೆ.ಆದರೆ,ಮಾಹಿತಿಯ ಕೊರತೆಯಿಂದ ಕೆಲ ಗೊಂದಲಗಳು ಉಂಟಾಗುತ್ತಿದ್ದು ಇದನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.
ವಿದ್ಯುತ್ ಸಮಸ್ಯೆ ಉಂಟಾದಾಗ ತ್ವರಿತವಾಗಿ ರಿಪೇರಿಯಾಗದಿದ್ದ ಪಕ್ಷದಲ್ಲಿ ತಮ್ಮ ಮೊಬೈಲ್ 9448779344 ಅನ್ನು ಸಂಪರ್ಕಿಸಬಹುದು. ಇಲ್ಲವೇ ವರ್ಷದ ಎಲ್ಲಾ ದಿನಗಳಲ್ಲೂ 24 ಗಂಟೆ ಕಾರ್ಯ ನಿರ್ವವಹಿಸುವ ಸಹಾಯವಾಣಿ ಕೇಂದ್ರ, ದೂ.ಸಂಖ್ಯೆ 080-22873333 ಕ್ಕೆ ಕರೆ ಮಾಡಿ ತಿಳಿಸಬಹುದು. ಆಗ ಕೂಡಲೇ ಸಂಬಂಧ ಪಟ್ಟ ಉಪವಿಬಾಗದ ಅಧಿಕಾರಿಗಳಿಗೆ ದೂರು ರವಾನೆಯಾಗುತ್ತದೆ. ಜನರ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಬೆಂಗಳೂರು ಗ್ರಾಹಕ ಸಂಪರ್ಕ ಬೆಸ್ಕಾಂ ಕೇಂದ್ರದ ಮುಖ್ಯ ಪ್ರಬಂಧಕಿ ಎನ್.ಜನಂತಿ ತಿಳಿಸಿದರು.
ಸಭೆಯಲ್ಲಿ ಬೆಂಗಳೂರಿನ ಕ್ರಿಯೆಟ್ ಮುರಳಿದರ್, ಚಿಂತಾಮಣಿಯ ಜನಜಾಗೃತಿಯ ವೇದಿಕೆಯ ಜಿ.ವಿ.ಮಂಜುನಾಥ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

